ಬೆಂಗಳೂರಲ್ಲಿ ಮದುವೆ ಫಸ್ಟ್.. ಪೇಮೆಂಟ್ ನೆಕ್ಸ್ಟ್‌; ವಧು-ವರರಿಗೆ 0% ಬಡ್ಡಿ ದರದಲ್ಲಿ EMI ಆಫರ್‌!

author-image
Veena Gangani
Updated On
ಬೆಂಗಳೂರಲ್ಲಿ ಮದುವೆ ಫಸ್ಟ್.. ಪೇಮೆಂಟ್ ನೆಕ್ಸ್ಟ್‌; ವಧು-ವರರಿಗೆ 0% ಬಡ್ಡಿ ದರದಲ್ಲಿ EMI ಆಫರ್‌!
Advertisment
  • ನಿಮ್ಮ ಮದುವೆಗೆ ದುಡ್ಡು ಹೊಂದಿಸಲು ಆಗ್ತಾ ಇಲ್ವಾ?
  • ನೀವು ಸಖತ್​ ಗ್ರ್ಯಾಂಡ್​ ಆಗಿ ಮದುವೆ ಆಗಬೇಕಾ?
  • ನಿಮಗಾಗಿಯೇ ಬಂದಿದೆ ‘Marry Now Pay Later’ ಏನಿದು!

ಬೆಂಗಳೂರು: ಎಲ್ಲಾ ಪೋಷಕರು ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡೋ ಕನಸು ಇಟ್ಟುಕೊಂಡಿರುತ್ತಾರೆ. ಆದ್ರೆ ಈ ದುಬಾರಿ ದುನಿಯಾದಲ್ಲಿ ಮಿಡ್ಲ್ ಕ್ಲಾಸ್​ ಪೋಷಕರಿಗೆ ಭಾರೀ ಹೊಡೆತ ಬಿಳುತ್ತೆ. ಹೀಗಾಗಿ ಮದುವೆಗೆ ದುಡ್ಡು ಹೊಂದಿಸಲು ಪೋಷಕರು ಟೆನ್ಷನ್​ನಲ್ಲಿ ಇರುತ್ತಾರೆ. ಆದರೆ ಇದೀಗ ಪೋಷಕರ ಕನಸು ನನಸು ಮಾಡಲು ಹೊಸ ಮಾರ್ಗವೊಂದು ಬಂದಿದೆ. ಈಗ ವೆಡ್ಡಿಂಗ್ ಪ್ಲಾನರ್​ಗಳಿಂದ ಇಎಂಐ ಮದುವೆಯ ಟ್ರೆಂಡ್ ಶುರುವಾಗಿದೆ. ಅದುವೆ Marry Now Pay Later.

ಇದನ್ನೂ ಓದಿ: ಕೇವಲ ಕಂಪ್ಯೂಟರ್​ ಸೈನ್ಸ್​ ಮಾತ್ರವಲ್ಲ.. ಇಂಜಿನಿಯರಿಂಗ್​​ನಲ್ಲಿ ಇವೆ ಸಾಕಷ್ಟು ಸ್ಪೆಷಲ್​ ಕೋರ್ಸ್​ಗಳು

publive-image

ಹೌದು, ಸಿಲಿಕಾನ್​ ಸಿಟಿಯಲ್ಲಿ EMI ಮದುವೆ ಟ್ರೆಂಡ್ ಆಗ್ತಿದೆ. ದುಬಾರಿ ದುನಿಯಾದ ನಡುವೆ ವಧು-ವರರಿಗೆ ವೆಡ್ಡಿಂಗ್ ಪ್ಲಾನರ್​ಗಳು ಆಫರ್​ವೊಂದನ್ನು ಬಿಟ್ಟಿದ್ದಾರೆ. ಮದುವೆ ಮಾಡಿಕೊಳ್ಳುವುದಕ್ಕೆ ರೆಡಿ ಆಗಿರೋ ವಧು ವರರಿಗೆ EMI ಆಪ್ಷನ್ ನೀಡಲಾಗಿದೆ. ಸದ್ಯ 0% ಬಡ್ಡಿ ದರದಲ್ಲಿ EMIನಲ್ಲಿ‌ ಮದುವೆ ಮಾಡಿಕೊಳ್ಳಬಹುದಾಗಿದೆ.

publive-image

EMIನಲ್ಲಿ ವಿವಾಹ..!

ಮದುವೆಗೆ ದುಡ್ಡು ಹೊಂದಿಸಲು ಸಾಧ್ಯವಾಗದೆ ಟೆನ್ಷನ್ ನಲ್ಲಿದ್ದವರಿಗೆ EMIನಲ್ಲಿ‌ ಮದುವೆ ಮಾಡಬಹುದಾಗಿದೆ. ವೆಡ್ಡಿಂಗ್ ಪ್ಲಾನರ್​ಗಳು ಇಎಂಐ ಆಪ್ಷನ್ ಕೊಟ್ಟಿದ್ದಾರೆ. ಕೆಲ ಅಗತ್ಯ ಡಾಕ್ಯುಮೆಂಟ್ಸ್ ಪಡೆದು EMIನಲ್ಲಿ ಹಣ ಪಾವತಿ ಮಾಡಲು ಅವಕಾಶ ನೀಡಲಾಗಿದೆ. EMI ಮ್ಯಾರೇಜ್ ಕಾನ್ಸೆಪ್ಟ್ ಹೊಸದಾಗಿರೋದರಿಂದ ಈಗ 0% EMIನಲ್ಲಿ ಮದುವೆ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಗ್ರಾಹಕರನ್ನ ಸೆಳೆಯಲು ವೆಡ್ಡಿಂಗ್ ಪ್ಲಾನರ್​ಗಳು ಸಖತ್​ ಪ್ಲಾನ್​ ಮಾಡಿಕೊಂಡಿದ್ದಾರೆ. ಕೆಲ ವೆಡ್ಡಿಂಗ್ ಪ್ಲಾನರ್‌ಗಳಿಂದ‌ 24 ತಿಂಗಳ‌ವರೆಗೆ EMI ಕಟ್ಟಲು ಅವಕಾಶ ನೀಡಲಾಗಿದೆ. ಆಯಾ ವೆಡ್ಡಿಂಗ್ ಪ್ಲಾನರ್ ಗಳಿಂದ ಬೇರೆ ಬೇರೆ ರೀತಿಯಲ್ಲಿ ಕಾಲಾವಕಾಶ ನೀಡಲಾಗುತ್ತದೆ.

publive-image

ಇನ್ನೂ ಕೆಲ ವೆಡ್ಡಿಂಗ್ ಪ್ಲಾನರ್​ಗಳು ಅವರೇ ಅಥವಾ ಫೈನಾನ್ಸಿಯಲ್ ಕಂಪನಿ ಬ್ಯಾಂಕ್​ಗಳಿಂದ ಇಎಂಐ ಸಾಲ ಸೌಲಭ್ಯ ನೀಡುತ್ತಿದ್ದಾರೆ. ವಧು-ವರನ ಹಿನ್ನೆಲೆ ಚೆಕ್ ಮಾಡಿದಾಗ, ಇವರಿಂದ ಮುಂದೆಯೂ ನಮಗೆ ಲಾಭವಾಗುತ್ತೆಂದು ಅನ್ಸಿದ್ರೆ, ಇವರಿಗೆ ಉತ್ತಮ ಸೌಲಭ್ಯ ಕೊಟ್ಟು EMIನಲ್ಲಿ ಮದ್ವೆ ಮಾಡ್ಸಿ ಕೊಟ್ರೆ, ಇವರಿಂದ ಮುಂದೆ ನಮಗೆ ಮತ್ತಷ್ಟೂ ಕಸ್ಟಮರ್ ಸಿಗ್ತಾರೆಂದು ಅನ್ಸಿದ್ರೆ, ಎಷ್ಟು ಲಕ್ಷ ಖರ್ಚು ಮಾಡೋದಕ್ಕೆ ವೆಡ್ಡಿಂಗ್ ಪ್ಲಾನರ್​ಗಳು ತಯಾರಿ ನಡೆಸುತ್ತಿದ್ದಾರೆ.

EMI ಮದುವೆಯ ಸೌಲಭ್ಯಗಳೇನು?

  • ಮ್ಯಾರೇಜ್ ಡೆಕಾರೇಷನ್
  • ಮದುವೆ ಊಟ ( ವೆಜ್ - ನಾನ್ ವೆಜ್)
  • ಮದುವೆಯ ಸ್ಥಳ (ಹಾಲ್ ಚಾರ್ಜರ್ಸ್)
  • ಮದುವೆಯ ಲೈಟಿಂಗ್ಸ್
  • ಮ್ಯಾರೇಜ್ ಫೋಟೋಗ್ರಫಿ
  • ಮ್ಯಾರೇಜ್ ಆಲ್ಬಮ್
  • ಬ್ರೈಡ್ ಮೇಕಪ್
  • ಸೌಂಡ್ ಸಿಸ್ಟಮ್ ಹಾಗೂ ಡಿಜೆ
  • ಸ್ಪೆಷಲ್ ಎಂಟ್ರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment