newsfirstkannada.com

​​‘ಮ್ಯಾರಿ ಮಿ ಚಿಕನ್’ ತಿಂದಿದ್ದೀರಾ? ಭಾನುವಾರದ ಬಾಡೂಟಕ್ಕೆ ಮನೆಯಲ್ಲೇ ಮಾಡಿ ನೋಡಿ

Share :

Published September 22, 2024 at 9:46am

Update September 22, 2024 at 9:49am

    ಮನೆಯಲ್ಲಿಯೇ ರೆಸಿಪಿ ಮಾಡಿ ಭರ್ಜರಿ ಊಟ ಮಾಡಿ

    ಮ್ಯಾರಿ ಮಿ ಚಿಕನ್ ರೆಸಿಪಿ ಯಾವ ದೇಶದ್ದೂ ಗೊತ್ತಾ?

    ರುಚಿ ರುಚಿಯಾದ ಚಿಕನ್​ ಅಡುಗೆ ಹೀಗೆ ಮಾಡಿ ನೋಡಿ

ಭಾನುವಾರ ಬಾಡೂಟ ಮಾಡಲು ಬಯಸುವವರೇ ಜಾಸ್ತಿ. ಅದರಲ್ಲೂ ಮನೆಯಲ್ಲಿಯೇ ರೆಸಿಪಿ ಮಾಡಿ ಭರ್ಜರಿ ಊಟ ಮಾಡಲು ಬಯಸುತ್ತಾರೆ. ಅಂತವರಿಗಾಗಿ ಇಟಲಿ ಮೂಲದ ರೆಸಿಪಿಯೊಂದಿದೆ. ಇದಕ್ಕೆ ‘​ಮ್ಯಾರಿ ಮಿ ಚಿಕನ್’ ಎಂದು ಕರೆಯಲಾಗುತ್ತದೆ. ಒಂದು ಬಾರಿ ಟ್ರೈ ಮಾಡಿ ನೋಡಿ.

ಮ್ಯಾರಿ ಮಿ ಚಿಕನ್​

ಮೊದಲಿಗೆ ಶುಚಿಯಾದ ಚಿಕನ್​ ಲೆಗ್ ತೆಗೆದುಕೊಂಡು ಅದಕ್ಕೆ ಉಪ್ಪು, ಕಾಳು ಮೆಣಸಿನ ಹುಡಿ ಹಾಕಿ ಇಟ್ಟುಕೊಳ್ಳಿ. ಬಳಿಕ ಬಾಣಲೆಯನ್ನು ತೆಗೆದುಕೊಂಡು ​ಕೊಂಚ ಆಲೀವ್​ ಎಣ್ಣೆ ಹಾಕಿ. ಹದ ಬೆಂಕಿಗೆ ಬಾಣಲೆ ಬಿಸಿಯಾದಂತೆ ಬೆಣ್ಣೆಯನ್ನು ಹಾಕಿ.

ಆಲ್​ ಪರ್ಪಸ್​ ಫ್ಲೇವರ್​ ಪೌಡರನ್ನು ಒಂದು ಪ್ಲೇಟ್​ಗೆ ಸುರಿದು ಬಳಿಕ ಅದಕ್ಕೆ ಶುಚಿಯಾದ ಚಿಕನ್​ ಲೆಗ್ ಅನ್ನು ಅದ್ದಿಟ್ಟುಕೊಳ್ಳಿ. ನಂತರ ಕಾದ ಬೆಣ್ಣೆ ಇರುವ ಬಾಣಲೆಗೆ ಒಂದೊಂದರಂತೆ ಚಿಕನ್​ ಹಾಕಿ. 7-8 ನಿಮಿಷಗಳ ಕಾಲ ಬೇಯಿಸಿ ಬಳಿಕ ಬದಿಗಿಟ್ಟುಕೊಳ್ಳಿ.

ಇದನ್ನೂ ಓದಿ: ನಾಗಮಂಗಲ ಗಲಭೆ ಪ್ರಕರಣದಲ್ಲಿ ಗ್ರಾಮ ತೊರೆದಿದ್ದ ಯುವಕ ಸಾವು.. ಮಗನ ಅಂತ್ಯಕ್ರಿಯೆಗೆ ಜೈಲಿನಿಂದ ಬರಲಿರುವ ತಂದೆ

ನಂತರ ಅದೇ ಬಾಣಲೆಗೆ ಕೊಂಚ ಮೆಣಸಿನ ಪೌಡರ್​, ಒಣಗಿದ ಒರಿಗಾನೋ ಪೌಡರ್​, ಒಣ ಅಥವಾ ಹಸಿ ಥೈಮ್​ (ಪುದೀನ ಪ್ರಭೇದಕ್ಕೆ ಸೇರಿರುವ ಎಲೆ), ರುಚಿಗೆ ತಕ್ಕಂತೆ ಬೆಳ್ಳುಳ್ಳಿ ಪೇಸ್ಟ್​​ ಜೊತೆಗೆ ಒಂದು ಚಮಚ ಟೊಮ್ಯಾಟೋ ಪೇಸ್ಟ್​​, ಒಂದು ಚಮಚ ಡಿಜಾನ್​ ಮಸ್ಟರ್ಡ್​​ (ಸಾಸಿವೆ, ಬಿಳಿ ವೈನ್​ ಅಥವಾ ವಿನೆಗರ್​, ಉಪ್ಪು ಮತ್ತು ನೀರಿನಿಂದ ತಯಾರಿಸುವ ಪದಾರ್ಥ) ಸೇರಿಸಬೇಕು. ನಂತರ ಚಿಕನ್​ ಸ್ಟಾಕ್​​ (ಕೋಳಿ ಮೂಳೆಯನ್ನು ಕುದಿಸಿದ ಬಳಿಕ ಅದರಿಂದ ಸಿಗುವ ರಸ) ಸೇರಿಸಬೇಕು. ಬಳಿಕ ಕೊಂಚ ಬಿಳಿ ಕ್ರೀಮ್, ಒಣ ಮತ್ತು ಕತ್ತರಿಸಿದ ಟೊಮ್ಯಾಟೋ ಸಾಸ್​​, ಬಳಿಕ ಲಿಂಬೆ ಹಣ್ಣು, ನುಣ್ಣಗೆ ಕತ್ತರಿಸಿ ಇಟ್ಟುಕೊಂಡ ಪಾಲಕ್​ ಸೊಪ್ಪು ಸೇರಿಸಿ. ಬಳಿಕ ಚೀಸ್​​ ಸೇರಿಸಿ.

ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕೋರು ಮುಂದೆ ಸ್ನೇಹಿತರಾಗಬಹುದು ಎಂದ ಕಿಚ್ಚ.. ಈ ಮಾತನ್ನು ಹೇಳಿದ್ದು ಮತ್ಯಾರಿಗೂ ಅಲ್ಲ..!

ಇಷ್ಟಾದ ಬಳಿಕ ಕೊಂಚ ಬೇಯಿಸಿ ಬದಿಗಿಟ್ಟ ಚಿಕನನ್ನು ಬಾಣಲೆಯಲ್ಲಿರುವ ಮಸಾಲೆಗೆ ಸೇರಿಸಿ, ರುಚಿಗೆ ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ನಂತರ ಕೊಂಚ ಹೊತ್ತು ಬೇಯಲು ಬಿಡಿ. ಬೆಂದ ನಂತರ ಸವಿಯಲು ಚಿಕನ್​ ಮ್ಯಾರಿ ಮಿ ಸವಿಯಲು ರೆಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

​​‘ಮ್ಯಾರಿ ಮಿ ಚಿಕನ್’ ತಿಂದಿದ್ದೀರಾ? ಭಾನುವಾರದ ಬಾಡೂಟಕ್ಕೆ ಮನೆಯಲ್ಲೇ ಮಾಡಿ ನೋಡಿ

https://newsfirstlive.com/wp-content/uploads/2024/09/Chicken-Marry-Me-1.jpg

Load More