Advertisment

ಇನ್ನೇನು ಕೆಲವೇ ಗಂಟೆಗಳಲ್ಲಿ ಮದುವೆ.. ವರನಿಗೆ ಅನಿರೀಕ್ಷಿತ ಟ್ವಿಸ್ಟ್​ ನೀಡಿದ ಮದುಮಗಳು.. ಆಗಿದ್ದೇನು?

author-image
Ganesh
Updated On
ಇನ್ನೇನು ಕೆಲವೇ ಗಂಟೆಗಳಲ್ಲಿ ಮದುವೆ.. ವರನಿಗೆ ಅನಿರೀಕ್ಷಿತ ಟ್ವಿಸ್ಟ್​ ನೀಡಿದ ಮದುಮಗಳು.. ಆಗಿದ್ದೇನು?
Advertisment
  • ಸಿಸಿಟಿವಿ ದೃಶ್ಯ ನೋಡಿದಾಗ ಗೊತ್ತಾಯ್ತು ಅಸಲಿ ವಿಚಾರ
  • ಪತ್ತಿಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
  • ವರನ ಸಂಬಂಧಿಕರಿಗೆ ನಿರಾಸೆ, ವಧು ವಿರುದ್ಧ ಆಕ್ರೋಶ

ತಾಳಿ ಕಟ್ಟುವ ಶುಭ ವೇಳೆ ಮದುಮಗನಿಗೆ ಮದುಮಗಳು ಬಿಗ್ ಶಾಕ್ ನೀಡಿದ ಪ್ರಸಂಗ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಪಟ್ಟಿಕೊಂಡದಲ್ಲಿ ನಡೆದಿದೆ. ಪರಿಣಾಮ ನಡೆಯಬೇಕಿದ್ದ ಮದುವೆ ದಿಢೀರ್ ರದ್ದಾಗಿದೆ, ಸಂಬಂಧಿಕರು ನಿರಾಸೆಗೊಂಡಿದ್ದಾರೆ.

Advertisment

ಅನಂತಪುರದ ನರೇಂದ್ರಕುಮಾರ್ ಪುತ್ರಿ ವೈಷ್ಣವಿ ಹಾಗೂ ಲಕ್ಕಸಾಗರಂ ಗ್ರಾಮದ ವಿಶ್ವಾಸಿ ನಡುವೆ ಮದುವೆ ನಿಕ್ಕಿ ಆಗಿತ್ತು. ಗುರು, ಹಿರಿಯರ ಆಶೀರ್ವಾದದೊಂದಿಗೆ ಕುಟುಂಬಸ್ಥರು ಮದುವೆ ಕಾರ್ಯಕ್ರಮ ನೆರವೇರಿಸಲು ಸಿದ್ಧರಾಗಿದ್ದರು. ಇನ್ನೇನು ಐದು ಗಂಟೆಯಲ್ಲಿ ತಾಳಿ ಕಟ್ಟುವ ಪ್ರಕ್ರಿಯೆ ನಡೆಯುತ್ತಿತ್ತು, ಅದಕ್ಕಾಗಿ ಮಂಟಪದಲ್ಲಿ ಶಾಸ್ತ್ರಗಳು ನಡೆಯುತ್ತಿದ್ದವು.

ಐದು ಗಂಟೆಯಲ್ಲಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು (ಮದುಮಗಳು) ನಾಪತ್ತೆಯಾಗಿದ್ದಾಳೆ. ವಧು ಮದುವೆ ಮಂಟಪದಿಂದ ಓಡಿ ಹೋಗಿದ್ದಾಳೆ. ಮತ್ತೊಬ್ಬ ಯುವಕನೊಂದಿಗೆ ಮದುಮಗಳು ಹೊರ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಶೇಷ ಅಂದರೆ ಮುಹೂರ್ತದ ದಿನ ಮಧ್ಯರಾತ್ರಿಯವರೆಗೂ ನಡೆದ ತಾಂಬೂಲ ಕಾರ್ಯಕ್ರಮದಲ್ಲಿ ವಧು-ವರರು ಸಕ್ರಿಯರಾಗಿದ್ದರು.

ಬೆಳಗಿನ ಜಾವ 4 ಗಂಟೆಗೆ ವಧು ನಾಪತ್ತೆಯಾದ ಹಿನ್ನೆಲೆಯಲ್ಲಿ ಮದುವೆ ನಿಲ್ಲಿಸಲಾಗಿದೆ. ಹುಡುಗಿಗೆ ಮದುವೆ ಇಷ್ಟವಿಲ್ಲದ ಕಾರಣ ಓಡಿ ಹೋಗಿದ್ದಾಳೆ ಎನ್ನಲಾಗಿದೆ. ಪತ್ತಿಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisment

ಇದನ್ನೂ ಓದಿ:ಮರಕುಂಬಿ ಪ್ರಕರಣದ ತೀರ್ಪು ಬೆನ್ನಲ್ಲೇ ಎದೆ ನೋವು.. ಅಪರಾಧಿ ಹೃದಯಾಘಾತಕ್ಕೆ ಸಾ*ವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment