ಸಂಸತ್ತಿನಲ್ಲಿ ಪಕ್ಷ-ವಿಪಕ್ಷಗಳ ಮಾರಾಮಾರಿ: ಬಿಳಿದಾದ ಟೈಲ್ಸ್​ಗಳು ರಕ್ತಮಯ; ಇತಿಹಾಸದಲ್ಲಿ ನಡೆದ ಮೊದಲ ಹೊಡೆದಾಟ

author-image
Gopal Kulkarni
Updated On
ಸಂಸತ್ತಿನಲ್ಲಿ ಪಕ್ಷ-ವಿಪಕ್ಷಗಳ ಮಾರಾಮಾರಿ: ಬಿಳಿದಾದ ಟೈಲ್ಸ್​ಗಳು ರಕ್ತಮಯ; ಇತಿಹಾಸದಲ್ಲಿ ನಡೆದ ಮೊದಲ ಹೊಡೆದಾಟ
Advertisment
  • ಟರ್ಕಿ ಸಂಸತ್ತಿನಲ್ಲಿ ಮೊದಲ ಬಾರಿ ಆಡಳಿತ-ವಿಪಕ್ಷಗಳ ಮಾರಾಮಾರಿ
  • ಮಿರಿ ಮಿರಿ ಮಿಂಚುವ ಸಂಸತ್ತಿನ ಬಿಳಿ ಟೈಲ್ಸ್​ಗಳೆಲ್ಲಾ ರಕ್ತಮಯವಾದ್ವು
  • ವಿರೋಧ ಪಕ್ಷದ ಸಂಸದನ ಮಾತಿಗೆ ಸಿಡಿದೆದ್ದ ಆಡಳಿತ ಪಕ್ಷದ ನಾಯಕ

ಅಂಕರಾ: ಟರ್ಕಿ ಪಾರ್ಲಿಮೆಂಟ್​ನಲ್ಲಿ ಹಿಂದೆಂದೂ ನಡೆಯದ ಒಂದು ಘಟನೆ ನಡೆದಿದೆ. ಪಕ್ಷ ವಿಪಕ್ಷಗಳು ನಡುವೆ ಮಾರಾಮಾರಿಯಾಗಿದೆ. ಅದು ಯಾವ ಮಟ್ಟಕ್ಕೆ ಅಂದ್ರೆ ಪಾರ್ಲಿಮೆಂಟ್​ನ ಐಷಾರಾಮಿ ಬಿಳಿಯ ಟೈಲ್ಸ್​​ಗಳು ರಕ್ತದಿಂದ ಕೆಂಪು ವರ್ಣಕ್ಕೆ ತಿರುಗುವ ಮಟ್ಟಕ್ಕೆ ಮಾರಮಾರಿಯಾಗಿದೆ. ಆರಂಭದಲ್ಲಿ ಇಬ್ಬರಿಂದ ಶುರುವಾದ ಕೈ ಕೈ ಮಿಲಾಯಿಸುವಿಕೆ ಮುಂದೆ ಎಲ್ಲಾ ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರು ಹೊಡೆದಾಡುವ ಮಟ್ಟಕ್ಕೆ ಹೋಗಿದೆ. ಟರ್ಕಿ ಸಂಸತ್ತಿನಲ್ಲಾದ ಈ ಕೋಲಾಹಲದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.


">August 16, 2024

ಇದನ್ನೂ ಓದಿ:ಕೋಲಾರದ ಕೆಂಪು ಸುಂದರಿಗೆ ಸಮಸ್ಯೆ ತಂದೊಡ್ಡಿದ ಬಾಂಗ್ಲಾ ಬಿಕ್ಕಟ್ಟು.. ಟೊಮೊಟೊ ಬೆಲೆ ಶೇ60 ರಷ್ಟು ಕುಸಿತ

ವಿಡಿಯೋದಲ್ಲಿ ಆಡಳಿತ ಪಕ್ಷ ಎಕೆಪಿದ ಸಂಸದ ವಿರೋಧ ಪಕ್ಷದ ಅಹ್ಮೆಟ್ ಸಿಖ್ ಅನ್ನೋರು ಮಾತನಾಡುತ್ತಿರುವಾಗ ಏಕಾಏಕಿ ಬಂದು ಹಲ್ಲೆ ಮಾಡುತ್ತಾರೆ. ತನ್ನ ಸಹೋದ್ಯೋಗಿಯನ್ನು ಜೈಲಿಗೆ ಹೋಗಿ ಬಂದವರು ಎಂದು ಹೀಯಾಳಿಸಿದ್ದಕ್ಕೆ ಈ ಒಂದು ಮಾರಾಮಾರಿ ಶುರುವಾಗಿದೆ. ಆರಂಭದಲ್ಲಿ ಇಬ್ಬರು ಕೈ ಕೈ ಮಿಲಾಯಿಸಿದ್ರೆ ಆ ನಂತರ ಇಡೀ ಸಂಸತ್ತೇ ಕೋಲಾಹಲಕ್ಕೆ ಮೂಕ ಸಾಕ್ಷಿಯಾಗಿ ನಿಂತಿತ್ತು. ಅದು ಯಾವ ಮಟ್ಟಿಗೆ ಹೊಡೆದಾಟವಾಗಿದೆ ಅಂದ್ರೆ, ಸಂಸತ್ತಿನ ಬಿಳಿ ಟೈಲ್ಸ್​ಗಳೆಲ್ಲಾ ರಕ್ತದ ಕಳೆಯಾಗುವಷ್ಟರ ಮಟ್ಟಿಗೆ.

ಇದನ್ನೂ ಓದಿ:ಪಾಕಿಸ್ತಾನದಲ್ಲಿ ಮತ್ತೊಂದು ಅನಾಚಾರ.. ಬಾಲ್ಯ ವಿವಾಹ ದಿಢೀರ್‌ ಹೆಚ್ಚಳ; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

ಈ ಗಲಾಟೆಯನ್ನು ನಿಯಂತ್ರಿಸಲು ಡೆಪ್ಯೂಟಿ ಸ್ಪೀಕರ್ ಪ್ರಯತ್ನಪಟ್ಟರೂ ಕೂಡ ಅದು ಪ್ರಯೋಜನಕ್ಕೆ ಬರಲಿಲ್ಲ ಹೀಗಾಗಿ ಸದನವನ್ನು ಮೂರು ಗಂಟೆಗಳ ಕಾಲ ಮುಂದೂಡಿದರು. ಇದು ಟರ್ಕಿ ಸಂಸತ್ ಇತಿಹಾಸದಲ್ಲಿಯೇ ನಡೆದ ಮೊದಲ ಘಟನೆ. ಟರ್ಕಿ ಸಂಸತ್ತು ಈ ಹಿಂದೆ ಎಂದೂ ಕೂಡ ಇಂತಹ ಘಟನೆಗೆ ಸಾಕ್ಷಿಯಾಗಿರಲಿಲ್ಲ ಎಂದು ಆಡಳಿತ ಹಾಗೂ ವಿಪಕ್ಷಗಳಿಗೆ ಛೀಮಾರಿ ಹಾಕಿದರು. ಮೂರು ಗಂಟೆಯ ವಿರಾಮದ ಬಳಿಕ ಎಲ್ಲವೂ ಶಾಂತ ಸ್ಥಿತಿಗೆ ಬಂದ ಮೇಲೆ ಸ್ಪೀಕರ್ ಸದನವನ್ನು ಮುನ್ನಡೆಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment