ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಕನ್ನಡದ ನಟಿ ಇಶಿತಾ; ಬೋಲ್ಡ್​ ಲುಕ್‌ಗೆ​ ಫ್ಯಾನ್ಸ್​ ಫಿದಾ!

author-image
Veena Gangani
Updated On
ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಕನ್ನಡದ ನಟಿ ಇಶಿತಾ; ಬೋಲ್ಡ್​ ಲುಕ್‌ಗೆ​ ಫ್ಯಾನ್ಸ್​ ಫಿದಾ!
Advertisment
  • ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ನಟನೆ ಮೂಲಕ ಫ್ಯಾನ್ಸ್​ ಮನಗೆದ್ದ ಇಶಿತಾ
  • ಮಾಯಾ ಪಾತ್ರದ ಮೂಲಕ ಸತತ 7 ವರ್ಷ ವೀಕ್ಷಕರನ್ನ ರಂಜಿಸಿದ್ದ ನಟಿ
  • ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ನಟಿ ಹಾಟ್ ಫೋಟೋಸ್

ಅಗ್ನಿಸಾಕ್ಷಿ ಮಾಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಸ್ಟಾರ್ ನಟಿ ಇವರು. ಅಗ್ನಿಸಾಕ್ಷಿ ಪಾತ್ರದ ಮೂಲಕ ಒಂದಲ್ಲಾ, ಎರಡಲ್ಲಾ ಸತತ 7 ವರ್ಷ ವೀಕ್ಷಕರನ್ನ ರಂಜಿಸಿದ್ದರು ನಟಿ ಇಶಿತಾ.

ಇದನ್ನೂ ಓದಿ:ಕನ್ನಡಿಗನ ಮೇಲೆ ಗಿಲ್​​ಗೆ ಭರವಸೆ.. ಅಯ್ಯರ್​ ಜೊತೆ ಮ್ಯಾಜಿಕ್ ಎಂದ RCB ಮಾಜಿ ಸ್ಟಾರ್..!

publive-image

ಅಗ್ನಿಸಾಕ್ಷಿ ಸೀರಿಯಲ್​ ನಂತರ ಮತ್ತೆ ಅಮೃತಧಾರೆ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ಇಶಿತಾ ಅವರ ಕಮ್​ಬ್ಯಾಕ್​ ನಿಂದ ಅವರ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ. ಸದ್ಯ ಇಶಿತಾ ಮತ್ತೊಂದು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇಶಿತಾ ಅವರಿಗೆ ವೈಲ್ಡ್​ ಲೈಫ್​ ಫೋಟೋಗ್ರಾಫಿ ಅಂದ್ರೇ ಸಿಕ್ಕಾಪಟ್ಟೆ ಇಷ್ಟ.

publive-image

ಹೆಚ್ಚಾಗಿ ಫೋಟೋಗ್ರಾಫಿಯಲ್ಲಿ ತೊಡಗಿಸಿಕೊಂಡಿರುವ ನಟಿ ಜಂಗಲ್​ ಸಫಾರಿಯಲ್ಲಿ ಸಖತ್ ಬ್ಯುಸಿಯಾಗಿರುತ್ತಾರೆ. ಫೋಟೋಗ್ರಾಫಿ ಜೊತೆಗೆ ಟ್ರೆಂಡ್​ಗೆ ತಕ್ಕಹಾಗೆ ಫೋಟೋಶೂಟ್ ಮಾಡಿಸೋದನ್ನ ಮರೆಯೋದಿಲ್ಲ ಈ ನಟಿ. ಇತ್ತೀಚೆಗೆ ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಗ್ಲಾಮಸರ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಮರುಭೂಮಿ ಬಿರು ಬಿಸಿಲಿನಲ್ಲಿ ಕೆಂಪು ಬಣ್ಣದ ಲಾಂಗ್​ ಗೌನ್​ನಲ್ಲಿ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ.

ಕೆಂಪು ಕಲರ್​ ಲಾಂಗ್​ ಉಡುಪಿನಲ್ಲಿ ಸಖತ್​ ಹಾಟ್​ ಆಗಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಇದೇ ಫೋಟೋಸ್ ನೋಡಿದ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಕಾಮೆಂಟ್ಸ್​ ಹಾಕಿದ್ದಾರೆ. ಬೋಲ್ಡ್​ ಲುಕ್​ನಲ್ಲಿ ನೋಡಿ ಫ್ಯಾನ್ಸ್​ ಶಾಕ್​ ಆಗಿದ್ದಾರೆ. ಜೊತೆಗೆ ಮತ್ತೆ ಕಿರುತೆರೆಗೆ ಬಂದಿದ್ದು ಖುಷಿ ಆಗಿದೆ ಮೇಡಂ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment