/newsfirstlive-kannada/media/post_attachments/wp-content/uploads/2024/07/Vijayanagar-2.jpg)
ವಿಜಯನಗರ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿವಾಹಿತೆ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಆರೋಪವೊಂದು ಕೇಳಿಬಂದಿದೆ. ಗಂಗಮ್ಮನ ಗುಡಿ ಮುಖ್ಯ ರಸ್ತೆಯಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ.
22 ವರ್ಷದ ಪೂಜಾ ಆತ್ಮಹತ್ಯೆ ಶರಣಾದ ಟೆಕ್ಕಿ. ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/07/Vijyanagar.jpg)
ಪೂಜಾ ಮೂಲತಃ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ತೆಗ್ಗಿ ಬಸಾಪುರ ಮೂಲದವರು. ಪೂಜಾ ಸಾವಿಗೆ ಪತಿ ಸುನೀಲ್ ಹಾಗೂ ಮೈದುನಾ ಅನಿಲ್ ಕಾರಣ ಎಂದು ಯುವತಿ ಪೋಷಕರ ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: KRS Dam: ಎರಡು ವಾರದಿಂದ ಒಳ ಹರಿವು ಹೆಚ್ಚಳ.. 100 ಅಡಿ ಭರ್ತಿ! ಸದ್ಯ ಎಷ್ಟಿದೆ ನೀರಿನ ಮಟ್ಟ?
2022 ರಲ್ಲಿ ಪೂಜಾ ಪೋಷಕರು ಸುನೀಲ್ ಜೊತೆ ವಿವಾಹ ಮಾಡಿದ್ದರು. ಆದರೀಗ ಪೂಜಾ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕು ಮುಗಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/07/Vijayanagar-3.jpg)
ಇದನ್ನೂ ಓದಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಭೀಕರ ಕೊಲೆ; ಆರೋಪಿ ಅರೆಸ್ಟ್​, ಹತ್ಯೆಯ ಕಾರಣ ಮಾತ್ರ ವಿಚಿತ್ರ
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆತ್ಮಹತ್ಯೆಗೀಡಾದ ಟೆಕ್ಕಿ ಪೂಜಾ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಪೂಜಾ ಮೃತದೇಹ ರವಾನಿಸಲಾಗಿದೆ. ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us