/newsfirstlive-kannada/media/post_attachments/wp-content/uploads/2025/04/MARUTI-SUZUKI-BALENO-2.jpg)
ಆಟೊಮೊಬೈಲ್ ಕ್ಷೇತ್ರದಲ್ಲಿ ಅದರಲ್ಲೂ ಕಾರುಗಳ ಮಾರಾಟದ ವಿಚಾರದಲ್ಲಿ ಮಾರುತಿ ಸುಜುಕಿ ಈ ವರ್ಷವೂ ಕಮಾಲ್ ಮಾಡಿದೆ. ದೊಡ್ಡ ದೊಡ್ಡ ಐಷಾರಾಮಿ ಕಂಪನಿಗಳ ಕಾರುಗಳನ್ನು ಕೂಡ ಹಿಂದಿಕ್ಕಿ ಅತಿಹೆಚ್ಚು ಮಾರಾಟವಾಗುವಲ್ಲಿ ಯಶಸ್ವಿಯಾಗಿದೆ. ಮಾರುತಿ ಸುಜುಕಿ ಬಲೊನೊ ಈ ಬಾರಿಯೂ ಕೂಡ ಒಂದೇ ವರ್ಷದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಾರಾಟವಾದ ಕಾರು ಎಂದು ಗುರುತಿಸಿಕೊಂಡಿದೆ.
2024 ಏಪ್ರಿಲ್ನಿಂದ 2025 ಮಾರ್ಚ್ವರೆಗೂ ಒಟ್ಟು 1, 67, 161 ಯುನಿಟ್ಗಳು ಮಾರಾಟಗೊಂಡಿವೆ. ಮಾರುತಿ ಸುಜುಕಿ ಬಲೆನೋ ಲಿಸ್ಟ್ನಲ್ಲಿ ಟಾಟಾ ಅಲ್ಟ್ರೇಜ್, ಟೊತೊಟಾ ಗ್ಲೆಂಜಾ ಮತ್ತು ಹುಂಡೈ ಐ20 ಕೂಡ ಸೇರಿವೆ. ಇವುಗಳ ಎಕ್ಸ್ ಶೋರೂಂನ ಬೆಲೆ 6.70 ಲಕ್ಷ ರೂಪಾಯಿ ಇದೆ. 2025ರ ಹಣಕಾಸಿನ ವರ್ಷದ ಟಾಪ್ ಟೆನ್ ಮಾರಾಟವಾದ ಕಾರ್ಗಳ ಲಿಸ್ಟ್ನಲ್ಲಿ ಬಲೆನೋ 7 ಸ್ಥಾನದಲ್ಲಿದೆ ಇದು ಮಾರುತಿ ಫ್ರೆಂಕ್ಸ್, ಮಾರುತಿ ಡಿಸೈಯರ್ ಮತ್ತು ಮಹೀಂದ್ರಾ ಸ್ಕಾರ್ಪಿಯೋಗಳನ್ನು ಹಿಂದಕ್ಕೆ ತಳ್ಳಿದೆ.
ಟಾಪ್ ಟೆನ್ ಲಿಸ್ಟ್ನಲ್ಲಿ ಯಾವ ಕಾರುಗಳು 2025ರ ಸಾಲಿನಲ್ಲಿ ಹೆಚ್ಚು ಮಾರಾಟವಾಗಿವೆ ಎಂಬುದನ್ನು ನೋಡುವುದಾದ್ರೆ ಮೊದಲನೇ ಸ್ಥಾನದಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ಇದೆ. ಒಟ್ಟು 1 ಲಕ್ಷ 98 ಸಾವಿರದ 451 ಯುನಿಟ್ಗಳು ಮಾರಾಟವಾಗಿವೆ. ಎರಡನೇ ಸ್ಥಾನದಲ್ಲಿ ಟಾಟಾ ಪಂಚ್ ಇದೆ 1 ಲಕ್ಷ 96 ಸಾವಿರ 572 ಯುನಿಟ್ಗಳು ಮಾರಾಟವಾಗಿವೆ. ಹುಂಡೈ ಕ್ರೆಟಾ ಮೂರನೇ ಸ್ಥಾನದಲ್ಲಿದ್ದು, 1,94,871 ಕಾರುಗಳು ಮಾರಾಟವಾಗಿವೆ. ನಾಲ್ಕು, ಐದು, ಆರು, ಎಳು ಎಂಟು ಮತ್ತು ಒಂಬತ್ತೆನೇ ಸ್ಥಾನದಲ್ಲಿ ಟಾಟಾ ಸುಜುಕಿ ಕಂಪನಿಯ ಕಾರುಗಳೇ ಸ್ಥಾನ ಪಡೆದಿದ್ದು, ಕೊನೆಯ ಸ್ಥಾನವನ್ನು ಮಹೀಂದ್ರಾ ಸ್ಕಾರ್ಪಿಯೋ ಪಡೆದುಕೊಂಡಿದೆ. ಮಾರುತಿ ಸುಜುಕಿಯ ಆರ್ಗಿಟಾಗೆ 4ನೇ ಸ್ಥಾನ, ಬ್ರೆಜ್ಗೆ 5ನೇ ಸ್ಥಾನ, ಸ್ವಿಫ್ಟ್ಗೆ 6ನೇ ಸ್ಥಾನ ಹಾಗೂ ಬಲೆನೋ 7ನೇ ಸ್ಥಾನದಲ್ಲಿದ್ದು, ಫ್ರಾಂಕ್ಸ್ 8 ಮತ್ತು ಡಿಸೈರ್ 9ನೇ ಸ್ಥಾನದಲ್ಲಿವೆ.
ಇದನ್ನೂ ಓದಿ:ಅಮೆರಿಕಾದಿಂದ ಶುರುವಾಗಿರುವ ಸುಂಕದ ಸಮರ.. ಐಫೋನ್ಗಳು ಮತ್ತಷ್ಟು ದುಬಾರಿ ಆಗುವುದು ಪಕ್ಕಾ!
ಈ ವರ್ಷದ ಹಣಕಾಸು ವರ್ಷದಲ್ಲಿ ಅತಿಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಂಪನಿಯಾಗಿ ಮಾರುತಿ ಸುಜುಕಿ ಹೊರಹೊಮ್ಮಿದೆ. ಅದರಲ್ಲೂ ಬಲೆನೋ ಈ ಹಿಂದಿಗಿಂತಲೂ ಅತಿಹೆಚ್ಚು ಮಾರಾಟಗೊಂಡಿದೆ.10 ಲಕ್ಷಕ್ಕೂ ಹೆಚ್ಚು ಮಾರುತಿ ಸುಜುಕಿ ಕಾರುಗಳು ಮಾರಾಟಗೊಂಡಿವೆ. ಅದರಲ್ಲಿ ಅತಿಹೆಚ್ಚು ಮಾರಾಟಗೊಂಡಿರುವುದು ಮಾರುತಿ ಸುಜುಕಿ ವ್ಯಾಗನಾರ್. ಇನ್ನು ಬಲೆನೋ ಮಾರುತಿ ಸುಜುಕಿ ಕಂಪನಿಗೆ ಮತ್ತೊಂದು ಭರವಸೆ ಮೂಡಿಸಿರುವ ಕಾರು ಆಗಿ ಹೊರಹೊಮ್ಮಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ