/newsfirstlive-kannada/media/post_attachments/wp-content/uploads/2024/05/UP_NURS.jpg)
ಲಕ್ನೋ: ಮದುವೆ ಆಗುವಂತೆ ಒತ್ತಾಯ ಮಾಡಿದ್ದಕ್ಕೆ ಮಹಿಳಾ ನರ್ಸ್​ ಒಬ್ಬರನ್ನ ಹೆಡ್​ ಕಾನ್​ಸ್ಟೆಬಲ್ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ಉತ್ತರ ಪ್ರದೇಶದ ಕಾನ್ಪುರದ ಇಟಾಹ್ ಗ್ರಾಮದಲ್ಲಿ ನಡೆದಿದೆ.
ಕಾನ್ಪುರದ ಬಾಡ ಪ್ರದೇಶದ ನಿವಾಸಿ ಶಾಲು ತಿವಾರಿ ಕೊಲೆಯದ ನರ್ಸ್​. ಹೆಡ್​ ಕಾನ್​ಸ್ಟೆಬಲ್​ ಮನೋಜ್​ ಕುಮಾರ್ ಕೊಲೆ ಮಾಡಿದ ಆರೋಪಿಯಾಗಿದ್ದು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಗಳು ಕೊಲೆಯಾಗಿದ್ದಾಳೆಂದು ತಾಯಿ, ಸಹೋದರ ಇಬ್ಬರು ಪೊಲೀಸ್​ ಠಾಣೆಗೆ ದೂರು ಕೊಡಲು ಸತತ 2 ತಿಂಗಳ ಕಾಲ ಅಲೆದಿದ್ದಾರೆ. ಆದ್ರೆ ಪೊಲೀಸರು ಬೆದರಿಕೆ ಹಾಕಿ ನಿಮ್ಮ ಮೇಲೆ ಎಫ್​ಐಆರ್ ಹಾಕುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ. ಆದರೆ ಕೊಲೆಯಾದ ಮಹಿಳೆಯ ಮೃತದೇಹ ಪತ್ತೆಯಾಗುತ್ತಿದ್ದಂತೆ ಪೊಲೀಸರು ಕೇಸ್ ದಾಖಲು ಮಾಡಿಕೊಂಡು ಆರೋಪಿ ಹಾಗೂ ಆತನ ಸಹಚರರನ್ನ ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ವಿರುಷ್ಕಾ ದಂಪತಿ ಜೊತೆ ಫೋಟೋಗೆ ಪೋಸ್ ಕೊಟ್ಟ ಕನ್ನಡತಿ ಕ್ಯೂಟ್ ಶ್ರೇಯಾಂಕ ಪಾಟೀಲ್
ಕಾನ್ಪುರ ನಗರದ ನರ್ಸಿಂಗ್​ ಹೋಮ್​ನಲ್ಲಿ ಶಾಲು ನರ್ಸ್​ ಆಗಿ 3 ವರ್ಷಗಳಿಂದ ಕೆಲಸ ಮಾಡುತ್ತಿರುತ್ತಾರೆ. ಆಕಸ್ಮಿಕವಾಗಿ ಬರ್ರಾ ಪೊಲೀಸ್ ಠಾಣೆಯ ಹೆಡ್​ ಕಾನ್​ಸ್ಟೆಬಲ್​ ಮನೋಜ್​ನನ್ನು ಭೇಟಿ ಮಾಡುತ್ತಾರೆ. ಆಗ 2 ಮಕ್ಕಳಿದ್ದರೂ ನನಗೆ ಮದುವೆಯಾಗಿಲ್ಲ ಎಂದು ಕಾನ್​​ಸ್ಟೆಬಲ್ ಸುಳ್ಳು ಹೇಳಿ ಸಂಬಂಧ ಬೆಳೆಸುತ್ತಾನೆ. ಬಳಿಕ​ ಆಗಾಗ ನರ್ಸ್​ ರೂಮ್​ಗೆ ಹೋಗುತ್ತಾ, ಬರುತ್ತಾ ಇದ್ದಾನೆ. ಹೀಗಾಗಿ ನರ್ಸ್​ ಮದುವೆ ಆಗುವಂತೆ ಒತ್ತಾಯ ಮಾಡುತ್ತಿರುತ್ತಾಳೆ. ಹೀಗಾಗಿ ಕೊಲೆ ಮಾಡಲು ಬಿಗ್ ಪ್ಲಾನ್ ರೂಪಿಸುತ್ತಾನೆ ಎನ್ನಲಾಗಿದೆ.
ಅದರಂತೆ ಅಯೋಧ್ಯೆಗೆ ಟ್ರಿಪ್ ಹೋಗೋಣವೆಂದು ನರ್ಸ್ ಅನ್ನು ನಂಬಿಸಿ ಕಾರಿನಲ್ಲಿ ತನ್ನ ಸ್ವಂತ ಊರು ಇಟಾಹ್​ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಕಾರಿನ ಚಾಲಕನ ಜೊತೆ ಸೇರಿ ನರ್ಸ್​ಳನ್ನ ಬರ್ಬರವಾಗಿ ಕೊಲೆ ಮಾಡಿ ನೀರಿಲ್ಲದ ಬಾವಿಗೆ ಮೃತದೇಹ ಎಸೆದಿದ್ದಾರೆ. ಬಳಿಕ ಅನುಮಾನ ಬಾರದಂತೆ ತನ್ನ ಕರ್ತವ್ಯಕ್ಕೆ ಹಾಜರು ಆಗಿದ್ದಾನೆ.
UP : कानपुर के हॉस्पिटल की नर्स शालिनी तिवारी की लाश 18 फरवरी 2024 को एटा जिले के एक कुएं में मिली थी। अब इस घटना का खुलासा हुआ है।
UP पुलिस का 50 वर्षीय हेड कांस्टेबल मनोज कुमार और उसका दोस्त राहुल कुमार गिरफ्तार हैं।
मनोज कानपुर पुलिस में पोस्टेड है। शालिनी की दोस्त का… pic.twitter.com/9lVSDfLq1K
— Sachin Gupta (@SachinGuptaUP)
UP : कानपुर के हॉस्पिटल की नर्स शालिनी तिवारी की लाश 18 फरवरी 2024 को एटा जिले के एक कुएं में मिली थी। अब इस घटना का खुलासा हुआ है।
UP पुलिस का 50 वर्षीय हेड कांस्टेबल मनोज कुमार और उसका दोस्त राहुल कुमार गिरफ्तार हैं।
मनोज कानपुर पुलिस में पोस्टेड है। शालिनी की दोस्त का… pic.twitter.com/9lVSDfLq1K— Sachin Gupta (@SachinGuptaUP) May 19, 2024
">May 19, 2024
ಆದರೆ ಇತ್ತ ನರ್ಸ್​ ತಾಯಿ, ಸಹೋದರ ಸತತ 2 ತಿಂಗಳುಗಳ ಕಾಲ ಬಾರ್ರಾ ಪೊಲೀಸ್ ಠಾಣೆಯಿಂದ ಸಿಎಂ ಆದಿತ್ಯನಾಥ್​ವರೆಗೆ ದೂರು ನೀಡಲು ಹೋದರೂ ಯಾವುದೇ ಪ್ರಯೋಜನಾ ಆಗಿಲ್ಲ. ಆದರೆ ಕೊನೆಗೆ ಇವರ ಕಾಟ ತಡೆಯಲಾರದೇ ಮೊಬೈಲ್​ ಲೋಕೋಶನ್​ ಅನ್ನು ಪತ್ತೆ ಹಚ್ಚಿ ನೋಡಿದಾಗ ಇಬ್ಬರ ಮೊಬೈಲ್​ ಲೋಕೋಶನ್ ಒಂದೇ ಸ್ಥಳವನ್ನು ತೋರಿಸಿದೆ. ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಕಂಡುಕೊಂಡಿದ್ದಾರೆ. ಬಳಿಕ ಪೊಲೀಸರು ಮನೋಜ್ ಕುಮಾರ್ ಮತ್ತು ರಾಹುಲ್ ಎನ್ನುವನನ್ನ ಬಂಧಿಸಿದ್ದಾರೆ ಎಂದು ಹೇಳಲಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us