ಮಾರ್ಚ್ 22ಕ್ಕೆ ಅಖಂಡ ಕರ್ನಾಟಕ ಬಂದ್​ಗೆ ಕರೆ; ಬಂದ್, ಗೊಂದಲದ ಗೂಡು..!

author-image
Ganesh
Updated On
ನಾಳೆ ಓಲಾ, ಉಬರ್ ರಸ್ತೆಗೆ ಇಳಿಯಲ್ಲ.. ಕರ್ನಾಟಕ ಬಂದ್​ಗೆ ಯಾರೆಲ್ಲ ಬೆಂಬಲ ಕೊಟ್ಟವ್ರೆ..?
Advertisment
  • MES ಪುಂಡಾಟ ಖಂಡಿಸಿ ಮಾ.22ಕ್ಕೆ ಕರ್ನಾಟಕ‌ ಬಂದ್
  • ಬಂದ್​ಗೆ ಬೆಂಬಲಕ್ಕೆ ಹಲವು ಸಂಘಟನೆಗಳ ಹಿಂದೇಟು
  • ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟಗಳಿಂದ ಬೆಂಬಲ ಇಲ್ಲ

ಬೆಂಗಳೂರು: MES ಪುಂಡಾಟ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾರ್ಚ್​ 22ಕ್ಕೆ ಕರ್ನಾಟಕ‌ ಬಂದ್​ಗೆ ಕರೆ ನೀಡಿದ್ದಾರೆ.

ಆದರೆ ಬಂದ್​ಗೆ ಹಲವು ಸಂಘಟನೆಗಳು ಬೆಂಬಲ‌ ಕೊಡಲು ಹಿಂದೇಟು ಹಾಕಿವೆ. ಬಂದ್ ಇದ್ದರೂ ಒಂದು ಲಕ್ಷ ಖಾಸಗಿ ವಾಹನಗಳು ಸಂಚಾರ ಮಾಡಲಿವೆ. ಹೋರಾಟಕ್ಕೆ ಬೆಂಬಲ ಇದೆ, ಆದರೆ ಬಂದ್​ಗೆ ಬೆಂಬಲ ಇಲ್ಲ ಎಂದು ಖಾಸಗಿ ಸಾರಿಗೆ ಸಂಘಟನೆಗಳು ಹೇಳಿವೆ. ಕೇವಲ ನೈತಿಕ ಬೆಂಬಲ ನೀಡುವುದಾಗಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ತಿಳಿಸಿದೆ.

ಇದನ್ನೂ ಓದಿ: ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡೋದು ಡೌಟ್; ಬದಲಿ ಆಟಗಾರ ಯಾರು?

ಎಂಇಎಸ್ ಪುಂಡಾಟ ಖಂಡಿಸಿ ಮರಾಠರ ಗಡಿ ಭಾಗದಲ್ಲಿ ಬಂದ್ ಮಾಡಿದ್ರೆ ಸರಿ. ಅದು ಬಿಟ್ಟು ಕರ್ನಾಟಕ ಬಂದ್ ಸರಿಯಲ್ಲ ಅನ್ನೋದು ಅನೇಕರ ವಾದ. ಜೊತೆಗೆ ಮಾರ್ಚ್ 21 ರಂದು ಎಸ್​ಎಸ್ಎಲ್​ಸಿ ಹಾಗೂ ಮಾರ್ಚ್ 22 ರಂದು ಮೌಲ್ಯಾಂಕ ಪರೀಕ್ಷೆ ಇದೆ. ಎಕ್ಸಾಂ ಇರೋದ್ರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ.

ಹೋಟೆಲ್ ಅಸೋಸಿಯೇಷನ್ ಕೂಡ ಬಂದ್ ಬೆಂಬಲ ನೀಡುವ ಬಗ್ಗೆ ನಿರ್ಧಾರ ಮಾಡಿಲ್ಲ. ಹೋಟೆಲ್ ಅಸೋಸಿಯೇಷನ್ ಅಡಿಯಲ್ಲಿ 60,009 ಹೋಟೆಲ್​ಗಳಿವೆ. 60,000 ಹೋಟೆಲ್​​ಗಳಿಂದ ಬಂದ್​​ಗೆ ಬೆಂಬಲ ನೀಡುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ.

ಇದನ್ನೂ ಓದಿ: ತುಮಕೂರಲ್ಲಿ ಅಮಾನುಷ ಕೃತ್ಯ; 8 ತಿಂಗಳ ಗರ್ಭಿಣಿಯ ಜೀವ ತೆಗೆದ ಗಂಡನ ಅನುಮಾನ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment