/newsfirstlive-kannada/media/post_attachments/wp-content/uploads/2024/07/Maruti-Ertiga.jpg)
ಇವತ್ತು ಕಾರ್​ ಅನ್ನೋದು ಕೇವಲ ಪ್ರತಿಷ್ಠೆ ಮಾತ್ರವಲ್ಲ ಅಗತ್ಯ ಕೂಡ. ಭಾರತದಲ್ಲಿ ಮಧ್ಯಮ ವರ್ಗದ ಜನ ಹೆಚ್ಚು. ಎಲ್ಲಾ ಕುಟುಂಬಗಳಿಗೂ ಒಂದು ದೊಡ್ಡ ಕಾರ್​ ಬೇಕು. ಎಸ್​​ಯುವಿ, ಎಂಪಿವಿ ಸೆಗ್ಮೆಂಟ್​​ ಕಾರುಗಳು ಖರೀದಿ ಮಾಡಲು ಎಲ್ಲರ ಕೈಯಲ್ಲೂ ಆಗಲ್ಲ. ಕಾರಣ ಒದೊಂದು ಕಾರಿನ ಬೇಸ್​​ ಪ್ರೈಸೇ 20 ಲಕ್ಷಕ್ಕೂ ಹೆಚ್ಚು. ಇಂಥವರಿಗೆ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬೆಸ್ಟ್​ ಚಾಯ್ಸ್​​.
ಯೆಸ್​​, ಮಾರುತಿ ಸುಜುಕಿ ಎರ್ಟಿಗಾ ಕೈಗೆಟುಕುವ ದರದಲ್ಲಿ ಸಿಗೋ ಕಾರ್​​. ಸದ್ಯ ಮಾರುಕಟ್ಟೆಯಲ್ಲಿ ಇದರ ಬೆಲೆ ಕೇವಲ 8.69 ಲಕ್ಷ ಇದ್ದು, ಟಾಪೆಂಡ್​​ 13.03 ಲಕ್ಷ ರೂಪಾಯಿಗೆ ಸಿಗಲಿದೆ. ಕಾರ್​​ ಡಿಸೈನ್​ ಕೂಡ ತುಂಬಾ ಮಾಡೆರ್ನ್​ ಆಗಿದ್ದು, LXI, VXI, ZXI ಅನ್ನೋ ವಿವಿಧ ವೇರಿಯೆಂಟ್​ಗಳಲ್ಲಿ ಲಭ್ಯವಿದೆ.
/newsfirstlive-kannada/media/post_attachments/wp-content/uploads/2024/07/Maruti-Ertiga-1.jpg)
ಎರ್ಟಿಗಾ ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್ ಟ್ರೇನ್​ನೊಂದಿಗೆ ಸಿಗಲಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 103 ಪಿಎಸ್ ಗರಿಷ್ಠ ಪವರ್ ಪ್ರೊಡ್ಯೂಸ್​ ಮಾಡಲಿದೆ. ಸಿಎನ್‌ಜಿ ಮಾದರಿ ಕೂಡ ಅತ್ಯುತ್ತಮವಾಗಿದೆ. ವೇರಿಯಂಟ್ಸ್​ಗೆ ತಕ್ಕಂತೆ 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್​ ಇದೆ. ಪೆಟ್ರೋಲ್​ ಕಾರ್​ ಒಂದು ಲೀಟರ್​​ಗೆ 20-22 ಮೈಲೇಜ್​ ಕೊಡಲಿದೆ. ಸಿಎನ್‌ಜಿ ಆವೃತ್ತಿಗಳು 26.11 ಕಿಲೋ ಮೀಟರ್​ ಮೈಲೇಜ್​ ನೀಡುತ್ತವೆ. ವಿಶೇಷ ಎಂದರೆ ಇದು ಇನೋವಾಗಿಂತಲೂ ಏನು ಕಡಿಮೆ ಇಲ್ಲ. 7 ಮಂದಿ ಆರಾಮಾಗಿ ಪ್ರಯಾಣಿಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು 209 ಲೀಟರ್ ಬೂಟ್​​ ಸ್ಪೇಸ್​ ಕೂಡ ನೀಡಲಾಗಿದೆ.
ವಿಶೇಷ ಫೀಚರ್ಸ್​​..!
ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್ನೈಟ್ ಬ್ಲಾಕ್, ಪರ್ಲ್ ಆರ್ಕ್ಟಿಕ್ ವೈಟ್​ ಸೇರಿದಂತೆ 7 ಕಲರ್​ಗಳಲ್ಲಿ ಕಾರ್​ ಲಭ್ಯವಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಪ್ಯಾಡಲ್ ಶಿಫ್ಟರ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಸೇರಿ ಹತ್ತಾರು ಫೀಚರ್ಸ್​ ಇದೆ. 4 ಏರ್‌ಬ್ಯಾಗ್, ESP, ರೇರ್ ಪಾರ್ಕಿಂಗ್ ಸೇನ್ಸಾರ್ಸ್​, ಹಿಲ್-ಹೋಲ್ಡ್ ಅಸಿಸ್ಟ್ ಕೂಡ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us