/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ಮನಸ್ಸಿನ ಗೊಂದಲಗಳನ್ನು ದೂರ ಮಾಡಿ
- ನಿಮ್ಮ ಆಲೋಚನೆಗಳು ಸಮತೋಲನದಲ್ಲಿರಲಿ
- ಕೆಲಸದ ಬಗ್ಗೆ ಆಳವಾದ ಗಮನವಿರಲಿ
- ಪ್ರತಿಸ್ಪರ್ಧಿಗಳಿಂದ ವಿರೋಧಿಗಳಿಂದ ಸವಾಲುಗಳು ಬರಬಹುದು
- ಸಮಾಜದಲ್ಲಿ ಪ್ರಭಾವ ಕಡಿಮೆಯಾಗಬಹುದು
- ಅನಗತ್ಯ ಆಲೋಚನೆಗಳು ದೂರವಾದರೆ ಶುಭವಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ವ್ಯಾವಹಾರಿಕವಾಗಿ ಕಷ್ಟವಿರಬಹುದು
- ಖರ್ಚಿನ ಬಗ್ಗೆ ಚಿಂತಿಸಿ
- ಅನಗತ್ಯ ಪ್ರಯಾಣಗಳು ತೊಂದರೆಯಾಗಬಹುದು
- ನಿಗೂಢ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇರುವುದು
- ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳಿರಬಹುದು
- ಪ್ರಮುಖ ಕೆಲಸಗಳಲ್ಲಿ ತಾತ್ಸಾರ, ಬೇಸರ ಆಗಬಹುದು
- ನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ
ಮಿಥುನ
- ಕೆಲಸದ ಗುಣಮಟ್ಟಕ್ಕೆ ಗಮನಹರಿಸಿ
- ವ್ಯಾಪಾರ ಅಥವಾ ವ್ಯವಹಾರದಲ್ಲಿ ದೊಡ್ಡ ಯೋಜನೆಗಳಿರಲಿ
- ಹೊಸ ವೈವಾಹಿಕ ಸಂಬಂಧಗಳಲ್ಲಿ ಬಿರುಕು ಸಾಧ್ಯತೆ
- ನಿಮ್ಮ ಉತ್ತರ ಬೇರೆಯವರ ಮೇಲೆ ಹೇರಬೇಡಿ
- ಪ್ರೇಮಿಗಳಿಗೆ ಸಂಕಷ್ಟದ ದಿನ
- ವಿದ್ಯಾರ್ಥಿಗಳು ತುಂಬಾ ಗೊಂದಲಕ್ಕೆ ಸಿಲುಕಿ ಕೊಳ್ಳುವ ದಿನ
- ಸರಸ್ವತಿ ಶಾರದೆಯನ್ನು ಆರಾಧನೆ ಮಾಡಿ
ಕಟಕ
- ನಕಾರಾತ್ಮಕ ಚಿಂತನೆಗಳೇ ಹೆಚ್ಚು ಕಾಡಬಹುದು
- ಮನೆಯಲ್ಲಿ ಅಥವಾ ಮನದಲ್ಲಿ ಭಯದ ವಾತಾವರಣವಿರಲಿದೆ
- ಹಿರಿಯರ ಆರೋಗ್ಯ ಹದಗೆಡಬಹುದು
- ಆರ್ಥಿಕವಾಗಿ ಸಮಯ ಚೆನ್ನಾಗಿರುವುದಿಲ್ಲ
- ವಿದ್ಯಾರ್ಥಿಗಳಿಗೆ ಮಾನಸಿಕ ಚಾಂಚಲ್ಯ
- ಯೋಗ್ಯ ವ್ಯಕ್ತಿಯ ಮಾರ್ಗದರ್ಶನ ಪಡೆಯಿರಿ ಸಮಾಧಾನ ಆಗಲಿದೆ
- ಸುದರ್ಶನನನ್ನು ಪ್ರಾರ್ಥನೆ ಮಾಡಿ
ಸಿಂಹ
- ವೃತ್ತಿ , ನೌಕರಿ ಬಗ್ಗೆ ಚಿಂತೆಯ ದಿನ
- ಮೇಲಾಧಿಕಾರಿಗಳಿಂದ ತೊಂದರೆಯಾಗಬಹುದು
- ಉದ್ಯೋಗ ನಿಮಿತ್ತ ಪ್ರಯಾಣ ಅಶುಭ
- ಬೆಲೆ ಬಾಳುವ ವಸ್ತುಗಳನ್ನು ಸರಿಯಾಗಿ ಬಳಸಿ
- ಮಾನಸಿಕ ಆತಂಕ, ಭಯ ಕಾಡಬಹುದು
- ಕೆಲಸದಲ್ಲಿ ಹಿನ್ನಡೆ, ನೋವು ಉಂಟಾಗಬಹುದು
- ಶಿವರಾಧನೆ ಮಾಡಿ
ಕನ್ಯಾ
- ಹೊಸ ಯೋಜನೆಗಳಿಗೆ ಸಕಾಲವಲ್ಲ
- ಸಾಲದ ವಿಚಾರವಾಗಿ ಮನಸ್ತಾಪ ಉಂಟಾಗಲಿದೆ
- ಭವಿಷ್ಯದ ಬಗ್ಗೆ ಚಿಂತಿಸಿ
- ಮನಸ್ಸಿನಲ್ಲಿ ನಕಾರಾತ್ಮಕ ಚಿಂತನೆಗಳು ಬರಬಹುದು
- ಯೋಚಿಸದೇ ಯಾವ ಕೆಲಸವನ್ನು ಮಾಡಬೇಡಿ
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಈ ದಿನ ಅಷ್ಟೊಂದು ಶುಭವಲ್ಲ
- ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗಬಹುದು
- ಗೌರವಕ್ಕೆ ಅಥವಾ ಸ್ಥಾನಕ್ಕೆ ಧಕ್ಕೆ ಬರಬಹುದು
- ಪತಿ-ಪತ್ನಿಯರ ಭಿನ್ನಾಭಿಪ್ರಾಯ ದೂರವಾಗಲಿದೆ
- ಆರೋಗ್ಯದ ಬಗ್ಗೆ ಗಮನಿಸಿ
- ಮನೆಯಲ್ಲಿ ಸಾಯಂಕಾಲದ ಹೊತ್ತಿಗೆ ಶುಭವಾರ್ತೆ ಸಂತೋಷ ಸಿಗಲಿದೆ
- ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಸಾರ್ವಜನಿಕ ಕೆಲಸಗಳಲ್ಲಿ ಭಾಗಿಗಳಾಗಬಹುದು
- ಮಕ್ಕಳಿಂದ ಸಂತೋಷ ಸಿಗಲಿದೆ
- ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ
- ಪ್ರೇಮಿಗಳು ವಿವಾಹ ವಿಚಾರವನ್ನು ಪ್ರಸ್ತಾಪಿಸಬಹುದು
- ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿದೆ
- ವಿದ್ಯಾರ್ಥಿಗಳಿಗೆ ಸಮಾಧಾನದ ವಾತಾವರಣ ಇರಲಿದೆ
- ವೃದ್ಧರಿಗೆ ಹಣ್ಣು ದಾನ ಮಾಡಿ
ಧನಸ್ಸು
- ಆತುರದ ನಿರ್ಧಾರದಿಂದ ನಷ್ಟ ಆಗಬಹುದು
- ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಗ್ರಹಗತಿ ದೃಷ್ಟಿಯಿಂದ ಮಾತೃ ಶಾಪ ಕಾಡುವ ದಿನ
- ನಿಮ್ಮ ಮಾತಿನ ಬಗ್ಗೆ ಭಿನ್ನಾಭಿಪ್ರಾಯಗಳು ಇರಲಿದೆ
- ಅನಗತ್ಯ ಹಣ ಖರ್ಚಾಗಬಹುದು
- ರೋಗಿಗಳಿಗೆ ಸಹಾಯ ಮಾಡಿ
ಮಕರ
- ಕುಟುಂಬ ಜೀವನ ಚೆನ್ನಾಗಿರಲಿದೆ
- ತುಂಬಾ ಉತ್ಸುಕರಾಗಿ ಕೆಲಸ ಮಾಡುವ ದಿನ
- ಅನಗತ್ಯ ಅಥವಾ ಅನುಚಿತ ಸಂದರ್ಭಗಳಿಂದ ಬೇಸರವಾಗಬಹುದು
- ಹಿರಿಯರ ಬೇಸರಕ್ಕೆ ಒಳಗಾಗುತ್ತೀರಿ
- ಸಂತೋಷದಿಂದ ಕಾಲ ಕಳೆಯುತ್ತೀರಿ ಆದರೆ ಭಯ ಕಾಡಬಹುದು
- ವಿಷ್ಣು ಸಹಸ್ರನಾಮವನ್ನು ಪಠಿಸಿ
ಕುಂಭ
- ವಿವಾಹ ವಿಚಾರಕ್ಕಾಗಿ ಮನಸ್ಸು ಚಂಚಲವಾಗಬಹುದು
- ಪಶ್ಚಾತ್ತಾಪ ಪಡುವ ಯಾವ ಕೆಲಸವನ್ನು ಮಾಡಬೇಡಿ
- ಮಾನಸಿಕ ದೃಢತೆ ಇರಲಿ
- ಸಮಾಜದಲ್ಲಿ ನಿಮ್ಮನ್ನು ಹಾಸ್ಯ ಅಥವಾ ಟೀಕೆ ಮಾಡಬಹುದು
- ವಾಹನ ಚಾಲನೆಯಲ್ಲಿ ಜಾಗೃತಿಯಿರಲಿ
- ದೇಹಕ್ಕೆ ತೊಂದರೆಯ ಸೂಚನೆ ಇದೆ
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ
ಮೀನ
- ದೂರದ ಸಂಬಂಧಿಗಳನ್ನು, ಸ್ನೇಹಿತರನ್ನು ಭೇಟಿಯಾಗಬಹುದು
- ಕಬ್ಬಿಣದ ವ್ಯಾಪಾರಿಗಳಿಗೆ ಅನುಕೂಲವಿದೆ
- ಜನರಿಗೆ ಸಹಾಯ ಮಾಡಲು ಒಳ್ಳೆಯ ದಿನ
- ಮನೆಯಲ್ಲಿ ಹಲವು ಭಿನ್ನಾಭಿಪ್ರಾಯಗಳು ಇರಲಿದೆ
- ಕೋಪ, ರೋಷದಿಂದ ಯಾವ ಕೆಲಸವನ್ನು ಮಾಡಬೇಡಿ
- ಮಕ್ಕಳಿಗೆ ಶುಭ ಸಂದೇಶ ಸಿಗಲಿದೆ
- ನವಗ್ರಹ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ