newsfirstkannada.com

ಮಾರ್ಟಿನ್ ಒಂದೇ ಅಲ್ಲ.. ಸತ್ಯಾ ರೆಡ್ಡಿ, ಸುನೀಲ್​ ರೆಡ್ಡಿಯಿಂದ ಸ್ಯಾಂಡಲ್​ವುಡ್​ಗೆ ಪಂಗನಾಮ.. AP ಅರ್ಜುನ್ ಹೇಳಿದ ಸತ್ಯವೇನು..?

Share :

Published July 27, 2024 at 8:17am

Update July 27, 2024 at 9:13am

    ಕನ್ನಡದ ಯಾವ್ಯಾವ ಸಿನಿಮಾಗಳಿಗೆ ಮೋಸ ಮಾಡಿದ್ದಾರೆ ಗೊತ್ತಾ..?

    ಮಾರ್ಟಿನ್​ ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ

    ಹೈದರಾಬಾದ್​ ಮೂಲದ ಕಂಪನಿಯಿಂದ ರವಿಶಂಕರ್​ಗೂ ಮೋಸ

ಎಷ್ಟೋ ಅಡೆ-ತಡೆಗಳ ಮಧ್ಯೆ ಧ್ರುವ ಸರ್ಜಾ ನಟನೆಯ ಮಾರ್ಟಿನ್​ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಅದ್ಯಾಕೋ ಏನೋ ಕಳೆದೊಂದಷ್ಟು ತಿಂಗಳಿಂದ ಮಾರ್ಟಿನ್​ ಸುತ್ತ ಒಂದಲ್ಲ ಒಂದು ನೆಗೆಟಿವ್​ ವಿಚಾರ ಸುತ್ತಿಕೊಳ್ತಿದೆ. ಇದೀಗ ನಿರ್ದೇಶಕ ಎ.ಪಿ.ಅರ್ಜುನ್​ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಈ ಆರೋಪಕ್ಕೆ ಅರ್ಜುನ್​ ಪ್ರತ್ಯುತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: ಮೊಟ್ಟ ಮೊದಲ ಬಾರಿಗೆ ನೀರಿನ ಮೇಲೆ ಉದ್ಘಾಟನೆಯಾದ ಒಲಿಂಪಿಕ್ಸ್‌​.. ಅದ್ಧೂರಿ ಕ್ರೀಡಾಜಾತ್ರೆಗೆ ವರ್ಣರಂಜಿತ ಚಾಲನೆ

ಮಾರ್ಟಿನ್​.. ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನೆಮಾ.. ಅದರಲ್ಲೂ ಧ್ರುವ ಸರ್ಜಾ – ಎ.ಪಿ.ಅರ್ಜುನ್ ಸಿನಿಮಾ ಅನೌನ್ಸ್ ಆಗ್ತಿದ್ದಂತೆ ಅಭಿಮಾನಿಗಳಲ್ಲಿ ಏನೋ ಒಂದು ಸಂಭ್ರಮ.. ಸಡಗರ.. ಈ ಸಂತೋಷಕ್ಕೆ ಕಾರಣ ಆಗಿದ್ದು ದಶಕದ ನಂತರ ಧ್ರುವ – ಅರ್ಜುನ್ ಒಟ್ಟಿಗೆ ಸೇರ್ತಿರೋದು. ಅದ್ಧೂರಿ ಸಿನಿಮಾದಂತೆ ಮಾರ್ಟಿನ್​ ಭರ್ಜರಿ ಸಕ್ಸಸ್​ ಗಳಿಸ್ಲಿ.. ಈ ಜೋಡಿಗೆ ಮತ್ತೊಂದು ಬಿಗ್ ಹಿಟ್ ಸಿಗ್ಲಿ ಅನ್ನೋದು ಎಲ್ಲರ ಹಾರೈಕೆ ಆಗಿತ್ತು.. ಆರಂಭದಲ್ಲಿ ಎಲ್ಲವೂ ಸರಿಯಿತ್ತು.. ಆದ್ರೆ ಸಿನಿಮಾ ಮುಗಿಯುತ್ತ ಬಂದಂತೆ ‘ಮಾರ್ಟಿನ್’ ಒಡೆದ ಮನೆ ಆಗಿತ್ತು.

ಇದನ್ನೂ ಓದಿ: ಧಾರಾಕಾರ ಮಳೆಗೆ ಸೋರುತ್ತಿರೋ ತಹಶೀಲ್ದಾರ್ ಕಚೇರಿ.. ಅಪಾಯದ ಮಟ್ಟ ಮೀರಿದ ರಾಜ್ಯದ ನದಿಗಳು, ಆತಂಕ

ಚಿತ್ರತಂಡದ ಅತಿಯಾದ ನಂಬಿಕೆ

ಕೋಟಿ ಲೆಕ್ಕದಲ್ಲಿ ಶುರುವಾದ ಮಾರ್ಟಿನ್ ಕನಸು ನೋಡ ನೋಡ್ತಿದ್ದಂತೆ, ಕೋಟಿ ಕೋಟಿ ದಾಟೋಕೆ ಶುರುವಾಗಿತ್ತು. ಸಿನಿಮಾ ಚೆನ್ನಾಗಿ ಬರಲಿ, ಅನ್ನೋ ಒಂದೇ ಒಂದು ಸ್ವಾರ್ಥ ಇದಕ್ಕೆ ಕಾರಣ ಆಗಿತ್ತು. ಆದರೆ ಸಿನಿಮಾ ಬರೋದು ಮಾತ್ರ ಪೋಸ್ಟ್​ ಪೋನ್ಡ್​ ಆಗ್ತಾನೆ ಇತ್ತು. ಇದಕ್ಕೆ ಕಾರಣ ಆಗಿದ್ದು, ಚಿತ್ರತಂಡದ ಅತಿಯಾದ ನಂಬಿಕೆ.

ಇದನ್ನೂ ಓದಿ: ಮೊಬೈಲ್ ಬಳಸುವವರೇ ಎಚ್ಚರ.. ಒಂದು ಕಾಲ್ ರಿಸೀವ್ ಮಾಡಿದ್ದಕ್ಕೆ ₹1 ಕೋಟಿ ಮಾಯ; ಆಗಿದ್ದೇನು?

ಮಾರ್ಟಿನ್‌ ಸಿನಿಮಾಗೆ ಗ್ರಾಫಿಕ್‌ ವರ್ಕ್‌ ಮಾಡ್ಕೊಡ್ತೀವಿ ಅಂತ ಹೈದ್ರಾಬಾದ್ ಮೂಲದ ಡಿಜಿಟಲ್ ಟೆರೆನ್​ ಅನ್ನೋ ಸಂಸ್ಥೆಯವರು ಎರಡೂವರೆ ಕೋಟಿ ಹಣ ಪಡೆದಿದ್ರು. ಆದ್ರೆ ಇತ್ತ ಕೆಲಸ ಮುಗಿಸದೇ, ಟಾ ಟಾ ಬೈ ಬೈ ಮಾಡಿ ಕಂಪನಿಯ ಸತ್ಯಾ ರೆಡ್ಡಿ, ಸುನೀಲ್​ ರೆಡ್ಡಿ ಓಡಿ ಹೋಗಿದ್ದಾರಂತೆ. ಈ ವಂಚನೆಯ ವಿರುದ್ಧ ನಿರ್ಮಾಪಕ ಉದಯ್​ ಮೆಹ್ತಾ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಈ ಬೆನ್ನಲ್ಲೇ ಪೊಲೀಸ್ ವಿಚಾರಣೆ ವೇಳೆ ಆರೋಪಿ ಸತ್ಯ ರೆಡ್ಡಿ, ನಿರ್ದೇಶಕ ಎ.ಪಿ.ಅರ್ಜುನ್ ಹೆಸರು ಪ್ರಸ್ತಾಪ ಮಾಡಿದ್ದಾರೆ. ತಾವು ಪಡೆದ ಎರಡೂವರೆ ಕೋಟಿ ಹಣದಲ್ಲಿ ಅರ್ಜುನ್​ 50 ಲಕ್ಷ ಕಮಿಷನ್​ ಪಡೆದಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಇದು ಚಿತ್ರತಂಡದಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸಿದೆ.

ಇದೆಲ್ಲ ಆರೋಪ- ಪ್ರತ್ಯಾರೋಪಗಳಿಗೆ ಫುಲ್ ಸ್ಟಾಪ್ ಕೊಡಲು ನಿರ್ದೇಶಕ ಎ.ಪಿ.ಅರ್ಜುನ್​ ಪ್ರೆಸ್ ಮೀಟ್ ಕರೆದಿದ್ದರು. ಈ ವೇಳೆ ತಮ್ಮ ವಿರುದ್ಧ ನಡೆದಿರೋ ಷಡ್ಯಂತ್ರದ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಏನಾದ್ರು ಕೊಟ್ಟಿದ್ದೇವೆ ಎನ್ನುವುದಕ್ಕೆ ಸಾಕ್ಷಿ ಇರಬೇಕಲ್ವಾ?. ಅದು 10 ರೂಪಾಯಿ ಅಲ್ಲ, 1 ಒಂದು ಲಕ್ಷ, ಎರಡು ಲಕ್ಷ ಅಲ್ಲ, ಒಬ್ಬರು 50 ಲಕ್ಷ ಅಂತಾರೆ, ಮತ್ತೊಬ್ಬರು 75 ಲಕ್ಷ ಅಂತಾರೆ, ಇನ್ನೊಬ್ಬರು 1 ಕೋಟಿ ರೂಪಾಯಿಗಳು ಅಂತಾರೆ. ಒಂದು ಕೋಟಿ ಹಣವನ್ನು ಒಂದು ಫೋನ್ ಕಾಲ್, ಮೆಸೇಜ್, ಹಣ ಕೊಟ್ಟಿದ್ದು ಎಲ್ಲಿ, ಎಲ್ಲಿ ಡ್ರಾ ಮಾಡಿದ್ದಾನೆ ಎನ್ನುವುದಕ್ಕೆ ಒಂದಾದರೂ ಮಾಹಿತಿ ಇರಬೇಕಲ್ವಾ?.

ಎ.ಪಿ ಅರ್ಜುನ್​, ನಿರ್ದೇಶಕ

ಇದಷ್ಟೇ ಅಲ್ಲದೇ ಆರೋಪಿಗಳಾದ ಸತ್ಯ ರೆಡ್ಡಿ, ಸುನೀಲ್ ರೆಡ್ಡಿ, ಕಾಟೇರ ಸೇರಿದಂತೆ ಹಲವಾರು ಸಿನಿಮಾಗಳಿಗೂ ಮೋಸ ಮಾಡಿರೋದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ನೆಟ್​ನಲ್ಲಿ ಅಬ್ಬರದ ಬ್ಯಾಟಿಂಗ್.. ಸಿಂಹಳೀಯರ ನಾಡಲ್ಲಿ ಘರ್ಜನೆ ಮಾಡ್ತಾರಾ KL ರಾಹುಲ್?

ಅವರು ಮಾರ್ಟಿನ್ ಒಂದೇ ಸಿನಿಮಾ ಮಾಡುತ್ತೇನೆಂದು ಬಂದವರು, ರಾಕ್​​ಲೈನ್ ವೆಂಕಟೇಶ್​ ಅವರ ಕಾಟೇರ, ವೃಷಭ ಒಪ್ಪಿಕೊಳ್ತಾನೆ. ರವಿಶಂಕರ್ ಅವರ ಮಗನದ್ದು ಸಿನಿಮಾ ಮಾಡುತ್ತಿರುತ್ತಾರೆ. ಇದರ ಟೀಸರ್ ಮಾಡಿಸಬೇಕೆಂದು ಅವನ ಕೈಗೆ 20 ಲಕ್ಷ ಕೊಟ್ಟು, ಸೈಮಾ ಕಾರ್ಯಕ್ರಮದಲ್ಲಿ ದೈಬೈನಲ್ಲಿ ಲಾಂಚ್ ಮಾಡಿಕೊಳ್ಳಬೇಕೆಂದು ಅಂದುಕೊಂಡಿರುತ್ತಾರೆ. ಆದರೆ ಅವರಿಗೂ ಹಣ ಮೋಸ ಮಾಡಿದ್ದಾರೆ. ಇದಾದ ಬಳಿಕ ಅವರು ನನಗೆ ಫೋನ್ ಮಾಡಿ 20 ನಿಮಿಷ ಗಳ ಗಳನೇ ಕಣ್ಣೀರು ಹಾಕಿದ್ದರು. ನನ್ನ ಮಗನದ್ದು ಲೈಫ್​ ಹಾಳು ಮಾಡಿಬಿಟ್ಟ ಎಂದು ಅತ್ತು ಬಿಟ್ಟರು.

ಎ.ಪಿ ಅರ್ಜುನ್​, ನಿರ್ದೇಶಕ

ಸದ್ಯಕ್ಕೀಗ ನಿರ್ದೇಶಕ ಎ.ಪಿ.ಅರ್ಜುನ್ ವಿರುದ್ಧ ಕೇಳಿ ಬಂದಿರೋ ಆರೋಪ ತಣ್ಣಗಾಗಿವೆ. ಚಿತ್ರತಂಡದಲ್ಲಿರೋ ಮನಸ್ತಾಪಗಳೆಲ್ಲವೂ ದೂರಾಗಿ. ಮಾರ್ಟಿನ್ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಮಾಡ್ಲಿ ಅನ್ನೋದೇ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾರ್ಟಿನ್ ಒಂದೇ ಅಲ್ಲ.. ಸತ್ಯಾ ರೆಡ್ಡಿ, ಸುನೀಲ್​ ರೆಡ್ಡಿಯಿಂದ ಸ್ಯಾಂಡಲ್​ವುಡ್​ಗೆ ಪಂಗನಾಮ.. AP ಅರ್ಜುನ್ ಹೇಳಿದ ಸತ್ಯವೇನು..?

https://newsfirstlive.com/wp-content/uploads/2024/07/DHRUVA_SARJA_1.jpg

Load More