/newsfirstlive-kannada/media/post_attachments/wp-content/uploads/2025/06/Kochi_Tuskers_Kerala.jpg)
ಒಪ್ಪಂದ ಉಲ್ಲಂಘನೆ ಮಾಡಿದಕ್ಕೆ ಐಪಿಎಲ್ ಫ್ರಾಂಚೈಸಿ ಕೊಚ್ಚಿ ಟಸ್ಕರ್ಸ್ ಕೇರಳಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 538 ಕೋಟಿ ರೂಪಾಯಿ ಪಾವತಿಸುವಂತೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಬ್ಯಾನ್ ಆಗಿರುವ ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಫ್ರಾಂಚೈಸಿಗೆ ಬಿಸಿಸಿಐ ಬರೋಬ್ಬರಿ 538 ಕೋಟಿ ರೂಪಾಯಿಗಳನ್ನು ನೀಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ. ಒಪ್ಪಂದದ ಪ್ರಕಾರ ಬ್ಯಾಂಕ್ ಗ್ಯಾರಂಟಿಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲು ಬಿಸಿಸಿಐ ವಿಫಲವಾಗಿದೆ ಎಂದು ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ಆರೋಪ ಮಾಡಿತ್ತು. ಇದರ ಮಧ್ಯಸ್ಥಿಕೆ ವಹಿಸಿದ್ದ ಕೋರ್ಟ್ ಹಣ ಪಾವತಿಗೆ ನಿರ್ದೇಶನ ಮಾಡಿದೆ.
ಕೊಚ್ಚಿ ಟಸ್ಕರ್ಸ್ ಕೇರಳ ತಂಡವನ್ನು 2011ರಲ್ಲಿ ಬಿಸಿಸಿಐ ಬ್ಯಾನ್ ಮಾಡಿತ್ತು. ಕೇವಲ ಒಂದೇ ಒಂದು ಸೀಸನ್ ಆಡಿಸಿದ ಬಳಿಕ ಐಪಿಎಲ್ನಿಂದ ಕೊಚ್ಚಿ ಟಸ್ಕರ್ಸ್ ಕೇರಳ ತಂಡವನ್ನು ತೆಗೆದು ಹಾಕಲಾಗಿತ್ತು. ಒಪ್ಪಂದದ ಅಡಿಯಲ್ಲಿ ಕಡ್ಡಾಯವಾಗಿದ್ದ ಬ್ಯಾಂಕ್ ಗ್ಯಾರಂಟಿಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲು ವಿಫಲವಾದ ನಂತರ ತಂಡವು ಒಪ್ಪಂದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿತ್ತು.
ಇದನ್ನೂ ಓದಿ:ಬ್ಯಾಟ್ ತಗೊಂಡು ಹೊಡೆಯಲು ಯತ್ನಿಸಿದ R ಅಶ್ವಿನ್.. ಸ್ಟಾರ್ ಸ್ಪಿನ್ನರ್ ಮೇಲೆ ಸಾಲು ಸಾಲು ಆರೋಪ
ಮಧ್ಯಸ್ಥಿಕೆ ಕಾಯ್ದೆಯ ಸೆಕ್ಷನ್ 34ರ ಅಡಿಯಲ್ಲಿ ಕೋರ್ಟ್ನ ಅಧಿಕಾರದ ವ್ಯಾಪ್ತಿ ತುಂಬಾ ಸೀಮಿತವಾಗಿದೆ. ಈ ವಿವಾದದ ಅರ್ಹತೆಯನ್ನು ಪರಿಶೀಲಿಸುವ ಬಿಸಿಸಿಐನ ಪ್ರಯತ್ನ ಕಾಯ್ದೆಯ ಸೆಕ್ಷನ್ 34ರಲ್ಲಿರುವ ಆಧಾರದ ವ್ಯಾಪ್ತಿಗೆ ಒಳಪಟ್ಟಿದೆ. 2015ರಲ್ಲಿ ತಂಡದ ಪರವಾಗಿ ನ್ಯಾಯಮಂಡಳಿ ತೀರ್ಪು ನೀಡಿದ ನಂತರ ಐಪಿಎಲ್ ಫ್ರಾಂಚೈಸಿ ಕೊಚ್ಚಿ ಟಸ್ಕರ್ಸ್‌ಗೆ 550 ಕೋಟಿ ರೂಪಾಯಿಗಳನ್ನು ನೀಡುವಂತೆ ಬಿಸಿಸಿಐಗೆ ಹೇಳಿತ್ತು.
ಅದರಂತೆ ಕೆಸಿಪಿಎಲ್‌ಗೆ 384 ಕೋಟಿ ಮತ್ತು ರೆಂಡೆನ್ಜ್ವಸ್ ಸ್ಪೋರ್ಟ್‌ಗೆ 153 ಕೋಟಿ ರೂಪಾಯಿಗಳನ್ನು ಪಾವತಿಸಲು ಬಿಸಿಸಿಐಯನ್ನ ಕೇಳಲಾಗಿತ್ತು. ಈ ನ್ಯಾಯಾಮಂಡಳಿಯ ತೀರ್ಪನ್ನು ಬಿಸಿಸಿಐ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಆದರೆ ಈಗ ಬಾಂಬೆ ಹೈಕೋರ್ಟ್ ಹಣ ಪಾವತಿ ಮಾಡುವಂತೆ ನಿರ್ದೇಶನ ನೀಡಿದ್ದರಿಂದ ಬಿಸಿಸಿಐಗೆ ಭಾರೀ ಹೊಡೆತ ಬಿದ್ದಂತೆ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ