/newsfirstlive-kannada/media/post_attachments/wp-content/uploads/2024/12/Nelamangala-Accident-15.jpg)
ವಿಜಯಪುರ: ನೆಲಮಂಗಲ ಭೀಕರ ಅಪಘಾತದಲ್ಲಿ ಮೃತಪಟ್ಟ ಚಂದ್ರಮ್ ಕುಟುಂಬದ 6 ಮಂದಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. 3 ಆ್ಯಂಬುಲೆನ್ಸ್‌ನಲ್ಲಿ 6 ಮಂದಿಯ ಮೃತದೇಹ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಿರಾರು ಜನರು ಚಂದ್ರಮ್ ಕುಟುಂಬದ ದುರಂತಕ್ಕೆ ಕಣ್ಣೀರಿನ ವಿದಾಯ ಹೇಳಿದ್ದಾರೆ.
ಚಂದ್ರಮ್ ಯೋಗಪ್ಪಗೋಳ ಅವರು ಮಹಾರಾಷ್ಟ್ರ ರಾಜ್ಯದ ಜತ್ತ ತಾಲೂಕಿನ ಮೊರಬಗಿ ಗ್ರಾಮದವರು. ಕ್ರಿಸ್‌ಮಸ್ ರಜೆಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹುಟ್ಟೂರಿಗೆ ಆಗಮಿಸುತ್ತಿದ್ದರು. ಮನೆಯವರ ಯೋಗಕ್ಷೇಮ ವಿಚಾರಿಸಿ ರಜೆಯನ್ನ ಆರಾಮಾಗಿ ಕಳೆಯಬೇಕಿದ್ದ ಚಂದ್ರಮ್ ಕುಟುಂಬ ಈ ರೀತಿ ಶವವಾಗಿ ಬರುತ್ತಾರೆ ಅಂತ ಯಾರು ನಿರೀಕ್ಷೆ ಮಾಡಿರಲಿಲ್ಲ.
ಚಂದ್ರಮ್ ಕುಟುಂಬದ 6 ಮಂದಿ ಶವವನ್ನ ಆ್ಯಂಬುಲೆನ್ಸ್‌ನಲ್ಲಿ ಇಂದು ಮುಂಜಾನೆ ಮಹಾರಾಷ್ಟ್ರದ ಮೊರಬಗಿ ಗ್ರಾಮಕ್ಕೆ ತರಲಾಯಿತು. ಒಂದೇ ಕುಟುಂಬದ 6 ಜನರ ಮೃತದೇಹಗಳನ್ನ ನೋಡಿ ಮೊರಬಗಿ ಗ್ರಾಮಸ್ಥರು ಬಿಕ್ಕಿ, ಬಿಕ್ಕಿ ಅತ್ತರು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಅಂತಿಮ ದರ್ಶನ ಪಡೆದು ಕಣ್ಣೀರಿನ ಬೀಳ್ಕೊಡುಗೆ ಕೊಟ್ಟರು.
ಮೃತ ಚಂದ್ರಾಮ್ ಅವರ ಸಹೋದರ ಮಲ್ಲಿನಾಥ ಅವರು ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ಪೂರೈಸಿ 6 ಮಂದಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಒಂದೇ ಕುಟುಂಬದ 6 ಮಂದಿಯ ಸಾಮೂಹಿಕ ಸಂಸ್ಕಾರದ ದೃಶ್ಯ ಹೃದಯ ವಿದ್ರಾವಕ ಆಗಿತ್ತು.
ಇದನ್ನೂ ಓದಿ: ಒಂದೇ ಕುಟುಂಬದ 6 ಮಂದಿ ದುರಂತ.. ಬಾಸ್ ಕಳೆದುಕೊಂಡ ಸಿಬ್ಬಂದಿ ಕಣ್ಣೀರು; ಆತಂಕಕ್ಕೆ ಕಾರಣ ಇಲ್ಲಿದೆ!
ಚಂದ್ರಮ್, ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲೂ ಕಂಪನಿ ತೆರೆದಿದ್ದರು. 2018ರಲ್ಲಿ IAST ಸಾಫ್ಟ್‌ವೇರ್ ಕಂಪನಿಯನ್ನ ಶುರು ಮಾಡಿದ್ದು, 150ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಭೀಕರ ಅಪಘಾತದಲ್ಲಿ ಚಂದ್ರಮ್ ಕುಟುಂಬದ ಎಲ್ಲರೂ ಮೃತಪಟ್ಟಿದ್ದಾರೆ. ಚಂದ್ರಮ್ ಮಡದಿ ಗೌರಾಬಾಯಿ, ಮಗ ಗ್ಯಾನ್, ಪುತ್ರಿ ದೀಕ್ಷಾ ಕೂಡ ಬದುಕಿಲ್ಲ. ಸಹೋದರಿ ವಿಜಯಲಕ್ಷ್ಮಿಯೂ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ಕಂಪನಿ ನಡೆಸೋದ್ಯಾರು ಅನ್ನೋದು ಸಿಬ್ಬಂದಿಯನ್ನ ಆತಂಕಕ್ಕೆ ತಳ್ಳಿದೆ. ಕಂಪನಿ ನಡೆಸೋದ್ಯಾರು? ಮುಂದೆ ಹೇಗೆ ಎಂಬ ಆತಂಕದಲ್ಲಿ ಸಿಬ್ಬಂದಿ ಕಂಗಾಲಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ