Advertisment

ಪ್ರಿಯಕರನಿಗಾಗಿ ಪತಿಯನ್ನೇ ಬಿಟ್ಟು ಬಂದಳು.. ಗರ್ಭಿಣಿ ಆದ್ಮೇಲೆ ಪ್ರೇಮಿ ಪರಾರಿ, ಸಂತ್ರಸ್ತೆ ಏಕಾಂಗಿ..

author-image
Ganesh
Updated On
ಪ್ರಿಯಕರನಿಗಾಗಿ ಪತಿಯನ್ನೇ ಬಿಟ್ಟು ಬಂದಳು.. ಗರ್ಭಿಣಿ ಆದ್ಮೇಲೆ ಪ್ರೇಮಿ ಪರಾರಿ, ಸಂತ್ರಸ್ತೆ ಏಕಾಂಗಿ..
Advertisment
  • ಮದುವೆ ಆಗುವಂತೆ ಪಟ್ಟು ಹಿಡಿದು ಧರಣಿ ಕೂತ ಸಂತ್ರಸ್ತೆ
  • ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಪ್ರಕರಣ
  • ಇಬ್ಬರಿಗೂ ಮದುವೆ ಮಾಡಿಸಲು ಪೊಲೀಸರು ತಯಾರಿ

ವಿವಾಹಿತ ಗರ್ಭಿಣಿ ಮಹಿಳೆಯೊಬ್ಬಳು ಪರಪುರುಷನ ಮನೆ ಬಳಿ ಏಕಾಂಗಿ ಪ್ರತಿಭಟನೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿರುವ ಸುಭಾಶ್‌ನಗರದಲ್ಲಿ ಈ ದೃಶ್ಯ ಕಂಡು ಬಂದಿದೆ.

Advertisment

ತಿಮ್ಮಸಂದ್ರ ಮೂಲದ ವಿವಾಹಿತ ಮಹಿಳೆಯೊಬ್ಬರು ಮತ್ತು ಸುಭಾಶ್ ನಗರದ ಅಮರನಾಥ್ ಇಬ್ಬರು ಪರಿಚಯಸ್ಥರು. ಕಳೆದ ಮೂರು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಯದ ಸಲುಗೆ ಪ್ರೀತಿಗೆ ಪ್ರೇಮಕ್ಕೆ ತಿರುಗಿದೆ‌. ಮದುವೆ ಆಗುವುದಾಗಿ ನಂಬಿಸಿ ಆಕೆಯ ಜೊತೆಗೆ ದೈಹಿಕ ಸಂಪರ್ಕ ಮಾಡಿದ್ದ ಅಮರನಾಥ್, ಈಗ ಮದುವೆ ಆಗಲು ಹಿಂದೇಟು ಹಾಕಿದ್ದಾನಂತೆ. ಇದೇ ಕಾರಣಕ್ಕೆ ನನಗೆ ನ್ಯಾಯ ಬೇಕು ಅಂತಾ ಪ್ರತಿಭಟನೆ ಮಾಡ್ತಿದ್ದಾಳೆ.

ಇದನ್ನೂ ಓದಿ: 6 ತಿಂಗಳ ಅಂತರದಲ್ಲಿ ತಂದೆ, ಅಣ್ಣನ ಅಗಲಿಕೆ.. ಆಕಾಶ್ ದೀಪ್ ಬದುಕೇ ಒಂದು ಕರುಳು ಹಿಂಡುವ ಕತೆ

ಬೆಂಗಳೂರು ನಗರದಲ್ಲಿ ಪತಿಯೊಂದಿಗೆ ವಾಸವಿದ್ದ ಸಂತ್ರಸ್ತೆ, ಈಗ ಗಂಡನನ್ನು ಬಿಟ್ಟು ಬಂದಿದ್ದಾಳೆ. ಆದರೀಗ ಅಮರನಾಥ ಮದುವೆ ನಿರಾಕರಿಸಿದ್ದಾನೆ ಅನ್ನೋದು ಸಂತ್ರಸ್ತೆಯ ಆರೋಪ. ಇದರಿಂದ ನೊಂದಿರುವ ಸಂತ್ರಸ್ತೆ ಪ್ರಿಯಕರನ ಮನೆ ಮುಂದೆ ಧರಣಿ ನಡೆಸ್ತಿದ್ದಾಳೆ. ಈ ಹಿಂದೆಯೂ ಅಮರನಾಥ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ‌ನೀಡಿದ್ದಳು. ಆಗ ಆತ, ಇನ್ಮುಂದೆ ತಪ್ಪು ಮಾಡಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದ. ಈ ಹಿನ್ನೆಲೆಯಲ್ಲಿ ಸದ್ಯ ಶ್ರೀನಿವಾಸಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಇಬ್ಬರಿಗೂ ಮದುವೆ ಮಾಡಿಸಲು ಚಿಂತನೆ ಮಾಡ್ತಿದ್ದಾರೆ ಎಂದು ತಿಳಿದುಬಂದಿದೆ.

Advertisment

ಇದನ್ನೂ ಓದಿ: ಆರ್​ಸಿಬಿಯ ಈ ಸ್ಟಾರ್ ವಿರುದ್ಧ ಎಫ್​ಐಆರ್​; ಯಾವುದೇ ಕ್ಷಣದಲ್ಲಾದರೂ ಅರೆಸ್ಟ್ ಸಾಧ್ಯತೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment