4 ತಿಂಗಳ ಹಿಂದೆ ಮದುವೆ.. ನಾಯಂಡಹಳ್ಳಿ ಫ್ಲೈ ಓವರ್​ನಿಂದ ಜಿಗಿದು ವಿವಾಹಿತ ಯುವಕ ಆತ್ಮಹತ್ಯೆ

author-image
AS Harshith
Updated On
ನವವಿವಾಹಿತನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌.. 4 ತಿಂಗಳ ಹಿಂದೆ ಮದುವೆ ಆಗಿದ್ದವನಿಗೆ ಏನಾಯ್ತು?
Advertisment
  • ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದ ಯುವಕ
  • ಫ್ಲೈ ಓವರ್ ಮೇಲೆ ಬೈಕ್​ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತ
  • ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋದವನು ಫ್ಲೈ ಓವರ್​ನಿಂದ ಜಿಗಿದು ಆತ್ಮಹತ್ಯೆ

ಬೆಂಗಳೂರು: ವಿವಾಹಿತ ಯುವಕನೋರ್ವ ನಾಯಂಡಹಳ್ಳಿ ಫ್ಲೈ ಓವರ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಬೈಕನ್ನ ಫ್ಲೈ ಓವರ್ ಮೇಲೆ ಪಾರ್ಕಿಂಗ್ ಮಾಡಿ ಏಕಾಏಕಿ ಕೆಳಗೆ ಜಿಗಿದಿದ್ದಾನೆ. ಮೃತ ವಿವಾಹಿತ ಯುವಕನನ್ನ ನವೀನ್​ ಕುಮಾರ್​ ಎಂದು ಗುರುತಿಸಲಾಗಿದೆ

ಆತ್ಮಹತ್ಯೆ ಮಾಡಿಕೊಂಡ ನವೀನ್ ಕುಮಾರ್ 30 ವರ್ಷ ವಯಸ್ಸಿನವನಾಗಿದ್ದು, ಜ್ಞಾನಭಾರತಿಯ ಮಲ್ಲಸಂದ್ರದವನು.

publive-image

ಇದನ್ನೂ ಓದಿ: BREAKING: ಕೊನೆಗೂ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟಿದ್ದ ಉಗ್ರ ಅರೆಸ್ಟ್​.. ಎಲ್ಲಿ ತಲೆಮರೆಸಿಕೊಂಡಿದ್ದ ಗೊತ್ತಾ?

ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದನು. ಕರ್ನಾಟಕ ವಿದ್ಯುತ್ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದನು. ಕೆಲಸಕ್ಕೆ ಹೋಗ್ತಿನೆಂದು ಬೆಳಗ್ಗೆ ಮನೆಯಿಂದ ಬಂದಿದ್ದನು. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment