ಮಾರ್ಚ್ 22ರ ಕರ್ನಾಟಕ ಬಂದ್‌ ದಿನ ಪರೀಕ್ಷೆ ನಡೆಯುತ್ತಾ? ಇಲ್ವಾ? ಶಿಕ್ಷಣ ಸಚಿವರು ಹೇಳಿದ್ದೇನು?

author-image
admin
Updated On
ಮಾರ್ಚ್ 22ರ ಕರ್ನಾಟಕ ಬಂದ್‌ ದಿನ ಪರೀಕ್ಷೆ ನಡೆಯುತ್ತಾ? ಇಲ್ವಾ? ಶಿಕ್ಷಣ ಸಚಿವರು ಹೇಳಿದ್ದೇನು?
Advertisment
  • ಮಾರ್ಚ್‌ 21ರಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ
  • ಮಾರ್ಚ್ 22ರಂದು 5, 6, 7 & 8ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ
  • ಪರೀಕ್ಷೆ ದಿನವೇ ಕರ್ನಾಟಕ ಬಂದ್​​ಗೆ ಕರೆ ಕೊಟ್ಟಿದ್ದಕ್ಕೆ ವ್ಯಾಪಕ ವಿರೋಧ

ಬೆಳಗಾವಿಯಲ್ಲಿ ನಡೆಯುತ್ತಿರುವ ಮರಾಠಿಗರ ಪುಂಡಾಟವನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಇದೇ ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪರೀಕ್ಷೆಯ ಸಮಯದಲ್ಲಿ ಕರ್ನಾಟಕ ಬಂದ್‌ ಘೋಷಣೆ ಮಾಡಿರೋದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಮಾರ್ಚ್‌ 21ರಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗುತ್ತಿದೆ. ಮಾರ್ಚ್ 22ರಂದು 5, 6, 7 & 8ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ದಿನವೇ ಕರ್ನಾಟಕ ಬಂದ್​​ಗೆ ಕರೆ ಕೊಟ್ಟಿದ್ದು ಸರಿಯಲ್ಲ ಎಂದು ಪೋಷಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ.

publive-image

ಪರೀಕ್ಷೆ ನಡೆಯುತ್ತಾ? ಇಲ್ವಾ?
ಪರೀಕ್ಷೆ ದಿನವೇ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಯುತ್ತಾ? ಇಲ್ವಾ ಅನ್ನೋ ಆತಂಕದಲ್ಲಿ ಪೋಷಕರು ಇದ್ದಾರೆ. ಪರೀಕ್ಷೆ ಮುಗಿದ ಮೇಲೆ ಕರ್ನಾಟಕ ಬಂದ್​​ಗೆ ಕರೆ ಕೊಡಬಹುದಿತ್ತು. ಶೈಕ್ಷಣಿಕ ವರ್ಷದ ಕೊನೆಯಲ್ಲಿ ಮಕ್ಕಳಿಗೆ ಪರೀಕ್ಷೆ ನಡೆಯುವ ಸಮಯ ಇದಾಗಿದ್ದು ಪರೀಕ್ಷೆ ದಿನವೇ ಕರ್ನಾಟಕ ಬಂದ್​​ಗೆ ಕರೆ ಕೊಟ್ಟಿದ್ದು ಸರಿಯಲ್ಲ ಎಂದು ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಂದ್ ದಿನಾಂಕ ಚೇಂಜ್ ಆಗುತ್ತಾ.. ಆಕ್ಷೇಪ ಯಾಕೆ ಗೊತ್ತಾ? 

ಕನ್ನಡ ಪರ ಸಂಘಟನೆಗಳು ‌ಕರೆ ಕೊಟ್ಟ ಬಂದ್​​ಗೆ ನಮ್ಮ ಬೆಂಬಲ ಇದೆ. ಆದ್ರೆ ಪರೀಕ್ಷೆ ‌ಮುಗಿದ ಬಳಿಕ & ಪರೀಕ್ಷೆಗೂ‌ ಮುನ್ನವೇ ಬಂದ್​ಗೆ ಮಾಡಲಿ. ಪರೀಕ್ಷಾ ದಿನದಂದೇ ಕರ್ನಾಟಕ ಬಂದ್​​ಗೆ ಕರೆ ಕೊಟ್ಟಿದ್ದು ಸರಿಯಲ್ಲ. ಮಕ್ಕಳು ಪರೀಕ್ಷಾ ತಯಾರಿ ಮಾಡಿಕೊಳ್ಳೋದನ್ನೇ ಬಿಡ್ತಾರೆ. ಮಕ್ಕಳ ಭವಿಷ್ಯದ ಜೊತೆ ಈ ರೀತಿ ಚೆಲ್ಲಾಟವಾಡುವುದು ಸರಿಯಲ್ಲ. ಬಂದ್ ದಿನಾಂಕವನ್ನು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಮನವಿಯನ್ನು ಮಾಡಲಾಗಿದೆ.

ಶಿಕ್ಷಣ ಸಚಿವರು ಏನಂದ್ರು?
ಕರ್ನಾಟಕ ಬಂದ್, ವಿದ್ಯಾರ್ಥಿಗಳ ಭವಿಷ್ಯ, ಪೋಷಕರ ಆತಂಕಕ್ಕೆ ಖುದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಪ್ರತಿಕ್ರಿಯಿಸಿದ್ದಾರೆ. ಬಂದ್​​ನಿಂದಾಗಿ ಮಕ್ಕಳಿಗೆ ಯಾವುದೇ ತೊಂದರೆ ಆಗಲ್ಲ. ತೊಂದರೆ ಆಗದಂತೆ ಹೋರಾಟಗಾರರು ಸಹಕರಿಸುತ್ತಾರೆ. ಹೋರಾಟಗಾರರಿಗೆ ಹೋರಾಟ ಮಾಡುವ ಹಕ್ಕು ಇದ್ದೇ ಇರುತ್ತೆ. ಹೋರಾಟಗಾರರಿಂದ ಮಕ್ಕಳ ಭವಿಷ್ಯಕ್ಕೆ ಅಡಚಣೆ ಆಗಲ್ಲ. ಯಾವ ಪೋಷಕರು ಸಹ ಗಾಬರಿ ಆಗುವ ಅವಶ್ಯಕತೆ ಇಲ್ಲ ಎಂದು ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

publive-image

ಕರ್ನಾಟಕ ಬಂದ್‌ಗೆ ಅಪಸ್ವರ!

ಮಾರ್ಚ್‌ 22ರ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳ ಮಧ್ಯೆ ಅಪಸ್ವರ ಕೇಳಿ ಬಂದಿದೆ. ವಾಟಾಳ್ ನಾಗರಾಜ್‌ ಅವರು ಯಾವುದೇ ಕಾರಣಕ್ಕೂ ದಿನಾಂಕ ಬದಲಾಗಲ್ಲ ಎಂದು ಹೇಳಿದ್ರೆ, ಕರ್ನಾಟಕ ಬಂದ್ ಬಗ್ಗೆ ಇನ್ನೂ ‌ತೀರ್ಮಾನ ಮಾಡಿಲ್ಲ ಎಂದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

ಈಗಾಗಲೇ ಬೆಳಗಾವಿ ಮರಾಠಿಗರ ವಿರುದ್ಧ ಹೋರಾಟ ಮಾಡಿದ್ದೀವಿ. ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ವಾಪಾಸ್ ತಗೊಂಡಿದ್ದಾರೆ. ಕೇಸ್ ಹಾಕಿದ ಸಿಪಿಐನ ತಲೆ ದಂಡವಾಗಿದೆ. ಎಸ್‌ಎಸ್‌ಎಲ್‌ಸಿ, ಮೌಲ್ಯಾಂಕನ ಪರೀಕ್ಷೆ ಇರೋದ್ರಿಂದ ಯೋಚಿಸಬೇಕು. ಹೋರಾಟದ ಎಲ್ಲಾ ವಿಷ್ಯದಲ್ಲಿ ನಮ್ಮ ಬೆಂಬಲ ಇದೆ. ಆದರೆ ಕರ್ನಾಟಕ ಬಂದ್ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment