ಮನೆಯಲ್ಲಿಯೇ ರೆಸಿಪಿ ಮಾಡಿ ಭರ್ಜರಿ ಊಟ ಮಾಡಿ
ಮ್ಯಾರಿ ಮಿ ಚಿಕನ್ ರೆಸಿಪಿ ಯಾವ ದೇಶದ್ದೂ ಗೊತ್ತಾ?
ರುಚಿ ರುಚಿಯಾದ ಚಿಕನ್ ಅಡುಗೆ ಹೀಗೆ ಮಾಡಿ ನೋಡಿ
ಭಾನುವಾರ ಬಾಡೂಟ ಮಾಡಲು ಬಯಸುವವರೇ ಜಾಸ್ತಿ. ಅದರಲ್ಲೂ ಮನೆಯಲ್ಲಿಯೇ ರೆಸಿಪಿ ಮಾಡಿ ಭರ್ಜರಿ ಊಟ ಮಾಡಲು ಬಯಸುತ್ತಾರೆ. ಅಂತವರಿಗಾಗಿ ಇಟಲಿ ಮೂಲದ ರೆಸಿಪಿಯೊಂದಿದೆ. ಇದಕ್ಕೆ ‘ಮ್ಯಾರಿ ಮಿ ಚಿಕನ್’ ಎಂದು ಕರೆಯಲಾಗುತ್ತದೆ. ಒಂದು ಬಾರಿ ಟ್ರೈ ಮಾಡಿ ನೋಡಿ.
ಮ್ಯಾರಿ ಮಿ ಚಿಕನ್
ಮೊದಲಿಗೆ ಶುಚಿಯಾದ ಚಿಕನ್ ಲೆಗ್ ತೆಗೆದುಕೊಂಡು ಅದಕ್ಕೆ ಉಪ್ಪು, ಕಾಳು ಮೆಣಸಿನ ಹುಡಿ ಹಾಕಿ ಇಟ್ಟುಕೊಳ್ಳಿ. ಬಳಿಕ ಬಾಣಲೆಯನ್ನು ತೆಗೆದುಕೊಂಡು ಕೊಂಚ ಆಲೀವ್ ಎಣ್ಣೆ ಹಾಕಿ. ಹದ ಬೆಂಕಿಗೆ ಬಾಣಲೆ ಬಿಸಿಯಾದಂತೆ ಬೆಣ್ಣೆಯನ್ನು ಹಾಕಿ.
ಆಲ್ ಪರ್ಪಸ್ ಫ್ಲೇವರ್ ಪೌಡರನ್ನು ಒಂದು ಪ್ಲೇಟ್ಗೆ ಸುರಿದು ಬಳಿಕ ಅದಕ್ಕೆ ಶುಚಿಯಾದ ಚಿಕನ್ ಲೆಗ್ ಅನ್ನು ಅದ್ದಿಟ್ಟುಕೊಳ್ಳಿ. ನಂತರ ಕಾದ ಬೆಣ್ಣೆ ಇರುವ ಬಾಣಲೆಗೆ ಒಂದೊಂದರಂತೆ ಚಿಕನ್ ಹಾಕಿ. 7-8 ನಿಮಿಷಗಳ ಕಾಲ ಬೇಯಿಸಿ ಬಳಿಕ ಬದಿಗಿಟ್ಟುಕೊಳ್ಳಿ.
ಇದನ್ನೂ ಓದಿ: ನಾಗಮಂಗಲ ಗಲಭೆ ಪ್ರಕರಣದಲ್ಲಿ ಗ್ರಾಮ ತೊರೆದಿದ್ದ ಯುವಕ ಸಾವು.. ಮಗನ ಅಂತ್ಯಕ್ರಿಯೆಗೆ ಜೈಲಿನಿಂದ ಬರಲಿರುವ ತಂದೆ
ನಂತರ ಅದೇ ಬಾಣಲೆಗೆ ಕೊಂಚ ಮೆಣಸಿನ ಪೌಡರ್, ಒಣಗಿದ ಒರಿಗಾನೋ ಪೌಡರ್, ಒಣ ಅಥವಾ ಹಸಿ ಥೈಮ್ (ಪುದೀನ ಪ್ರಭೇದಕ್ಕೆ ಸೇರಿರುವ ಎಲೆ), ರುಚಿಗೆ ತಕ್ಕಂತೆ ಬೆಳ್ಳುಳ್ಳಿ ಪೇಸ್ಟ್ ಜೊತೆಗೆ ಒಂದು ಚಮಚ ಟೊಮ್ಯಾಟೋ ಪೇಸ್ಟ್, ಒಂದು ಚಮಚ ಡಿಜಾನ್ ಮಸ್ಟರ್ಡ್ (ಸಾಸಿವೆ, ಬಿಳಿ ವೈನ್ ಅಥವಾ ವಿನೆಗರ್, ಉಪ್ಪು ಮತ್ತು ನೀರಿನಿಂದ ತಯಾರಿಸುವ ಪದಾರ್ಥ) ಸೇರಿಸಬೇಕು. ನಂತರ ಚಿಕನ್ ಸ್ಟಾಕ್ (ಕೋಳಿ ಮೂಳೆಯನ್ನು ಕುದಿಸಿದ ಬಳಿಕ ಅದರಿಂದ ಸಿಗುವ ರಸ) ಸೇರಿಸಬೇಕು. ಬಳಿಕ ಕೊಂಚ ಬಿಳಿ ಕ್ರೀಮ್, ಒಣ ಮತ್ತು ಕತ್ತರಿಸಿದ ಟೊಮ್ಯಾಟೋ ಸಾಸ್, ಬಳಿಕ ಲಿಂಬೆ ಹಣ್ಣು, ನುಣ್ಣಗೆ ಕತ್ತರಿಸಿ ಇಟ್ಟುಕೊಂಡ ಪಾಲಕ್ ಸೊಪ್ಪು ಸೇರಿಸಿ. ಬಳಿಕ ಚೀಸ್ ಸೇರಿಸಿ.
ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕೋರು ಮುಂದೆ ಸ್ನೇಹಿತರಾಗಬಹುದು ಎಂದ ಕಿಚ್ಚ.. ಈ ಮಾತನ್ನು ಹೇಳಿದ್ದು ಮತ್ಯಾರಿಗೂ ಅಲ್ಲ..!
ಇಷ್ಟಾದ ಬಳಿಕ ಕೊಂಚ ಬೇಯಿಸಿ ಬದಿಗಿಟ್ಟ ಚಿಕನನ್ನು ಬಾಣಲೆಯಲ್ಲಿರುವ ಮಸಾಲೆಗೆ ಸೇರಿಸಿ, ರುಚಿಗೆ ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ನಂತರ ಕೊಂಚ ಹೊತ್ತು ಬೇಯಲು ಬಿಡಿ. ಬೆಂದ ನಂತರ ಸವಿಯಲು ಚಿಕನ್ ಮ್ಯಾರಿ ಮಿ ಸವಿಯಲು ರೆಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ