/newsfirstlive-kannada/media/post_attachments/wp-content/uploads/2024/10/DHRUVA_MARTIN_2.jpg)
ಬೆಂಗಳೂರು: ಮಾರ್ಟಿನ್ ಸಿನಿಮಾ ಮಾಡುವಾಗ ಕೆಲವರು ಪರಿಸ್ಥಿತಿ ಬಳಸಿಕೊಂಡರು. ಇದಕ್ಕೆಲ್ಲ ಅಭಿಮಾನಿಗಳು ಉತ್ತರ ಕೊಡುತ್ತಾರೆ ಎಂದು ಧ್ರವಾ ಸರ್ಜಾ ಅವರು ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸಲ್ಲಿ ನ್ಯೂಸ್ಫಸ್ಟ್ ಜೊತೆ ಮಾತನಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.. ಪ್ರತಿ ಸಿನಿಮಾನೂ ಕಷ್ಟಪಟ್ಟು, ಶ್ರದ್ಧೆಯಿಂದ ಮಾಡುವಂತೆ ಈ ಸಿನಿಮಾ ಮಾಡಿದ್ದೇವೆ. ಈ ಸಿನಿಮಾಕ್ಕೆ ಬಂದಿದ್ದ ಸಾಕಷ್ಟು ಸಮಸ್ಯೆಗಳನ್ನು ದಾಟಿಕೊಂಡು ಬಂದು ಯಶಸ್ವಿಯಾಗಿ ಚಿತ್ರ ಮಾಡಲಾಗಿದೆ. ಎಲ್ಲ ಕನ್ನಡ ಕಲಾಭಿಮಾನಿಗಳು ಹಾಗೂ ತಾಯಂದಿರು ನನ್ನನ್ನು ಆಶೀರ್ವಾದ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ. ವಿಜಯದಶಮಿ, ತಾಯಿ ಚಾಮುಂಡಿ ತಾಯಿಯ ಅನುಗ್ರಹ ಈ ಸಿನಿಮಾ ಮೇಲೂ ಒಂಚೂರು ಇರುತ್ತೆ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಿನ್ಸ್ಗೆ ಮಾರ್ಟಿನ್ ರಿಲೀಸ್ ಸಂಭ್ರಮ.. ಮನೆಗೆ ಬಂದಿದ್ದ ಗೋವುಗಳಿಗೆ ಪೂಜೆ.. ತಾಯಿ ಆಶೀರ್ವಾದ ಪಡೆದ ಧ್ರುವ
ಇವತ್ತು ನಮ್ಮ ಮನೆಗೆ ಗೋವುಗಳು ಬಂದಿದ್ದೆ ಪಾಸಿಟೀವ್ ಆಗಿರೋದು. ಹಸುಗಳನ್ನ ನೀವು ಕರೆಸಿದ್ದ ಎಂದು ನಮ್ಮ ಹುಡುಗರನೆಲ್ಲ ಕೇಳಿದೆ. ಅವರೆಲ್ಲ ಇಲ್ಲ ಅಂದರು. ಗೋವುಗಳೇ ಮನೆಗೆ ಬಂದಿವೆ ಎಂದರೆ ತಾಯಿಯ ಆಶೀರ್ವಾದ ಇದ್ದೇ ಇದೆ. ಸಿನಿಮಾ ಬಗ್ಗೆ ಪಾಸಿಟಿವ್ ಆಗಿ ಕೇಳಿ ಬರುತ್ತಿದೆ. ಮಾರ್ಟಿನ್ ಸಿನಿಮಾ ಸಾಕಷ್ಟು ತೊಂದರೆ ಎದುರಾಗಿದ್ದವು. ಕೆಲ ಸ್ನೇಹಿತರು ಪರಿಸ್ಥಿತಿ ಬಳಸಿಕೊಂಡರು. ಅಭಿಮಾನಿಗಳು ಅದಕ್ಕೆಲ್ಲ ಉತ್ತರ ಕೊಡುತ್ತಾರೆ. ಅಭಿಮಾನಿಗಳನ್ನ ಮಾತ್ರ ನಾನು ನಂಬಿರೋದು ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ