/newsfirstlive-kannada/media/post_attachments/wp-content/uploads/2024/08/Alto-K10.jpg)
ಮಾರುತಿ ಸುಜುಕಿ ಜನಪ್ರಿಯ ಕಾರು ಕಂಪನಿಗಳಲ್ಲಿ ಒಂದು. ಈ ಕಂಪನಿಯು ಉತ್ಪಾದಿಸಿದ ಆಲ್ಟೊ ಕೆ10 ಕಾರಿನಲ್ಲಿ ದೋಷ ಕಂಡು ಬಂದ ಪರಿಣಾಮ 2555 ಕಾರುಗಳನ್ನ ಹಿಂಪಡೆಯಲು ಮುಂದಾಗಿದೆ. ಮಾಲೀಕರ ಬಳಿ ಈ ಮನವಿಯನ್ನು ಮಾಡಿದ್ದು, ಸರಿ ಪಡಿಸಿಕೊಡುವುದಾಗಿ ತಿಳಿಸಿದೆ.
ಅಂದಹಾಗೆಯೇ ಆಲ್ಟೊ ಕೆ10 ಕಾರಿನಲ್ಲಿ ಸ್ಟೀರಿಂಗ್​​ ಗೇರ್​​ಬಾಕ್ಸ್​ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದನ್ನು ಮಾರುತಿ ಸುಜುಕಿ ಕಂಪನಿ ಗಮನಿಸಿದೆ. ಹೀಗಾಗಿ ಗ್ರಾಹಕರ ಬಳಿ ಯಾವುದೇ ಶುಲ್ಕವಿಲ್ಲದೆ ತಪಾಸಣೆ ಮತ್ತು ಬದಲಿ ವ್ಯವಸ್ಥೆ ಮಾಡಲು ಮುಂದಾಗಿದೆ.
ಕಂಪನಿ ಅಧಿಕೃತ ಡೀಲರ್​​ಶಿಪ್​ಗಳ ಮೂಲಕ ಗ್ರಾಹಕರನ್ನು ತಲುಪುವ ಕೆಲಸಕ್ಕೆ ಮುಂದಾಗಿದೆ. ಆದರೆ ಕಂಪನಿ ಯಾವ ಇಸವಿಯಿಂದ ಯಾವ ಇಸವಿಯವರೆಗೆ ಉತ್ಪಾದಿಸಿದ ವಾಹನವೆಂದು ಮಾಹಿತಿ ಹಂಚಿಕೊಂಡಿಲ್ಲ.
/newsfirstlive-kannada/media/post_attachments/wp-content/uploads/2024/08/Alto-K10-1.jpg)
ಮಾರುತಿ ಸುಜುಕಿ ಆಲ್ಟೊ ವೈಶಿಷ್ಟ್ಯ
ಮಾರುತಿ ಸುಜುಕಿ ಆಲ್ಟೊ 5-ಸ್ಪೀಡ್ ಗೇರ್​ಬಾಕ್ಸ್​ ಮತ್ತು ಮ್ಯಾನ್ಯುವಲ್ ಆಯ್ಕೆಯಲ್ಲಿ ಬರುತ್ತಿದೆ. 66bhp ಮತ್ತು 89Nm ಟಾರ್ಕ್ ಉತ್ಪಾದಿಸುತ್ತದೆ. ಇದು 1.0-ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದಲ್ಲದೆ CNG ಆಯ್ಕೆಯಲ್ಲೂ ಲಭ್ಯವಿದೆ.
ಆಲ್ಟೊ ಕೆ10 ಕಾರು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಕೀಲೆಸ್ ಎಂಟ್ರಿ ಮತ್ತು ಹಸ್ತಚಾಲಿತವಾಗಿ ಆಯ್ಕೆಯಲ್ಲೂ ಖರೀದಿಸಬಹುದಾಗಿದೆ.
ಸುರಕ್ಷತೆಯ ವಿಚರಕ್ಕೆ ಬರುವುದಾದರೆ ಕಾರಿನ ಮುಂಭಾಗದಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸಂವೇದಕಗಳು, EBD ಜೊತೆಗೆ ABS ಮತ್ತು ರಿವರ್ಸ್ ಕ್ಯಾಮೆರಾವನ್ನು ಒಳಗೊಂಡಿದೆ.
ಇದನ್ನೂ ಓದಿ: ಕಾಶ್ಮೀರಿ ಮೂಲದ ವೈದ್ಯೆಯನ್ನು ವಿವಾಹವಾದ RCB ಮಾಜಿ ಸ್ಪಿನ್ನರ್​! ಈತ ಎಂಜಿನಿಯರ್​ ಪದವೀಧರ!
ಮಾರುತಿ ಸುಜುಕಿ ಆಲ್ಟೊ ಕೆ10 ಕಾರು 3.99 ಲಕ್ಷ ರೂಪಾಯಿಂದ 5.96 ಲಕ್ಷ ರೂಪಾಯಿವರೆಗೆ ನಾಲ್ಕು ರೂಪಾಂತರಗಳಲ್ಲಿ ಸಿಗುತ್ತದೆ. ಗ್ರಾಹಕರಿಗಾಗಿ Std, LXi ಮತ್ತು VXi ಪ್ಲಸ್ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us