ಆಸ್ತಿಯ ವಿಚಾರದಲ್ಲಿ ಮನಸ್ತಾಪ, ವಿದ್ಯಾರ್ಥಿಗಳಿಗೆ ಗೊಂದಲದ ದಿನ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಕುಟುಂಬದವರನ್ನು ಎಲ್ಲಾ ರೀತಿಯಿಂದ ಕಾಪಾಡಬೇಕಾಗಲಿದೆ
  • ದಿನ ಆರಂಭ ಚೆನ್ನಾಗಿದ್ದರೂ ಸೋಮಾರಿತನ ಕಾಡಬಹುದು
  • ವಿಚಾರ ಸಂಗ್ರಹದ ಕೊರತೆಯಿಂದ ಸಮಸ್ಯೆಯಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ನಿರ್ಧಾರ ಮಾಡಿದ ಕೆಲಸಗಳನ್ನು ಮತ್ತೆ ಪರಿಶೀಲಿಸಿ
  • ಬೆಳಗಿನ ಸಮಯ ಚೆನ್ನಾಗಿರಲಿದೆ
  • ವ್ಯಾವಹಾರಿಕ ಲಾಭವಿದೆ ಮೋಸ ಹೋಗಬಹುದು
  • ಸಮಾಜಮುಖಿ ಕೆಲಸದಲ್ಲಿ ಗೌರವ ಸಿಗಲಿದೆ
  • ಜಾಣ್ಮೆಯಿಂದ ವರ್ತಿಸಿ ಯಶಸ್ಸಿದೆ
  • ಕುಟುಂಬದವರನ್ನು ಎಲ್ಲಾ ರೀತಿಯಿಂದ ಕಾಪಾಡಬೇಕಾಗಲಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ವೃಷಭ

publive-image

  • ಆಸ್ತಿಯ ವಿಚಾರದಲ್ಲಿ ಅನುಕೂಲವಾಗಬಹುದು
  • ಮಕ್ಕಳ ಪ್ರಗತಿಯಿಂದ ಉತ್ಸುಕರಾಗಿರುತ್ತೀರಿ
  • ವಿದ್ಯಾರ್ಥಿಗಳಿಗೆ ಶುಭವಿದೆ
  • ಪ್ರೇಮಿಗಳಿಗೆ ಕೆಲವು ಸವಾಲುಗಳು ಕಾಣಬಹುದು
  • ಸ್ನೇಹಿತರು ಬೆಂಬಲ ನೀಡದೆ ನಿರಾಸೆಯಾಗಬಹುದು
  • ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಹಿನ್ನಡೆಯಾಗಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಕಾನೂನಿನ ವಿಚಾರದಲ್ಲಿ ವ್ಯತ್ಯಾಸದ ಸಂಭವ
  • ಬೇರೆಯವರು ಮೋಸ ಮಾಡಬಹುದು ಎಚ್ಚರಿಕೆವಹಿಸಿ
  • ಮನೆಯ ವಾತಾವರಣ ಉತ್ತಮವಾಗಿರಲಿದೆ
  • ನಿಮ್ಮ ನಡುವಳಿಕೆಯಿಂದ ಜನರು ಕೋಪಗೊಳ್ಳಬಹುದು
  • ವಿದ್ಯಾರ್ಥಿಗಳಿಗೆ ಗೊಂದಲದ ದಿನ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಕೆಲಸದ ಸ್ಥಳದಲ್ಲಿ ಹೊಸಬರ ಪರಿಚಯವಾಗುವುದರಿಂದ ಅನುಕೂಲವಿದೆ
  • ಮಕ್ಕಳ ಜೊತೆ ಉತ್ತಮ ಬಾಂಧವ್ಯವಿರಲಿದೆ
  • ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯಬಹುದು
  • ನಿಮ್ಮೆಲ್ಲ ಕೆಲಸಗಳು ಸಮಯಕ್ಕೆ ಸರಿಯಾಗಬಹುದು
  • ಆರೋಗ್ಯ ಸಮಸ್ಯೆಗೆ ಪರಿಹಾರವಿದೆ
  • ವ್ಯಾಪಾರ ವ್ಯವಹಾರದಲ್ಲಿ ಅನುಕೂಲವಿದೆ
  • ದುರ್ಗಾರಾಧನೆ ಮಾಡಿ

ಸಿಂಹ

publive-image

  • ಮನೆಯ ವಿಚಾರಕ್ಕೆ ಸಮಯ ನೀಡಿ
  • ವೈಯಕ್ತಿಕ ಚಿಂತನೆಗಳಿಗೆ ಅವಕಾಶವಿದೆ
  • ದೇಹಶ್ರಮ ಮಾಡಿಕೊಳ್ಳಬೇಡಿ
  • ಉನ್ನತ ಶಿಕ್ಷಣ ವಿಚಾರ ಚರ್ಚೆಯಾಗಬಹುದು
  • ದಿನ ಆರಂಭ ಚೆನ್ನಾಗಿದ್ದರೂ ಸೋಮಾರಿತನ ಕಾಡಬಹುದು
  • ಹಳೆಯ ಸ್ನೇಹಿತರ ಜೊತೆ ವಿವಾದ ಬೇಸರವಾಗಬಹುದು
  • ಆಂಜನೇಯ ಆಜಾಡ್ಯನನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ವಿಚಾರ ಸಂಗ್ರಹದ ಕೊರತೆಯಿಂದ ಸಮಸ್ಯೆಯಾಗಬಹುದು
  • ಧನಾತ್ಮಕವಾಗಿ ಚಿಂತಿಸಿ ನಿರ್ಧರಿಸಿ
  • ವೈವಾಹಿಕ ಜೀವನದಲ್ಲಿ ಅತೃಪ್ತಿಯ ಭಾವ
  • ನಿರುದ್ಯೋಗಿಗಳ ಶ್ರಮಕ್ಕೆ ಬೆಲೆ ಕಡಿಮೆ
  • ನಿಮ್ಮ ಕೆಲಸದಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ
  • ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಲಿದೆ
  • ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಆಸ್ತಿಯ ವಿಚಾರದಲ್ಲಿ ಉತ್ತಮ ವಾರ್ತೆ ಸಿಗಲಿದೆ
  • ದುರಾಸೆಗೆ ಒಪ್ಪದ ಮನಸ್ಸು ಗಟ್ಟಿಯಾಗಬೇಕು
  • ತುಂಬಾ ಪರಿಶ್ರಮವಿದೆ ಅನುಕೂಲವಿದೆ
  • ಅನಗತ್ಯ ವಿಚಾರಗಳು ಮುನ್ನಲೆಗೆ ಬರಲಿದೆ
  • ವೃತ್ತಿಯಲ್ಲಿ ನಿರೀಕ್ಷಿಸಿದ ಲಾಭವಿಲ್ಲ
  • ಕುಟುಂಬದ ಖರ್ಚು ಅಧಿಕವಾಗಬಹುದು
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ವ್ಯವಹಾರದಲ್ಲಿ ಬದಲಾವಣೆಗೆ ಶುಭವಿದೆ
  • ವಿವಾಹಿತರ ಸಮಸ್ಯೆ ಹೆಚ್ಚಾಗಬಹುದು
  • ವಿವಾದಗಳನ್ನು ಮಾತಿನಿಂದಲೇ ಬಗೆಹರಿಸಿಕೊಳ್ಳಿ
  • ಮನೆಯ ವಾತಾವರಣ ಚೆನ್ನಾಗಿರಲಿದೆ
  • ಸಂತೋಷ ಮತ್ತು ಉತ್ಸಾಹಕ್ಕೆ ಅವಕಾಶವಿದೆ
  • ಋಣಾತ್ಮಕ ಆಲೋಚನೆಗಳನ್ನು ದೂರ ಮಾಡಿ
  • ಲಕ್ಷ್ಮಿನಾರಾಯಣ ಸ್ತೋತ್ರ ಪಠಿಸಿ

ಧನಸ್ಸು

publive-image

  • ವ್ಯಕ್ತಿತ್ವ ವಿಕಸನದ ಬಗ್ಗೆ ಚಿಂತಿಸಿ
  • ವ್ಯಾಪಾರದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಬೇಕು
  • ಆತುರದ ನಿರ್ಧಾರ ತೊಂದರೆಗೆ ಕಾರಣ
  • ಏಕಪಕ್ಷೀಯ ಮಾತುಗಾರರನ್ನು ನಂಬಬೇಡಿ
  • ತಾಳ್ಮೆಯಿಂದ ವರ್ತಿಸಿ ಶುಭವಿದೆ
  • ಅನಗತ್ಯ ಗೊಂದಲಗಳಿಗೆ ಅವಕಾಶ ಬೇಡ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಇಂದು ಹೊಸ ಕೆಲಸಗಳ ಆರಂಭ ಬೇಡ
  • ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಡೆತಡೆಗಳು ಬೇಡ
  • ಪ್ರೀತಿ ಪ್ರೇಮಿಗಳ ವಿಚಾರದಲ್ಲಿ ಎಚ್ಚರಿಕೆವಹಿಸಿ
  • ಕಚೇರಿ ಅಥವಾ ವೃತ್ತಿಯಲ್ಲಿ ಜನ ಹೊಗಳುತ್ತಾರೆ
  • ಬೇರೆಯವರ ಮಾತಿಗೆ ಮರುಳಾಗಬೇಡಿ
  • ವಾಹನದಿಂದ ತೊಂದರೆಯಾಗಬಹುದು
  • ದುರ್ಗಾ ಆರಾಧನೆ ಮಾಡಿ

ಕುಂಭ

publive-image

  • ಸ್ಥಗಿತಗೊಂಡ ಕೆಲಸವಿದ್ದರೆ ಪುನರಾರಂಭಿಸಿ
  • ಕೆಲಸದ ಗುಣಮಟ್ಟ ಕಾಪಾಡಿಕೊಳ್ಳಿ
  • ಸುಖ ದುಃಖಗಳನ್ನು ಮನೆಯಲ್ಲಿ ಹಂಚಿಕೊಳ್ಳಬಹುದು
  • ಆಲಸ್ಯದಿಂದ ವಂಚಿತರಾಗುವ ಸಾಧ್ಯತೆ ಇರಲಿದೆ
  • ವೃತ್ತಿ ಜೀವನ ಚೆನ್ನಾಗಿದ್ದರೂ ಆಸಕ್ತಿಯಿಲ್ಲ
  • ಉನ್ನತ ಅಧಿಕಾರಿಗಳ ಜೊತೆ ವಿವಾದ ಬೇಡ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ 

publive-image

  • ಹಳೆಯ ಸ್ನೇಹಿತರು ಸಹಾಯ ಮಾಡಬಹುದು
  • ಕಾನೂನು ಹೋರಾಟದಲ್ಲಿ ಅಪಜಯವಾಗಬಹುದು
  • ವೈವಾಹಿಕ ಜೀವನದಲ್ಲಿ ತುಂಬಾ ಗೊಂದಲಗಳಿರಬಹುದು
  • ಬೇರೆಯವರ ಮಾತನ್ನು ಕೇಳದೆ ನಿಮಗೆ ತೊಂದರೆಯಾಗಬಹುದು
  • ಆಸ್ತಿಯ ವಿಚಾರದಲ್ಲಿ ನಿಮ್ಮದೇ ನಿರ್ಧಾರ ಬೇಡ
  • ಹಣಕಾಸು ವಿಚಾರದಲ್ಲಿ ಅನುಕೂಲವಿದೆ
  • ಲಕ್ಷ್ಮಿನಾರಾಯಣ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Advertisment