/newsfirstlive-kannada/media/post_attachments/wp-content/uploads/2024/10/DHRUVA_MARTIN.jpg)
ಬೆಂಗಳೂರು: ಇಂದು ಮಾರ್ಟಿನ್ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದ್ದು ಧ್ರುವ ಸರ್ಜಾ ನಿವಾಸದಲ್ಲಿ ಸಂಭ್ರಮ, ಸಡಗರ ಜೋರಾಗಿದೆ. ಥಿಯೇಟರ್ ಕಡೆ ಹೋಗುವುದಕ್ಕೂ ಮೊದಲು ಧ್ರುವ ಸರ್ಜಾ ತಮ್ಮ ಮನೆಯಲ್ಲಿ ಗೋ ಪೂಜೆ ನೆರವೇರಿಸಿದ್ದಾರೆ.
ಇದನ್ನೂ ಓದಿ: ಜೊತೆಯಲ್ಲಿ ಬಂದವರು ಒಂದೇ ಜೈಲಿನಲ್ಲಿ ಇಲ್ಲ.. ಪವಿತ್ರ ಗೌಡಗೆ ಕಾಡುತ್ತಿದೆ ಒಂಟಿತನ..
ಧ್ರುವ ಸರ್ಜಾಗೆ ಹಸುಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವುಗಳು ಎಲ್ಲೆ ಕಂಡರೂ ಕೈ ಮುಗಿಯುತ್ತಾರೆ. ಅದರಂತೆ ಇಂದು ಆಯುಧ ಪೂಜೆ ಆಗಿದ್ದು ನಾಡಿನೆಲ್ಲಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ತಮ್ಮ ನೆಚ್ಚಿನ ಬಹು ನಿರೀಕ್ಷಿತ ಮಾರ್ಟಿನ್ ಸಿನಿಮಾ ಕೂಡ ಇವತ್ತೇ ಬೆಳ್ಳಿ ತೆರೆಗೆ ಅಪ್ಪಳಿಸುತ್ತಿದೆ. ಇದೇ ಖುಷಿಯಲ್ಲಿದ್ದ ಧ್ರವ ಸರ್ಜಾ ನಿವಾಸಕ್ಕೆ ಕೋಲೆ ಬಸವ ಬಂದಿದೆ. ಹೀಗಾಗಿ ಮನೆ ಬಳಿ ಬಂದ ಗೋವುಗಳಿಗೆ ಕುಂಕುಮವಿಟ್ಟು ಆರತಿ ಬೆಳಗಿ, ಪೂಜೆ ಸಲ್ಲಿಸಿದ್ದಾರೆ. ಬಳಿಕ ಧ್ರುವಾ ಸರ್ಜಾ ಅವರು ತಮ್ಮ ಕೈಯಾರೆ ಹಸುಗಳಿಗೆ ಬಾಳೆಹಣ್ಣು, ಬೆಲ್ಲ ತಿನ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ BEMLನಲ್ಲಿ ಭರ್ಜರಿ ಉದ್ಯೋಗಗಳು.. ಪರೀಕ್ಷೆ ಇಲ್ಲ, ಇಂಟರ್ವ್ಯೂವ್ ಮಾತ್ರ
ಗೋಪೂಜೆ ಮುಗಿದ ಮೇಲೆ ತಮ್ಮ ತಾಯಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಮನೆ ಬಳಿ ಇದೆಲ್ಲ ಆದ ಬಳಿಕ ಮಾರ್ಟಿನ್ ಸಿನಿಮಾ ಯಶಸ್ವಿಯಾಗಲೆಂದು ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಜಯನಗರದ 4ನೇ ಬ್ಲಾಕ್ನಲ್ಲಿರುವ ಗಣೇಶನ ದೇಗುಲಕ್ಕೆ ಧ್ರುವಾ ಭೇಟಿ ಕೊಟ್ಟು ದೇವರ ದರ್ಶನ ಪಡೆದುಕೊಳ್ಳಲಿದ್ದಾರೆ. ಈ ಎಲ್ಲ ಪೂಜೆಗಳು ಮುಗಿದ ಬಳಿಕ ಮೆಜೆಸ್ಟಿಕ್ನಲ್ಲಿನ ಕೆ.ಜಿ ರಸ್ತೆಯ ನರ್ತಕಿ ಥಿಯೇಟರ್ ಕಡೆ ಧ್ರುವ ಹೊರಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ