ಮರಕುಂಬಿ ಪ್ರಕರಣದ ತೀರ್ಪು ಬೆನ್ನಲ್ಲೇ ಎದೆ ನೋವು.. ಅಪರಾಧಿ ಹೃದಯಾಘಾತಕ್ಕೆ ಸಾ*ವು

author-image
AS Harshith
Updated On
ಮರಕುಂಬಿ ಪ್ರಕರಣದ ತೀರ್ಪು ಬೆನ್ನಲ್ಲೇ ಎದೆ ನೋವು.. ಅಪರಾಧಿ ಹೃದಯಾಘಾತಕ್ಕೆ ಸಾ*ವು
Advertisment
  • ಮರಕುಂಬಿ ಪ್ರಕರಣದ ಅಪರಾಧಿಗೆ ಹೃದಯಾಘಾತ
  • ಎದೆ ನೋವು ಎಂದು ಆಸ್ಪತ್ರೆ ದಾಖಲಾದ ವ್ಯಕ್ತಿ ಸಾವು
  • 98 ಮಂದಿ ಮೇಲೆ ಕೋರ್ಟ್​​ ಜೀವಾವಧಿ ಶಿಕ್ಷೆ ನೀಡಿದೆ

ಕೊಪ್ಪಳ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲೆ ಹಲ್ಲೆ ಪ್ರಕರಣ ಸಂಬಂಧಪಟ್ಟಂತೆ ಕಠಿಣ ಶಿಕ್ಷೆಗೆ ಒಳಗಾದ 3 ಅಪರಾಧಿಗಳು ಪೈಕಿ ಓರ್ವ ಸಾವನ್ನಪಿದ್ದಾನೆ. ಮೃತಪಟ್ಟ ಅಪರಾಧಿಯನ್ನು ರಾಮಣ್ಣ ಎಲ್ ಭೋವಿ (39) ಎಂದು ಗುರುತಿಸಲಾಗಿದೆ.

ಮರಕುಂಬಿ ಪ್ರಕರಣ ಸಂಬಂಧಿಸಿದಂತೆ 101 ಅಪರಾಧಿಗಳ ಪೈಕಿ 98 ಮಂದಿ ಮೇಲೆ ಕೋರ್ಟ್​​ ಜೀವಾವಧಿ ಶಿಕ್ಷೆ ನೀಡಿದೆ. ಅದರಲ್ಲಿ ಮೂವರಿಗೆ ಕೊಪ್ಪಳ ಕೋರ್ಟ್​ ಕಠಿಣ ಶಿಕ್ಷೆ ವಿಧಿಸಿದೆ. ಈ ಪ್ರಕರಣ ಸಂಬಂಧ ನ್ಯಾಯಧೀಶರು ತೀರ್ಪು ಪ್ರಕಟಿಸಿದ ನಂತರ ಅಪರಾಧಿ ರಾಮಣ್ಣ ಎಲ್ ಭೋವಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ರಾತ್ರಿ 9:00 ಗಂಟೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅಪರಾಧಿ ಮೃತಪಟ್ಟಿದ್ದಾನೆಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

publive-image

ಏನಿದು ಮರಕುಂಬಿ ಪ್ರಕರಣ?​

ಆಗಸ್ಟ್ 28, 2014ರಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಸವರ್ಣೀಯರು, ದಲಿತರ ಮೇಲೆ ಹಲ್ಲೆ ನಡೆಸಿ, ಮನೆಗಳನ್ನ ಧ್ವಂಸಗೊಳಿಸಲಾಗಿತ್ತು. ದಲಿತರ ಮೇಲಿನ ಈ ದೌರ್ಜನ್ಯ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಗಂಗಾವತಿ ಪೊಲೀಸ್ ಠಾಣೆಯಲ್ಲಿ 117 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಬರೋಬ್ಬರಿ ಒಂಭತ್ತು ವರ್ಷಗಳ ನಂತರ ಜಿಲ್ಲಾ ಸತ್ರ ನ್ಯಾಯಧೀಶರು ತೀರ್ಪು ಪ್ರಕಟಿಸಿದ್ದಾರೆ. ಇತಿಹಾಸದಲ್ಲಿಯೇ ದೊಡ್ಡ ತೀರ್ಪು ನೀಡಿ ಕೊಪ್ಪಳ ಕೋರ್ಟ್​ ಆದೇಶ ಹೊರಡಿಸಿದೆ.

publive-image

ಇದನ್ನೂ ಓದಿ: ಕೊಪ್ಪಳದಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್​; ಏನಿದು ಮರಕುಂಬಿ ಪ್ರಕರಣ? ಇಲ್ಲಿದೆ ಮಾಹಿತಿ​

ಅಟ್ರಾಸಿಟಿ ಕೇಸ್‌ನಲ್ಲಿ 101 ಜನರ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ತಲಾ 5 ಸಾವಿರ ರೂಪಾಯಿ ದಂಡವನ್ನ ಕೊಪ್ಪಳದ ಸತ್ರ ನ್ಯಾಯಾಲಯ ವಿಧಿಸಿ ಆದೇಶ ಹೊರಡಿಸಿದೆ. ಉಳಿದ ಮೂವರಿಗೆ ಕಠಿಣ ಶಿಕ್ಷೆ, ತಲಾ 2 ಸಾವಿರ ದಂಡ ವಿಧಿಸಿದೆ. 117 ಮಂದಿಯ ಪೈಕಿ 16 ಆರೋಪಿಗಳು ಮೃತಪಟ್ಟಿದ್ದಾರೆ. 101 ಆರೋಪಿಗಳ ವಿರುದ್ಧ ಇರುವ ದಾಖಲೆ ಪರಿಶೀಲನೆ ಮಾಡಲಾಗಿದ್ದು. ಅಕ್ಟೋಬರ್ 21ರಂದು ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದೆ. ನ್ಯಾಯಧೀಶರಾದ ಚಂದ್ರಶೇಖರ್‌ರಿಂದ ಮಹತ್ವದ ತೀರ್ಪು ನೀಡಿದ್ದಾರೆ. ತಡರಾತ್ರಿ ಬಿಗಿ ಬಂದೋಬಸ್ತ್​ನಲ್ಲಿ ಎಲ್ಲಾ ಅಪರಾಧಿಗಳನ್ನ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment