/newsfirstlive-kannada/media/post_attachments/wp-content/uploads/2024/07/Druvasarja-AP-Arjun.jpg)
ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಮಾರ್ಟಿನ್’ ಸಿನಿಮಾದ ನಿರ್ಮಾಪಕರಿಗೆ ನಿರ್ದೇಶಕ ಎಪಿ ಅರ್ಜುನ್ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಿಜಿ ಕೆಲಸದ ವಿಚಾರದಲ್ಲಿ ಉದಯ್ ಕೆ ಮೆಹ್ತಾಗೆ ಗ್ರಾಫಿಕ್ಸ್ ಕಂಪನಿಯೊಂದು 2.5 ಕೋಟಿ ರೂಪಾಯಿ ಮೋಸ ಮಾಡಿದ್ದು, ಇದರಲ್ಲಿ 50 ಲಕ್ಷ ರೂಪಾಯಿ ಎಪಿ ಅರ್ಜುನ್ ಕಮೀಷನ್ ತಗೊಂಡಿದ್ದಾರೆ ಎಂಬ ಆರೋಪ ಬಂದಿದೆ.
ಈ ವಿಚಾರವಾಗಿ ಪರೋಕ್ಷವಾಗಿ ಇನ್ಸ್ಟಾಗ್ರಾಂ ಸ್ಟೇಟಸ್ ಹಾಕಿರುವ ಎಪಿ ಅರ್ಜುನ್ "ಸತ್ಯ ನೀತಿ ಧರ್ಮವಿದ್ದರೆ ಹಾರಾಡಿ ಮೆರೆದವರು ತೂರಾಡಿ ಹೋಗುವುದನ್ನ ಕಣ್ಣಾರೆ ನೋಡುವೆ" ಎಂದು ಸ್ಟೇಟಸ್ ಹಂಚಿಕೊಂಡಿದ್ದಾರೆ.
ಮಾರ್ಟಿನ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ. ಅಕ್ಟೋಬರ್ 11ಕ್ಕೆ ವಿಶ್ವದಾದ್ಯಂತ ‘ಮಾರ್ಟಿನ್’ ಬಿಡುಗಡೆಯಾಗಲಿದೆ. ಈ ಸಿನಿಮಾದ ಸಿಜಿ ಕೆಲಸವನ್ನು ಚಿತ್ರತಂಡ ಡಿಜಿಟೆಲ್ ಟೆರೆನ್ ಕಂಪನಿಗೆ ವಹಿಸಿತ್ತು. ಆದರೆ ಡಿಜಿಟೆಲ್ ಟೆರೆನ್ ಕಂಪನಿ ಮಾರ್ಟಿನ್ ನಿರ್ಮಾಪಕರಿಗೆ ಮೋಸ ಮಾಡಿದೆ.
[caption id="attachment_76913" align="alignnone" width="800"] ಡಿಜಿಟೆಲ್ ಟೆರೆನ್ ನಿರ್ದೇಶಕ ಸತ್ಯಾ ರೆಡ್ಡಿ[/caption]
ಇನ್ನು ಈ ವಿಚಾರವಾಗಿ ನಿರ್ಮಾಪಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಡಿಜಿಟೆಲ್ ಟೆರೆನ್ ನಿರ್ದೇಶಕರಾದ ಸುನಿಲ್ ರೆಡ್ಡಿ, ಸತ್ಯಾ ರೆಡ್ಡಿ ಮೇಲೆ ದೂರು ನೀಡಿದ್ದಾರೆ. ಆದರೆ ಸತ್ಯಾ ರೆಡ್ಡಿಯವರು ಇದರಲ್ಲಿ ನಿರ್ದೇಶಕ ಅರ್ಜುನ್ ಗೆ ಕಮಿಷನ್ ನೀಡಿರೋದಾಗಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ