/newsfirstlive-kannada/media/post_attachments/wp-content/uploads/2024/08/Vinesh_Phogat.jpg)
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ವಿನೇಶ್ ಪೋಗಟ್ ಅವರು 100 ಗ್ರಾಂ ತೂಕ ಹೆಚ್ಚಿದ್ದ ಕಾರಣ ಅವರನ್ನು ಟೂರ್ನಿಯಿಂದ ಅನರ್ಹ ಮಾಡಲಾಗಿದೆ. ಬೆನ್ನಲ್ಲೇ ಭಾರೀ ನಿರಾಸೆಯಿಂದ ಕುಸ್ತಿ ಸ್ಪರ್ಧೆಗೆ ವಿನೇಶ್ ಫೋಗಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಭಾರತದ ಬಾಕ್ಸಿಂಗ್ ಪ್ಲೇಯರ್ ಮೇರಿಕೋಮ್ ಅವರು 2018ರ ಸ್ಪರ್ಧೆಯಲ್ಲಿ ಕೆಲವೇ ಕೆಲವು ಗಂಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದು ಇದೀಗ ರಿವೀಲ್ ಆಗಿದೆ.
ಇದನ್ನೂ ಓದಿ:ಶ್ರೀ ಕ್ಷೇತ್ರಕ್ಕೆ ಹೋಗಿ ಬಂದ ಬೆನ್ನಲ್ಲೇ ಬಿಗ್ ಅಪ್ಡೇಟ್ಸ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್
ಭಾರತದ ಮಹಿಳಾ ಬಾಕ್ಸಿಂಗ್ ಆಟಗಾರ್ತಿ ಮೇರಿ ಕೋಮ್ ದೇಶಕ್ಕೆ ಮೊಟ್ಟ ಮೊದಲ ಬಾರಿಗೆ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪದಕ ತಂದ ಪ್ಲೇಯರ್. ಇವರು 2018ರ ಪೋಲೆಂಡ್‌ನಲ್ಲಿ ನಡೆದ Silesian Open Boxing ಚಾಂಪಿಯನ್‌ಶಿಪ್‌ನಲ್ಲಿ 48 ಕೆ.ಜಿ ವಿಭಾಗದಲ್ಲಿ ಮೇರಿ ಕೋಮ್ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಮೇರಿ ಕೋಮ್ ತೂಕ 50 ಕೆ.ಜಿ ಇತ್ತು. ಇದು ತೀವ್ರ ಆತಂಕಕ್ಕೆ ಗುರಿ ಮಾಡಿತ್ತು. ಆದರೆ ಎದೆ ಗುಂದದ ಮೇರಿ ಕೋಮ್, ಕೇವಲ ನಾಲ್ಕೇ 4 ಗಂಟೆಗಳಲ್ಲಿ ವರ್ಕೌಟ್ ಮಾಡಿ 2 ಕೆ.ಜಿ ತೂಕ ಇಳಿಸಿದ್ದರು. ಈಗಲೂ ಈ ಕುರಿತು ವಿಶ್ವದಲ್ಲಿ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ಭಾರತದ ಗಡಿಗೆ ನುಗ್ಗಲು ಮುಂದಾದ ಸಾವಿರಾರು ಬಾಂಗ್ಲಾ ಜನ; ಗಡಿಯಲ್ಲಿ BSF ಪಡೆಗೆ ಬಿಗ್ ಚಾಲೆಂಜ್..!
ಈ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿರುವ ಮೇರಿ ಕೋಮ್ ಅವರು, ಸ್ಪರ್ಧೆಗೂ 4 ಗಂಟೆ ಹಿಂದೆ ನಾನು ಸ್ಕಿಪ್ಪಿಂಗ್ ಮಾಡಲು ಪ್ರಾರಂಭಿಸಿದೆ. ಎತ್ತರ.. ಎತ್ತರಕ್ಕೆ ಜಿಗಿದು ಜಂಪಿಂಗ್ ಮಾಡಿ ದೇಹದಲ್ಲಿ ಬೆವರು ಬರುವಂತೆ ಭಾರೀ ವೇಗದಲ್ಲಿ ಸ್ಕಿಪ್ಪಿಂಗ್ ಮಾಡಿದೆ. ನಿರಂತರ ಸ್ಕಿಪ್ಪಿಂಗ್ನಿಂದ ದೇಹದಲ್ಲಿರೋ ಬೆವರೆಲ್ಲ ಹೊರಗೆ ಬಂದಿದೆ. ಇದರಿಂದ ನಾನು 2 ಕೆ.ಜಿ ತೂಕ ಕಳೆದುಕೊಂಡು ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ ಗೆದ್ದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮುಖಕ್ಕೆ ಆಕ್ಸಿಜನ್.. ನಿಧಿಗಾಗಿ 40 ಮೀಟರ್ ಆಳದ ಗುಹೆ ಇಳಿದ ಕಿಡಿಗೇಡಿಗಳು.. ಮುಂದೇನಾಯ್ತು..?
2024ರ ಪ್ಯಾರಿಸ್ ಓಲಿಂಪಿಕ್ಸ್ನಲ್ಲಿ 50 ಕೆ.ಜಿ ವಿಭಾಗದಲ್ಲಿ ವಿನೇಶ್ ಫೋಗಟ್ ಅವರು ಫೈನಲ್ಗೆ ಪ್ರವೇಶ ಮಾಡಿದ್ದರು. ಪಂದ್ಯಕ್ಕೂ ಮೊದಲು ಪರಿಶೀಲಿಸಿದ್ದ ತೂಕದಲ್ಲಿ 50 ಕೆ.ಜಿಗಿಂತ 100 ಗ್ರಾಮ ಅಧಿಕವಾಗಿದ್ದ ಕಾರಣ ಅವರನ್ನು ಸ್ಪರ್ಧೆಯಿಂದ ಅನರ್ಹ ಮಾಡಲಾಗಿದೆ. ತೂಕ ಇಳಿಸಲು ಇಡೀ ರಾತ್ರಿಯೆಲ್ಲ ಕಷ್ಟಪಟ್ಟಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ. ಅನರ್ಹದಿಂದ ವಿನೇಶ್ ಫೋಗಾಟ್ ಭಾರೀ ನಿರಾಸೆಗೊಂಡು ಭಾರತೀಯರಿಗೆ ಕ್ಷಮಿಸಿ ಎಂದು ಕೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ