ಗ್ರಾಹಕರಿಗೆ ಬಿಗ್​ ಶಾಕ್​​; ಮಾರುತಿ ಕಾರುಗಳ ಬೆಲೆಯಲ್ಲಿ ಬರೋಬ್ಬರಿ 32 ಸಾವಿರ ಏರಿಕೆ

author-image
Ganesh Nachikethu
Updated On
ಗ್ರಾಹಕರಿಗೆ ಬಿಗ್​ ಶಾಕ್​​; ಮಾರುತಿ ಕಾರುಗಳ ಬೆಲೆಯಲ್ಲಿ ಬರೋಬ್ಬರಿ 32 ಸಾವಿರ ಏರಿಕೆ
Advertisment
  • ಭಾರತದ ಅತೀ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ!
  • ಕಳೆದ ತಿಂಗಳು ಮಾರುತಿ ಸುಜುಕಿ ಕಾರುಗಳ ಮಾರಾಟ ಭರ್ಜರಿ ಏರಿಕೆ
  • ದೇಶದಲ್ಲೇ 1 ಲಕ್ಷ 32 ಸಾವಿರಕ್ಕಿಂತಲೂ ಹೆಚ್ಚು ಮಾರಾಟ ಮಾಡಿ ದಾಖಲೆ

ಭಾರತದ ಅತೀ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ. ಕಳೆದ ತಿಂಗಳು ಮಾರುತಿ ಸುಜುಕಿ ಕಾರುಗಳ ಮಾರಾಟ ಭರ್ಜರಿ ಏರಿಕೆ ಕಂಡಿದೆ. 2024ರ ಡಿಸೆಂಬರ್​​ನಲ್ಲಿ ಬರೋಬ್ಬರಿ 1,78,248 ಕಾರುಗಳು ಮಾರಾಟ ಆಗಿವೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಶೇ. 30ರಷ್ಟು ಹೆಚ್ಚಾಗಿದೆ.

ಇನ್ನು, ದೇಶದಲ್ಲೇ 1 ಲಕ್ಷ 32 ಸಾವಿರಕ್ಕಿಂತಲೂ ಹೆಚ್ಚು ಕಾರು ಮಾರಾಟ ಆದರೆ, ವಿದೇಶಗಳಿಗೆ ಸುಮಾರು 38 ಸಾವಿರ ಕಾರುಗಳನ್ನು ಟ್ರಾನ್ಸ್​ಪೋರ್ಟ್​ ಮಾಡಲಾಗಿದೆ. ಹಬ್ಬದ ಸೀಸನ್​​ ಹೊರತುಪಡಿಸಿ ಭಾರತದಲ್ಲಿ ಕಾರುಗಳ ಮಾರಾಟ ಕುಸಿತ ಕಂಡಿದೆ. ಈ ಹೊತ್ತಲ್ಲೇ ಹೊಸ ವರ್ಷಕ್ಕೆ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಮಾರುತಿ ಕಂಪನಿ ಘೋಷಿಸಿದೆ.

ಯಾವಾಗಿನಿಂದ ದರ ಏರಿಕೆ?

ಇದೇ ಫೆಬ್ರವರಿ 1, 2025ರಿಂದ ಮಾರುತಿ ಕಾರುಗಳ ಬೆಲೆ ಏರಿಕೆ ಆಗಲಿದೆ. 1,500 ರೂ. ನಿಂದ 32,500 ರೂ. ವರೆಗೆ ಏರಿಕೆ ಆಗಲಿದೆ. ಉತ್ಪಾದನಾ ಹಾಗೂ ಕಾರ್ಯಾಚರಣೆ ವೆಚ್ಚಗಳು ಹೆಚ್ಚಾಗುತ್ತಿರೋ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ತಿಳಿಸಿದೆ. ಮಾರುತಿ ಸೆಲೆರಿಯೋ ಕಾರಿನ ದರ ಗರಿಷ್ಠ 32,500 ರೂ. ಏರಿಕೆ ಕಂಡಿದ್ದು, ಸಿಯಾಜ್‌ ಮತ್ತು ಜಿಮ್ನಿ ಬೆಲೆ ಕನಿಷ್ಠ 1,500 ರೂ. ಹೆಚ್ಚಳ ಆಗಲಿದೆ ಎಂದು ತಿಳಿದು ಬಂದಿದೆ.

ವಿವಿಧ ಕಾರುಗಳ ದರ ಏರಿಕೆ ಹೀಗಿದೆ!

ಇನ್ವಿಕ್ಟೊ: 30,000 ರೂ.
ಗ್ರ್ಯಾಂಡ್‌ ವಿಟಾರಾ: 25,000 ರೂ.
ಬ್ರೀಜಾ: 20,000 ರೂ.
ಆಲ್ಟೋ K10: 19,500 ರೂ.
ಎರ್ಟಿಗಾ: 15,000 ರೂ.
ವ್ಯಾಗನಾರ್​: 13,000 ರೂ.
ಈಕೋ: 12,000 ರೂ.
ಡಿಸೈರ್‌: 10,500 ರೂ.
XL6: 10,000 ರೂ.
ಸೂಪರ್‌ ಕ್ಯಾರಿ: 10,000 ರೂ.
ಬ್ಯಾಲೆನೊ: 9,000 ರೂ.
ಇಗ್ನಿಸ್‌: 6,000 ರೂ.
ಫ್ರಾಂಕ್ಸ್‌: 5,500 ರೂ.
ಎಕ್ಸ್​ಪ್ರೆಸೋ: 5,000 ರೂ.
ಸ್ವಿಫ್ಟ್‌: 5,000 ರೂ.

ಇದನ್ನೂ ಓದಿ:ನಾಳೆ ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment