/newsfirstlive-kannada/media/post_attachments/wp-content/uploads/2025/06/Bangalore-oyo-room-tragedy-5.jpg)
ಬೆಂಗಳೂರು: ಇದೊಂದು ಅಪರೂಪದ ದುರಂತ ಪ್ರೇಮ ಕಥೆ. ಇಲ್ಲಿ ಪ್ರೇಯಸಿ ಕೊ*ಲೆಯಾಗಿದ್ದಾಳೆ. ಪ್ರೇಮಿ ಅರೆಸ್ಟ್ ಆಗಿದ್ದಾನೆ. ಅದರಲ್ಲೂ ಪ್ರೇಯಸಿ ಮದ್ವೆಯಾಗಿ ಇಬ್ಬರು ಮಕ್ಕಳಿರೋ ತಾಯಿ. ಆಕೆಯನ್ನ ಪ್ರೀತಿಸಿದವನು ಸ್ಟಾಫ್‌ವೇರ್ ಇಂಜಿನಿಯರ್. 5 ವರ್ಷದ ಹಿಂದೆ ಪರಿಚಯವಾಗಿ ಶುರುವಾದ ಪ್ರೀತಿ ಸದ್ಯ ಕೊ*ಲೆಯಲ್ಲಿ ಅಂತ್ಯವಾಗಿದೆ.
ಈಕೆ ಹೆಸ್ರು ಹರಿಣಿ. ವಯಸ್ಸು 36 ವರ್ಷ. ಬೆಂಗಳೂರಿನ ಕೆಂಗೇರಿ ನಿವಾಸಿ. ಜಮೀನ್ದಾರ್ ಮನೆತನದ ಸೊಸೆ ಇವಳು. ಇಬ್ಬರ ಮಕ್ಕಳ ತಾಯಿ. ಮನೆಯಾಯ್ತು ಸಂಸಾರ ಆಯ್ತು ಅಂತಾ ಸುಮ್ನೆ ಇದ್ದಿದ್ರೆ ಇಷ್ಟೊತ್ತಿಗೆ ಜೀವಂತವಾಗಿ ಇರ್ತಿದ್ದರು. ಆದ್ರೀಗ ಮತ್ತೊಬ್ಬನ ಪ್ರೀತಿಯಲ್ಲಿ ಬಿದ್ದ ತಪ್ಪಿಗೆ OYO ಹೋಟೆಲ್‌ವೊಂದರಲ್ಲಿ ಹೆಣವಾಗಿ ಪತ್ತೆಯಾಗಿದ್ದಾಳೆ.
ಜಮೀನ್‌ದಾರ್ ಹೆಂಡ್ತಿ - ಸಾಫ್ಟ್‌ವೇರ್ ಹುಡುಗನ ಮಧ್ಯೆ ಪ್ರೀತಿ
ನನ್ನ ಬಿಡು ಎಂದಿದ್ದಕ್ಕೆ 15 ಬಾರಿ ಚುಚ್ಚಿ ಕೊಂದ ಪ್ರಿಯತಮ
ಹರಿಣಿ ಗಂಡ ದಾಸೇಗೌಡ ಕೆಂಗೇರಿ ಬಳಿಯ ಜಮೀನ್ದಾರ್ ಕುಟುಂಬದವ್ರು. 13 ವರ್ಷದ ಹಿಂದೆ ಹರಿಣಿಗೆ ಮದ್ವೆಯಾಗಿತ್ತು. ದಂಪತಿಗೆ 12 ಹಾಗೂ 10 ವರ್ಷದ ಇಬ್ಬರು ಹೆಣ್ಮಕ್ಕಳಿದ್ದಾರೆ. ಆದರೆ 5 ವರ್ಷದ ಹಿಂದೆ ಜಾತ್ರೆಯೊಂದರಲ್ಲಿ ಪರಿಚಯವಾಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಈಕೆಯ ಪಾಲಿಗೆ ಕಂಟಕವಾಗಿ ಪರಿಣಮಿಸಿಬಿಟ್ಟಿದ್ದಾನೆ.
ಯಶಸ್ ಮೀಟ್ಸ್ ಹರಿಣಿ!
ಕೆಂಗೇರಿ ಊರ ಹಬ್ಬಕ್ಕೆ ಬಂದಾಗ ಯಶಸ್‌ಗೆ ಹರಿಣಿಗೆ ಪರಿಚಯವಾಗಿದ್ದಾರೆ. 5 ವರ್ಷದ ಹಿಂದೆ ಪರಿಚಯವಾಗಿದ್ದ ಇಬ್ಬರು ಕಳೆದ 2 ವರ್ಷದಿಂದ ಪ್ರೀತಿ ಮಾಡ್ತಿದ್ರು. ಇಬ್ಬರ ಅನೈತಿಕ ಸಂಬಂಧದ ಬಗ್ಗೆ ಹರಿಣಿ ಪತಿಗೆ ಗೊತ್ತಾಗಿತ್ತು. ನಂತರ ಜಗಳವಾಗಿ ಏಪ್ರಿಲ್‌ನಲ್ಲಿ ಹರಿಣಿ ಪತಿ ಮೊಬೈಲ್ ಕಿತ್ತುಕೊಂಡಿದ್ರು.
ಇದನ್ನೂ ಓದಿ: ಹನಿಮೂನ್‌ಗೆ ಒನ್ ವೇ ಟಿಕೆಟ್; ಮೇಘಾಲಯದಲ್ಲಿ ‘ಬಾ ನಲ್ಲ ಮಧುಚಂದ್ರಕೆ’ ಹೈಡ್ರಾಮಾ ಹೇಗಿತ್ತು?
ಇದಾದ ಬಳಿಕ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹರಿಣಿಯನ್ನ ಯಶಸ್ ಸಂಪರ್ಕ ಮಾಡಿರ್ಲಿಲ್ಲ. ಹರಿಣಿಯಿಲ್ಲದ ಹುಚ್ಚನಂತಾಗಿದ್ದ ಯಶಸ್ ಫೇಸ್‌ಬುಕ್ ಮತ್ತು ಇನ್ಸ್‌ಟಾಗ್ರಾಂನಲ್ಲಿ ಮೆಸೇಜ್ ಮಾಡಿದ್ದ. ಹರಿಣಿ ಕೈಗೆ ಮೊಬೈಲ್ ಸಿಕ್ತಿದ್ದಂತೆ ಮತ್ತೆ ಯಶಸ್‌ನ ಸಂಪರ್ಕಿಸಿದ್ದಳು. ಆಗ ಜೂನ್ 7ರಂದು ಯಶಸ್ ಹರಿಣಿಯನ್ನ ಭೇಟಿಯಾಗ್ಬೇಕು ಅಂತಾ ಯಶಸ್ ಕರೆಸಿಕೊಂಡಿದ್ದ.
ಸಂಬಂಧಿಕರ ಮನೆಗೆ ಹೋಗಿ ಬರ್ತೀನೆಂದು ಹರಿಣಿ ಯಶಸ್ ಭೇಟಿಗೆ ಬಂದಿದ್ದಳು. ಹರಿಣಿ ಸಿಕ್ತಿದ್ದಂತೆ ಯಶಸ್ ಓಯೋ ರೂಂ ಬುಕ್ ಮಾಡಿದ್ದ. ಇಬ್ಬರೂ ಭೇಟಿಯಾಗಿ ಟೈಮ್ ಸ್ಪೆಂಡ್ ಮಾಡಿದ್ದರು. ನಂತ್ರ ನನ್ನ ಬಿಟ್ಟು ಬಿಡು ಅಂತ ಹರಿಣಿ ರೂಂನಿಂದ ಹೊರಟಿದ್ದಳು.
ಆಕೆ ಹೊರಡೋಕೆ ಮುಂದಾಗ್ತಿದ್ದಂತೆ ಯಶಸ್ ಹರಿಣಿಗೆ 15 ಬಾರಿ ಚಾಕುವಿನಿಂದ ಇರಿದು ಕೊ*ಲೆ ಮಾಡಿದ್ದಾನೆ. ನಂತರ ತಾನೂ ಆತ್ಮ*ಹತ್ಯೆಗೆ ಯತ್ನಿಸಿದ್ದಾನೆ. ಆದರೆ ಕಡೇ ಕ್ಷಣದಲ್ಲಿ ಬದುಕೋ ಆಸೆ ಹುಟ್ಟಿತೋ ಏನೋ, ತಾನೇ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದ. ವಿಶೇಷ ಅಂದ್ರೆ ವೆಬ್ ಸಿರೀಸ್ ಒಂದು ಈತನ ಕೊಲೆಗೆ ಸ್ಪೂರ್ತಿ ನೀಡಿರೋದು ತನಿಖೆ ವೇಳೆ ಬಯಲಾಗಿದೆ.
ಕೊಲೆಗೆ ಸ್ಫೂರ್ತಿ ವೆಬ್ ಸಿರೀಸ್
ಕಳೆದ ಏಪ್ರಿಲ್‌ನಿಂದ ಹರಿಣಿ ಸಂಪರ್ಕವಿಲ್ಲದೇ ಯಶಸ್ ಸೈಕೋನಂತಾಗಿದ್ದ. ಹೆಚ್ಚು ಹೆಚ್ಚು ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನ ನೋಡ್ತಿದ್ದ ಯಶಸ್ ಕೊ*ಲೆಗೆ ಪ್ಲಾನ್ ಮಾಡಿದ್ದ. ರೇಪ್ ಅಂಡ್ ಮರ್ಡರ್ ಸಿನಿಮಾಗಳನ್ನ ಯಶಸ್ ನೋಡಿದ್ದು, ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನ ನೋಡಿ ಕೊ*ಲೆ ಮಾಡಿದೆ ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ.
ಶ್ರೀಮಂತ ಜಮೀನ್ದಾರ್ ಕುಟುಂಬ, ಇಬ್ಬರು ಮಕ್ಕಳು, ಸುಖ ಸಂಸಾರಕ್ಕೆ ಹರಿಣಿಗೆ ಮತ್ತೇನು ಬೇಕಿತ್ತು ಅಲ್ವಾ. ಆದರೆ ಪರಸಂಗದ ಆಸೆಗೆ ಬಿದ್ದು ಪ್ರಿಯಕರನಿಂದಲೇ ಕೊಲೆಯಾಗಿದ್ದು ನಿಜಕ್ಕೂ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ