/newsfirstlive-kannada/media/post_attachments/wp-content/uploads/2024/10/MARTIN-MOVIE.jpg)
ಌಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಸಿನಿಮಾ ಎಂದರೆ ಅಲ್ಲಿ ಭರ್ಜರಿ ಆ್ಯಕ್ಷನ್‌ಗೆ ಕೊರತೆ ಇರುವುದಿಲ್ಲ. ಈ ಬಾರಿ ಮಾರ್ಟಿನ್ ಚಿತ್ರ ಆ್ಯಕ್ಷನ್‌ನಲ್ಲಿ ಈ ಹಿಂದಿನ ಸಿನಿಮಾಗಳನ್ನ ಮೀರಿಸಲಿದೆ ಎಂಬುದು ಈಗಾಗಲೇ ಸಿನಿಮಾದ ಟ್ರೈಲರ್​ ನೋಡಿದವರ ಮಾತು. ಈ ನಡುವೆ ಫ್ಯಾನ್ಸ್​ಗೆ ಮಾರ್ಟಿನ್ ಡಬಲ್ ಧಮಾಕಾ ಕೊಟ್ಟಿದ್ದಾರೆ..
ಧ್ರುವಗೆ ಡಬಲ್ ಧಮಾಕಾ, 1 ವೇದಿಕೆಯಲ್ಲಿ 2 ಸಂಭ್ರಮ.
/newsfirstlive-kannada/media/post_attachments/wp-content/uploads/2024/10/MARTIN-MOVIE-2.jpg)
ನಿನ್ನೆ ಧ್ರುವ ಸರ್ಜಾಗೆ ಡಬಲ್ ಧಮಾಕಾ.. ಒಂದು ಅವರ ಹುಟ್ಟುಹಬ್ಬದ ಸಂಭ್ರಮ. ಇನ್ನೊಂದು ಅವರ ಬಹುನಿರೀಕ್ಷಿತ ಮಾರ್ಟಿನ್ ಚಿತ್ರದ ಪ್ರೀ ರಿಲೀಸ್ ಇವೆಂಟ್. ಈ ಮೂಲಕ ಧ್ರುವ ಡಬಲ್ ಡಬಲ್ ಖುಷಿಯಲ್ಲಿದ್ರು. ಈಗಾಗಲೇ ಹುಬ್ಬಳ್ಳಿಯಲ್ಲಿ ಅಭಿಮಾನಿಗಳನ್ನ ಭೇಟಿಯಾದ ಧ್ರುವ ಸರ್ಜಾ ನಿನ್ನೆ ದಾವಣಗೆರೆಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಇದನ್ನೂ ಓದಿ: Jr NTR ಸಿನಿಮಾದಲ್ಲಿ ಕನ್ನಡಿಗನ ಕಮಾಲ್.. KGFನಲ್ಲೂ ಖದರ್, ‘ದೇವರ’ದಲ್ಲೂ ಸೂಪರ್..!
ಆ್ಯಕ್ಟನ್ ಪ್ರಿನ್ಸ್ ಧ್ರುವ ಸರ್ಜಾ ಪ್ರತಿ ಜನ್ಮ ದಿನಕ್ಕೆ ಬೆಂಗಳೂರಿನಲ್ಲಿಯೇ ಇರ್ತಾ ಇದ್ದರು. ಆದರೆ, ಈ ಸಲ ಹುಟ್ಟುಹಬ್ಬದ ದಿನವೂ ಸಿನಿಮಾ ಪ್ರಚಾರ ಮಾಡೋದ್ರಲ್ಲಿ ಫುಲ್​ ಬಿಸಿಯಾಗಿದ್ದಾರೆ. ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಾರ್ಟಿನ್ ಚಿತ್ರದ ಸ್ಪೆಷಲ್ ಸಾಂಗ್ ರಿಲೀಸ್ ಮಾಡಲಾಗಿದ್ದು, ಈ ಮೂಲಕ ತಮ್ಮ ಜನ್ಮ ದಿನ ಸೆಲೆಬ್ರೇಟ್ ಮಾಡ್ಕೊಂಡಿದ್ದಾರೆ.
ಇದನ್ನೂ ಓದಿ: Devara review: ದೇವರ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್.. JrNTR ಸಿನಿಮಾದ ರಿವ್ಯೂ ಹೇಗಿದೆ?
ಉತ್ತರ ಕರ್ನಾಟಕದ ಜನರು ತೋರೋ ಪ್ರೀತಿಯನ್ನ ಕಣ್ಣಿಗೆ ಒತ್ತಿಕೊಳ್ಳುವ ಧ್ರುವ ಸರ್ಜಾ ಮಾರ್ಟಿನ್ ಚಿತ್ರ ಪ್ರಚಾರಕ್ಕೆ ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ದಾವಣಗೆರೆಗೆ ಬಂದಿದ್ದಾರೆ. ಧ್ರುವ ಅಭಿನಯದ ಮಾರ್ಟಿನ್ ಸಿನೆಮಾದ ಫ್ರೀ ರಿಲೀಸ್ ಇವೆಂಟ್, ದಾವಣಗೆರೆಯ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಮಧ್ಯ ಕರ್ನಾಟಕದಲ್ಲಿ ಅಭಿಮಾನಿಗಳು ಹೆಚ್ಚಾಗಿರೋ ಹಿನ್ನೆಲೆ ಇಲ್ಲಿ ಫ್ರೀ ರಿಲೀಸ್ ಕಾರ್ಯಕ್ರಮ ಪ್ಲಾನ್​ ಮಾಡಲಾಗಿದೆ. ಧ್ರುವ ಸರ್ಜಾಗೆ ಫಸ್ಟ್​ ಚಾನ್ಸ್ ಕೊಟ್ಟ ಡೈರೆಕ್ಟರ್​ ಎ.ಪಿ.ಅರ್ಜುನ್ ತಮ್ಮ ತಂಡವನ್ನ ಹಾಡಿ ಹೊಗಳಿದ್ದಾರೆ.
/newsfirstlive-kannada/media/post_attachments/wp-content/uploads/2024/10/MARTIN-MOVIE-3.jpg)
ಟೀಮ್ ಚಿರಾಯು ತಂಡದಿಂದ 40 ಱಪ್ ಸಿಂಗರ್​ಗಳು ನೀಡಿದ ಪ್ರದರ್ಶನಕ್ಕೆ ಜನ ಫಿದಾ ಆದ್ರು.
ಮಾರ್ಟಿನ್ ಚಿತ್ರದ ಮೂಲಕ ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ. ಇಂಗ್ಲೀಷ್ ಸೇರಿ ಒಟ್ಟು 12 ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ಪ್ಯಾನ್ ವರ್ಲ್ಡ್ ಲೆಕ್ಕದಲ್ಲಿಯೇ ಈ ಚಿತ್ರವನ್ನ ಎಲ್ಲ ಭಾಷೆಯಲ್ಲಿಯೇ ರಿಲೀಸ್ ಮಾಡಲಾಗ್ತಿದೆ. ದಾವಣಗೆರೆ ವೇದಿಕೆಯಲ್ಲಿ ಧ್ರುವ ಡೈಲಾಗ್​ ಮೂಲಕ ರಿಲೀಸ್​ ಡೇಟ್​ ಕೂಡ ಅನೌನ್ಸ್​ ಮಾಡಿದ್ರು.
/newsfirstlive-kannada/media/post_attachments/wp-content/uploads/2024/10/MARTIN-MOVIE-1.jpg)
ಧ್ರುವ ಸರ್ಜಾ ಸಿನಿಮಾ ಎಂದರೆ ಅಲ್ಲಿ ಭರ್ಜರಿ ಆ್ಯಕ್ಷನ್‌ಗೆ ಕೊರತೆ ಇರೋದಿಲ್ಲ. ಮಾರ್ಟಿನ್ ಚಿತ್ರ ಅಕ್ಟೋಬರ್ 11ರಂದು ಬಿಡುಗಡೆಯಾಗ್ತಿದ್ದು, ಭರ್ಜರಿ ನಿರೀಕ್ಷೆ ಎಬ್ಬಿಸಿದೆ.. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡು, ಟ್ರೇಲರ್ ಫ್ಯಾನ್ಸ್ ಕ್ರೇಜ್​ ಹೆಚ್ಚು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us