newsfirstkannada.com

×

Mark Zuckerberg ಧರಿಸಿರುವ ವಾಚ್​ನ ಬ್ರ್ಯಾಂಡ್ ಯಾವುದು? ಬೆಲೆ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ

Share :

Published September 22, 2024 at 4:21pm

Update September 22, 2024 at 5:53pm

    ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ ಮಾರ್ಕ್​ ಜುಕರ್​ಬರ್ಗ್​ನ ವಾಚ್​

    ಸಂದರ್ಶನದಲ್ಲಿ ಮಾರ್ಕ್ ಧರಿಸಿದ್ದ ಆ ವಾಚ್​​ ಯಾವುದು? ಅದರ ಬೆಲೆ ಎಷ್ಟು ಗೊತ್ತಾ ?

    ಕೊನೆಗೂ ರಿವೀಲ್ ಅಯ್ತು ಮಾರ್ಕ್​ ಕಟ್ಟಿಕೊಂಡಿದ್ದ ಈ ವಾಚ್​ನ ಅಸಲಿ ದರ

ಫೇಸ್​ಬುಕ್ ಸಂಸ್ಥಾಪಕ ಮಾರ್ಕ್​ ಜುಕರ್​​ ಬರ್ಗ್​ ತಮ್ಮ ಸ್ಟೈಲ್ ಹಾಗೂ  ಧರಿಸುವ ವಸ್ತ್ರದಿಂದ ಹಿಡಿದು ವಾಚ್​ವರೆಗೂ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಅವರ ಟ್ರೇಡ್ ಮಾರ್ಕ್​ ಸ್ಟೈಲ್ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತೆ . ಅವರ ಮಿನಿಮಲಿಸ್ಟ್ ಹೂಡೀಸ್ ಟಿ-ಶರ್ಟ್​ನಿಂದ ಹಿಡಿದು ಕೈಗೆ ಕಟ್ಟುವ ವಾಚ್​ವರೆಗೂ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ಮಾರ್ಕ್​ ಜುಕರ್​ಬರ್ಗ್​ ಅವರ ಮತ್ತೊಂದು ವಾಚ್ ಸಖತ್ ಸುದ್ದಿ ಮಾಡಿದೆ.

ಇದನ್ನೂ ಓದಿ: ಬಹಳಷ್ಟು ನೀರು ಕುಡಿಯುವುದರಿಂದ Hangover ಹೊರಟು ಹೋಗುತ್ತಾ? ಇದು ಕಿಕ್‌ ಔಟ್‌ನ ಸೀಕ್ರೆಟ್!

ಅವರ ಲಕ್ಸುರಿ ಸೂಟ್ಸ್​ ಜೊತೆಗೆ ಅದಕ್ಕೆ ತಕ್ಕಂತೆ ಕೈಗಡಿಯಾರ ಕಟ್ಟಿಕೊಂಡು ಬರೋದು ಮಾರ್ಕ್​​ ಜುಕರ್​ಬರ್ಗ್​ ಸ್ಟೈಲ್. ಇತ್ತೀಚೆಗೆ ಹಲವು ಇಂಟರ್​ವ್ಯೂವ್​ಗಳಿಗೆ ಮಾರ್ಕ್ ಹಾಕಿಕೊಂಡು ಬಂದಿರುವ ವಾಚ್​​ನ ಸ್ಟೈಲ್ ಹಾಗೂ ಅದರ ಬೆಲೆ ಬಗ್ಗೆ ಸೊಷಿಯಲ್ ಮಿಡಿಯಾಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ನೆಟ್ಟಿಗರು ಅವರ ಹೊಸ ವಾಚ್​ನ್ನು ಗಮನಿಸಿದ್ದು ಅದರ ಬ್ರ್ಯಾಂಡ್ ಹಾಗೂ ದರದ ಬಗ್ಗೆ ಮಾತನಾಡುತ್ತಿದ್ದಾರೆ.

ಇತ್ತೀಚೆಗೆ ಅಕ್ವೈರಡ್ ಪೊಡ್​ಕಾಸ್ಟ್​​ನ ಒಂದು ಸಂದರ್ಶನಕ್ಕೆ ಹಾಜರಾಗಿದ್ದ ಮಾರ್ಕ್ ಜುಕರ್​ಬರ್ಗ್​ De Bethune DB25 Starry ಕಂಪನಿಯ ವಾಚ್​ ಧರಿಸಿಕೊಂಡು ಬಂದಿದ್ದರು. ಈ ವಾಚ್​ನ ಬೆಲೆ 2 ಲಕ್ಷ 60 ಸಾವಿರ ಅಮೆರಿಕನ್ ಡಾಲರ್ ಎಂದು ಹೇಳಲಾಗುತ್ತಿದೆ. ಅಂದ್ರೆ ಭಾರತದ ರೂಪಾಯಿಗಳಲ್ಲಿ ಇದರ ಬೆಲೆ 2 ಕೋಟಿ ರೂಪಾಯಿ.

24 ಕ್ಯಾರೆಟ್​ ಗೋಲ್ಡ್​ನ ಹೊದಿಕೆ ಇರುವ ಈ ವಾಚ್​ ಮಿಲ್ಕಿ ವೇ ಗ್ಯಾಲಕ್ಸಿ ಪ್ಯಾಟರ್ನ್ ಹೊಂದಿದೆ.ಈ ವಾಚ್​ನ ಬ್ರ್ಯಾಂಡ್ ಹಾಗೂ ಅದರ ಬೆಲೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ವೇದಿಕೆಯಾಗಿದೆ.

ಕೆಲವು ವಾರಗಳ ಹಿಂದಷ್ಟೇ ಮಾರ್ಕ್​ ಜುಕರ್ ಬರ್ಗ್ ತಮ್ಮ ಪತ್ನಿಯ ಹೆಗಲ ಮೇಲೆ ಕೈಹಾಕಿಕೊಂಡು ತೆಗೆಸಿಕೊಂಡಿದ್ದ ಫೋಟೋದಲ್ಲಿಯೂ ಅತ್ಯಂತ ದುಬಾರಿ ವಾಚ್​ ಧರಿಸಿದ್ದನ್ನು ನೆಟ್ಟಿಗರು ಗಮನಿಸಿದ್ದರು. ಅದರ ಬೆಲೆಯೂ ಕೂಡ ಆಗ ದೊಡ್ಡ ಚರ್ಚೆಯಾಗಿತ್ತು. ಪಟೇಕ್ ಪಿಲಿಪ್ಪೆ (Patek Philippe)ಅನ್ನೊ ಬ್ರಾಂಡ್​ನ ವಾಚ್​ ಅಂದು ಮೆಟಾದ ಸಿಇಒ ಕಟ್ಟಿಕೊಂಡಿದ್ದರು ಅದರ ಬೆಲೆ ಭಾರತೀಯ ರೂಪಾಯಿಗಳಲ್ಲಿ 1.18 ಕೋಟಿ ರೂಪಾಯಿ.

ಇದನ್ನೂ ಓದಿ: ಊಟದ ಜೊತೆಗೆ Green Chilli ತಿನ್ನುತ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು; ಹೇಗೆ ಗೊತ್ತಾ?

ಇನ್ನು ಭಾರತೀಯ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿಯ ಪುತ್ರ ಅನಂತ ಅಂಬಾನಿಯ ಮದುವೆಗೆ ಆಗಮಿಸಿದ್ದ ಮಾರ್ಕ್​ ಜುಕರ್​​ಬರ್ಗ್ ಸುದ್ದಿಯಾಗಿದ್ದರು. ಅವರು ಧರಿಸಿದ್ದ ಡ್ರೆಸ್​ನ ಬ್ರ್ಯಾಂಡ್ ಹಾಗೂ ಬೆಲೆಗಳ ಬಗ್ಗೆ ದೊಡ್ಡ ಚರ್ಚೆಯೇ ಆಗಿತ್ತು. ಒಟ್ಟಾರೆಯಾಗಿ ದೊಡ್ಡವರು ಏನೂ ಮಾಡಿದರು ಸುದ್ದಿಯಾಗುತ್ತೆ.ಅದರಲ್ಲೂ ಮಾರ್ಕ್ ಜುಕರ್​ಬರ್ಗ್​ ತಮ್ಮ ಧಿರಿಸುಗಳ ವಿಚಾರದಲ್ಲಿ ತುಂಬಾ ಸ್ಟೈಲಿಶ್​, ತಮ್ಮದೇ ಆದ ಟ್ರೇಡ್ ಮಾರ್ಕ್ ಸೆಟ್​ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಅವರು ಧರಿಸುವ ಧಿರಿಸುಗಳು ವಾಚ್​ಗಳು ಕನ್ನಕಗಳು ಸಾಮಾನ್ಯವಾಗಿ ಸುದ್ದಿಯಲ್ಲಿ ಇದ್ದೇ ಇರುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mark Zuckerberg ಧರಿಸಿರುವ ವಾಚ್​ನ ಬ್ರ್ಯಾಂಡ್ ಯಾವುದು? ಬೆಲೆ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ

https://newsfirstlive.com/wp-content/uploads/2024/09/MARK-JUKERBURG-WATCH.jpg

Load More