Advertisment

ಬೆಂಗಳೂರು OYO ರೂಂನಲ್ಲಿ ವಿವಾಹಿತ ಮಹಿಳೆ ದುರಂತ; ಹರಿಣಿ, ಯಶಸ್‌ ಮಧ್ಯೆ ಅಸಲಿಗೆ ಆಗಿದ್ದೇನು?

author-image
admin
Updated On
15 ಬಾರಿ ಇರಿದು ಹರಿಣಿ ಹ*ತ್ಯೆ.. ಬೆಂಗಳೂರು OYO ರೂಂನಲ್ಲಿ ಏನಾಯ್ತು? ದುರಂತಕ್ಕೆ ಕಾರಣವೇನು?
Advertisment
  • ಜಾತ್ರೆಯಲ್ಲೇ ಹರಿಣಿ, ಯಶಸ್‌ ಫೋನ್ ನಂಬರ್ ಎಕ್ಸ್‌ಚೇಂಜ್!
  • ಹೆಂಡತಿ ಫೋನ್‌ ಕಿತ್ತುಕೊಂಡು ಮನೆಯಲ್ಲೇ ಕೂಡಿ ಹಾಕಿದ್ದ ಗಂಡ
  • ವಿವಾಹಿತ ಪ್ರಿಯತಮೆ ಹರಿಣಿ ಸಂಪರ್ಕಕ್ಕೆ ಸಿಗದೆ ಹುಚ್ಚನಾಗಿದ್ದ ಯಶಸ್‌

ವಿವಾಹಿತ ಪ್ರಿಯತಮೆಯನ್ನು OYO ರೂಂಗೆ ಕರೆದು ಚಾಕುವಿನಿಂದ ಇರಿದು ಹ*ತ್ಯೆ ಮಾಡಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಈ ಪ್ರಕರಣದ ತನಿಖೆ ನಡೆಸಿರುವ ಸುಬ್ರಮಣ್ಯಪುರ ಪೊಲೀಸರು ಹರಿಣಿ ದುರಂತ ಹೇಗಾಯ್ತು ಅನ್ನೋ ರೋಚಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

Advertisment

36 ವರ್ಷದ ಹರಿಣಿಯ ಪತಿ ದಾಸೇಗೌಡ. ಈ ದಂಪತಿ ಕೆಂಗೇರಿಯಲ್ಲಿ ವಾಸವಿದ್ದರು. ಕೆಲ ತಿಂಗಳ ಹಿಂದೆ ಕೆಂಗೇರಿ ಏರಿಯಾದಲ್ಲಿ ಜಾತ್ರೆ ಇತ್ತು. ಈ ಜಾತ್ರೆಗೆ ಟೆಕ್ಕಿ ಯಶಸ್ ಹೋಗಿದ್ದು, ಗೃಹಿಣಿ ಹರಿಣಿಗೆ ಪರಿಚಯವಾಗಿದ್ದ. ಜಾತ್ರೆಯಲ್ಲೇ ಹರಿಣಿ, ಯಶಸ್‌ ಇಬ್ಬರ ಫೋನ್ ನಂಬರ್ ಕೂಡ ಎಕ್ಸ್‌ಚೇಂಜ್ ಆಗಿತ್ತು.

publive-image

ಜಾತ್ರೆಯಲ್ಲಿ ಪರಿಚಯವಾದ ಬಳಿಕ ವಿವಾಹಿತ ಮಹಿಳೆ ಹರಿಣಿ ಹಾಗೂ ಟೆಕ್ಕಿ ಯಶಸ್ ಮಧ್ಯೆ ಸ್ನೇಹ ಬೆಳೆದು, ಚಾಟಿಂಗ್, ಡೇಟಿಂಗ್ ಕೂಡ ಮಾಡಿದ್ರು. ಹಲವು ಬಾರಿ ಇದೇ ರೀತಿ ಭೇಟಿ ಮಾಡೋದು ಫೋನ್‌ನಲ್ಲಿ ಮಾತಾಡೋದು ನಡೆಯುತ್ತಿತ್ತು.

publive-image

ಹಲವು ದಿನಗಳ ಬಳಿಕ ಹರಿಣಿ ಗಂಡ ದಾಸೇಗೌಡನಿಗೆ ಇವರಿಬ್ಬರ ಅನೈತಿಕ ಸಂಬಂಧ ಗೊತ್ತಾಗಿತ್ತು. ಹರಿಣಿ ಫೋನ್‌ ಕಿತ್ತುಕೊಂಡಿದ್ದ ದಾಸೇಗೌಡ ಹೆಂಡತಿಯನ್ನು ಮನೆಯಲ್ಲೇ ಕೂಡಿ ಹಾಕಿದ್ದ.

Advertisment

ಕೆಲವು ತಿಂಗಳ ನಂತರ ಹೊರ ಬಂದಿದ್ದ ಹರಿಣಿ, ಮತ್ತೆ ತನ್ನ ಬಾಯ್ ಫ್ರೆಂಡ್ ಯಶಸ್ ಅನ್ನು ಸಂಪರ್ಕಿಸಿದ್ದಳು. ತಿಂಗಳುಗಳ ಕಾಲ ಪ್ರಿಯತಮೆ ಹರಿಣಿ ಸಂಪರ್ಕಕ್ಕೆ ಸಿಗದೆ ಯಶಸ್‌ ಹುಚ್ಚನಾಗಿದ್ದ. ಹೀಗಾಗಿ ಹರಿಣಿ ಸಿಕ್ಕರೆ ಸಾಯಿಸಲು ನಿರ್ಧರಿಸಿದ್ದ.

ಇದನ್ನೂ ಓದಿ: ಇವನಿಗೆ 25, ಅವಳಿಗೆ 36.. ಬೆಂಗಳೂರಲ್ಲಿ OYO ರೂಂಗೆ ಕರೆದು ಬರ್ಬರವಾಗಿ ಹ*ತ್ಯೆ ಮಾಡಿದ ಟೆಕ್ಕಿ! 

ಹರಿಣಿ ದೂರಾಗಿದ್ದಕ್ಕೆ ಸಾಯಿಸಲು ನಿರ್ಧರಿಸಿದ್ದ ಯಶಸ್‌, ಮೊದಲೇ ಚಾಕು ಕೂಡ ಖರೀದಿಸಿ ಇಟ್ಟಿದ್ದ. ಯಾವಾಗ ಮತ್ತೆ ಹರಿಣಿ, ಯಶಸ್‌ ಅನ್ನು ಭೇಟಿ ಮಾಡ್ತಾಳೋ ಆಗ ಇಬ್ಬರು ಮಾತುಕತೆ ಮಾಡಿಕೊಂಡು ಓಯೋ ರೂಮ್‌ಗೆ ಹೋಗುತ್ತಾರೆ.

Advertisment

publive-image

ಮತ್ತೆ ಹರಿಣಿ ಸಿಗುತ್ತಿದ್ದಂತೆ ಯಶಸ್ ರಾಯಲ್ಸ್ ಹೊಟೇಲ್‌ನಲ್ಲಿ ರೂಮ್ ಬುಕ್ ಮಾಡಿದ್ದ. ಓಯೋ ರೂಂನಲ್ಲಿ ಹರಿಣಿ ಹಾಗೂ ಯಶಸ್ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರದು ಅಂತ ನಿರ್ಧಾರ ಮಾಡಿದ್ದ ಯಶಸ್, ಮೊದಲೇ ಪ್ಲಾನ್ ಮಾಡಿದಂತೆ ಚಾಕುನಿಂದ ಬರ್ಬರವಾಗಿ ಇರಿದಿದ್ದಾನೆ.

ಜೂನ್ 6ರಂದು ರೂಮ್‌ನಲ್ಲಿ ಕೊ*ಲೆ ಮಾಡಿ ಸಾಫ್ಟ್‌ವೇರ್ ಇಂಜಿನಿಯರ್ ಯಶಸ್ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸುಬ್ರಮಣ್ಯಪುರ ಇನ್ಸ್‌ಪೆಕ್ಟರ್ ರಾಜು ಅಂಡ್ ಟೀಮ್, FSL ತಂಡವನ್ನು ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹ ಮಾಡಿದ್ದರು.

publive-image

ಜೂನ್ 8ರಂದು ಸುಬ್ರಮಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಯಶಸ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಯಶಸ್‌ ತಪ್ಪೊಪ್ಪಿಕೊಂಡಿದ್ದಾನೆ. ನನ್ನ ಜೊತೆ ಹರಿಣಿಗೆ ಅನೈತಿಕ ಸಂಬಂಧ ಇತ್ತು. ನನ್ನ ಅವೈಡ್ ಮಾಡ್ತಾ ಇದ್ದಳು. ಹೀಗಾಗಿ ಕೊ*ಲೆ ಮಾಡಿರುವುದಾಗಿ ಆರೋಪಿ ಯಶಸ್‌ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment