/newsfirstlive-kannada/media/post_attachments/wp-content/uploads/2024/12/BELAGAVI_MES.jpg)
ಗಡಿ ವಿಚಾರವಾಗಿ ಮಹಾರಾಷ್ಟ್ರದ ಶಿವಸೇನೆ ಪುಂಡರು ಉದ್ಧಟತನ ಪ್ರದರ್ಶಿಸಿದ್ದಾರೆ. ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ದರ್ಶನಕ್ಕೆ ಹೋಗಿದ್ದ ಬಿಜೆಪಿ ಶಾಸಕರನ್ನ ತಡೆದು ಕಿರಿಕ್ ಮಾಡಿದ್ದಾರೆ. ಈ ಕುರಿತ ರಿಪೋರ್ಟ್ ಇಲ್ಲಿದೆ.
ಎಂಇಎಸ್ ಹೋರಾಟ ಅಸ್ತಿತ್ವ ಕಳೆದುಕೊಂಡು ಸತ್ತು ನರಕ ಸೇರುತ್ತೋ, ಸ್ವರ್ಗ ಸೇರುತ್ತೋ ಗೊತ್ತಿಲ್ಲ. ಆದ್ರೆ, ಆಗಾಗ ಈ ಪುಂಡರ ಪಟಾಲಂ ಕಿರಿಕ್ ಮಾಡಿದ್ದಿದೆ. ಕುಂದಾನಗರಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭ ಆಗುತ್ತಿದ್ದಂತೆ ನಾಯಿಕೊಡೆಗಳಂತೆ ಚಿಗುರುವ ಈ ಮರಾಠ ಪ್ರೇಮಿಗಳು, ಆ ಬಳಿಕ ಸುದೀರ್ಘ ಕುಂಭಕರ್ಣನಂತೆ ನಿದ್ರೆಗೆ ಜಾರುವ ಕಯಾಲಿ ಇಟ್ಟುಕೊಂಡಿವೆ.
ಕೊಲ್ಹಾಪುರದಲ್ಲಿ ಉದ್ಧವ್ ಠಾಕ್ರೆ ತಂಡದ ಉದ್ಧಟತನ!
ಮೊನ್ನೆ ಸೋಮವಾರ ಅಧಿವೇಶನ ಆರಂಭ ದಿನ ಹಮ್ಮಿಕೊಂಡಿದ್ದ ಮಹಾ ಮೇಳಾವ ಠುಸ್ ಪಟಾಕಿ ಆಗಿದೆ. ಅಧಿವೇಶನದ ವೇಳೆ ಬಾಲ ಬಿಚ್ಚಿದ ಎಂಇಎಸ್ ಮುಖಂಡರಿಗೆ ಬಿಗ್ ಶಾಕ್ ಕೊಟ್ಟ ಪೊಲೀಸರು ಹೆಡೆಮುರಿ ಕಟ್ಟಿದ್ದರು. ಸಂಭಾಜಿ ವೃತ್ತದ ಬಳಿ ಮಹಾಮೇಳಾವ್ ನಡೆಸುತ್ತಿದ್ದ ಎಂಇಎಸ್ ನಾಡದ್ರೋಹಿಗಳನ್ನ ವಶಕ್ಕೆ ಪಡೆದು ಬಸ್ ಹತ್ತಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದ ಈ ಸಂಖ್ಯೆ ಈಗ ಕೇವಲ 20-30ಕ್ಕೆ ಇಳಿದಿದೆ. ಆ ನಂಬರ್ಗಳು ಬಾಲಕಟ್ ಮಾಡುವ ಕೆಲಸ ಆಗಿದೆ.
ದೇವರ ದರ್ಶನಕ್ಕೆ ಹೋದ ಶಾಸಕರ ತಡೆದು ‘ಉದ್ಧಟತನ’!
ನೆರೆಯ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ದರ್ಶನಕ್ಕೆ ತೆರಳಿದ್ದ ಕರ್ನಾಟಕದ ಬಿಜೆಪಿ ಶಾಸಕರ ಮೇಲೆ ಪುಂಡಾಟ ನಡೆದಿದೆ. ಮಾಜಿ ಸಚಿವ ಪ್ರಭು ಚವ್ಹಾಣ್, ಸುನಿಲ್ ಕುಮಾರ್ ಸೇರಿ ಇತರರನ್ನ ಶಿವಸೇನಾ ಪುಂಡರು ಅಡ್ಡಿಪಡಿಸಿದ್ದಾರೆ. ಕೊಲ್ಹಾಪುರದ ಶಿವಸೇನೆ ಮುಖಂಡ ವಿಜಯ್ ದೇವಣೆ ನೇತೃತ್ವದ ಪುಂಡರು, ದೇವಸ್ಥಾನದ ಬಾಗಿಲು ಬಳಿಯೇ ಮುತ್ತಿಗೆ ಹಾಕಿದ್ದಾರೆ.
ಇದನ್ನೂ ಓದಿ:ಸುವರ್ಣಸೌಧದ ಮುಂದೆ ಸಾಲು ಸಾಲು ಪ್ರತಿಭಟನೆಗಳು.. ಮುತ್ತಿಗೆ ಹಾಕಲು ಪಂಚಮಸಾಲಿ ಯತ್ನ
ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ ನಡೀತಿದೆ. ಡಿಸೆಂಬರ್ 9 ರಂದು ಮಹಾ ಮೇಳಾವ್ ನಿರ್ಬಂಧಿಸಲಾಗಿದೆ. ಮರಾಠರ ಪ್ರತಿಭಟನೆ ಹಕ್ಕನ್ನ ಕಿತ್ತುಕೊಳ್ಳಲಾಗಿದೆ ಅಂತ ಕಿರುಚಾಡಿದ್ದಾರೆ. ಕರ್ನಾಟಕಕ್ಕೆ ನಮಗೆ ಪ್ರವೇಶ ಇಲ್ಲ ಎಂದರೆ ನೀವ್ಯಾಕೆ ನಮ್ಮ ದೇವಸ್ಥಾನಕ್ಕೆ ಬರುತ್ತೀರಿ ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ಸಮಜಾಯಿಷಿ ನೀಡಿದ ಕರ್ನಾಟಕ ಶಾಸಕರು, ಬಳಿಕ ದೇವಿ ದರ್ಶನ ಪಡೆದು ಮರಳಿದ್ದಾರೆ.
ಈ ವೇಳೆ ಮಹಾರಾಷ್ಟ್ರದ ನೆಲದಲ್ಲಿ ಮಾಜಿ ಸಚಿವ ಪ್ರಭು ಚವ್ಹಾಣ್ ಉತ್ತರ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಎಂಇಎಸ್ ಪ್ರತಿಭಟನೆಗೆ ಬ್ಯಾನ್ ಮಾಡಲಾಗಿದೆ. ನಗರದಲ್ಲಿ ನಿಷೇಧಾಜ್ಞೆ ಜಾರಿ ಇದೆ. ಹಾಗಾಗಿ ಪ್ರತಿಭಟನೆಗೆ ಅವಕಾಶ ನೀಡಲಾಗಿಲ್ಲ ಎಂದು ಅವರ ಭಾಷೆಯಲ್ಲಿ ಉತ್ತರಿಸಿ ಮರಳಿದ್ದಾರೆ. ಬೆಳಗಾವಿ ಕೇಂದ್ರಾಡಳಿತ ಮಾಡಬೇಕು ಅಂತ ಮೊನ್ನೆ ಉಂಡಾಡಿ ಗುಂಡ ಚೋಟಾ ಠಾಕ್ರೆ ಹೇಳಿಕೆ ನೀಡಿ ಚೈಲ್ಡಿಶ್ ಪಟ್ಟ ಗಿಟ್ಟಿಸಿದ್ದರು. ಈ ಬೆನ್ನಲ್ಲೆ ನಿರುದ್ಯೋಗಿ ಉದ್ಧವ್ ಪಡೆ ಹುಚ್ಚಾಟ ನಡೆಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ