ಇಂದಿನಿಂದ ಈ ಕಂಪನಿ ಕಾರುಗಳ ಬೆಲೆ ಭಾರೀ ಏರಿಕೆ.. 62,000 ರೂಪಾಯಿ ಹೆಚ್ಚಳವಾದ ಕಾರು ಯಾವುದು?

author-image
Bheemappa
Updated On
ಇಂದಿನಿಂದ ಈ ಕಂಪನಿ ಕಾರುಗಳ ಬೆಲೆ ಭಾರೀ ಏರಿಕೆ.. 62,000 ರೂಪಾಯಿ ಹೆಚ್ಚಳವಾದ ಕಾರು ಯಾವುದು?
Advertisment
  • ಹೊಸ ಕಾರನ್ನು ಖರೀದಿ ಮಾಡುವ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ
  • ದೇಶದ ಅತಿದೊಡ್ಡ ಕಾರು ತಯಾರಿಕ ಕಂಪನಿಯಿಂದ ಬಿಗ್ ಶಾಕ್
  • ಇಂದಿನಿಂದ ಈ ಕಂಪನಿಯ ಕಾರುಗಳ ಬೆಲೆಗಳಲ್ಲಿ ಹೆಚ್ಚಳವಾಗಿದೆ

ಪ್ರತಿಯೊಬ್ಬರು ಮನೆ ಹೇಗೆ ಕಟ್ಟಬೇಕು ಎಂದುಕೊಳ್ಳುವರೋ ಅದೇ ರೀತಿ ಮನೆ ಮುಂದೆ ಕಾರು ಇದ್ರೆ ಚೆನ್ನಾಗಿರುತ್ತೆ ಎಂದು ಕಾರು ಖರೀದಿಗೂ ಮುಂದಾಗುತ್ತಾರೆ. ಕಡಿಮೆ ಬೆಲೆಗಳಲ್ಲಿ ಹೊಸ ಹೊಸ ಮಾದರಿಯ ಕಾರುಗಳನ್ನ ಗ್ರಾಹಕರಿಗೆ ಪರಿಚಯಿಸಿದ್ದ ಮಾರುತಿ ಸುಜುಕಿ (Maruti Suzuki) ಇದೀಗ ಬಿಗ್ ಶಾಕ್ ನೀಡಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಕಾರುಗಳ ದರದಲ್ಲಿ ಇಂದಿನಿಂದ ಭಾರೀ ಹೆಚ್ಚಳವಾಗಿದೆ.

ಇತ್ತಿಚೇಗಷ್ಟೇ ತನ್ನ ಕಾರುಗಳ ಬೆಲೆಗಳಲ್ಲಿ 2,500 ರಿಂದ 62,000 ರೂಪಾಯಿವರೆಗೆ ಹೆಚ್ಚಳವಾಗಲಿದೆ ಎಂದು ಮಾರುತಿ ಸುಜುಕಿ ಹೇಳಿತ್ತು. ಅದರಂತೆ ಏಪ್ರಿಲ್ 8 ಅಂದರೆ ಇಂದಿನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿಯಾಗಿವೆ. ಕಂಪನಿಯಲ್ಲಿ ಇನ್‌ಪುಟ್ ವೆಚ್ಚ, ಕಾರ್ಯಾಚರಣೆಯ ವೆಚ್ಚಗಳು, ನಿಯಂತ್ರಕ ಬದಲಾವಣೆಗಳು ಮತ್ತು ವೈಶಿಷ್ಟ್ಯ ಸೇರ್ಪಡೆ ಸೇರಿದಂತೆ ಕೆಲ ಅಂಶಗಳಿಂದ ಬೆಲೆ ಅಧಿಕ ಮಾಡಲಾಗಿದೆ ಎಂದು ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: ಕೊಹ್ಲಿ, ರಜತ್, ಜಿತೇಶ್ ಶರ್ಮಾ, ಪಡಿಕ್ಕಲ್ ಸಿಡಿಲಬ್ಬರದ ಬ್ಯಾಟಿಂಗ್​.. ಮುಂಬೈಗೆ ಬಿಗ್ ಟಾರ್ಗೆಟ್​

publive-image

ಕಾರುಗಳ ಬೆಲೆಗಳು ಎಷ್ಟು ಸಾವಿರ ಅಧಿಕಗೊಂಡಿವೆ?

ಎಸ್​ಯುವಿ ಫ್ರಾಂಕ್ಸ್ ಕಾರಿನ ಬೆಲೆಯಲ್ಲಿ 2,500 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅದರಂತೆ ಕ್ಯಾಬ್ ಮಾದರಿಯ ಮಾರುತಿ ಸುಜುಕಿ ಡಿಸೈರ್​ ಟೂರ್ ಎಸ್​ ಕಾರಿನ ದರದಲ್ಲಿ ಒಟ್ಟು 3,000 ರೂಪಾಯಿ ಅಧಿಕವಾಗಿದೆ. ಮಾರುತಿ ಸುಜುಕಿಯ ಮತ್ತೊಂದು ವಿಧದ ಕಾರುಗಳು ಆಗಿರುವ ಎರ್ಟಿಗಾ ಹಾಗೂ XL6 ಕಾರಿನ ದರದಲ್ಲಿ 12,500 ರೂಪಾಯಿ ಹೆಚ್ಚಳವಾಗಿದೆ ಎಂದು ತಿಳಿಸಲಾಗಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರುಗಳ ಬೆಲೆಯಲ್ಲಿ ಗಣನೀಯ ಏರಿಕೆ ಆಗಿರುವುದು ಗ್ರಾಹಕರಿಗೆ ಬೇಸರ ತರಿಸಿದೆ. 10 ಸಾವಿರವಲ್ಲ, 20 ಸಾವಿರವಲ್ಲ ಏಕಾಏಕಿ 62,000 ರೂಪಾಯಿಗಳನ್ನು ಅಧಿಕ ಮಾಡಿ ಮಾರುತಿ ಸುಜುಕಿ ಕಂಪನಿ ಬಿಗ್ ಶಾಕ್ ಕೊಟ್ಟಿದೆ. ಇನ್ನುಳಿದಂತೆ ಕೇವಲ ಒಂದೇ ವರ್ಷದಲ್ಲಿ 1.90 ಲಕ್ಷಕ್ಕೂ ಅಧಿಕ ಮಾರಾಟವಾಗಿದ್ದ ವ್ಯಾಗನ್ ಆರ್ ಕಾರಿನ ದರದಲ್ಲಿ ಬರೋಬ್ಬರಿ 14 ಸಾವಿರ ರೂಪಾಯಿ ಏರಿಕೆ ಆಗಿದೆ. ಅದರಂತೆ ಮಾರುತಿ ಸುಜುಕಿ ಇಕೋ ವ್ಯಾನ್​ನ ಬೆಲೆ 22,500 ರೂಪಾಯಿ ಹೆಚ್ಚಳವಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment