ಮೈಕ್ರೋಸಾಫ್ಟ್ ಸರ್ವರ್‌ನಲ್ಲಿ ಭಾರೀ ವ್ಯತ್ಯಯ.. ಜಗತ್ತಿನ ಹಲವೆಡೆ ಅಲ್ಲೋಲ, ಕಲ್ಲೋಲ; ಕಾರಣವೇನು?

author-image
admin
Updated On
ಮೈಕ್ರೋಸಾಫ್ಟ್ ಸರ್ವರ್‌ನಲ್ಲಿ ಭಾರೀ ವ್ಯತ್ಯಯ.. ಜಗತ್ತಿನ ಹಲವೆಡೆ ಅಲ್ಲೋಲ, ಕಲ್ಲೋಲ; ಕಾರಣವೇನು?
Advertisment
  • ಅಮೆರಿಕಾದ ಹಲವು ವಿಮಾನಗಳ ಸೇವೆಯಲ್ಲಿ ವಿಳಂಬ, ವ್ಯತ್ಯಯ
  • ಇಂಡಿಗೋ, ಸ್ಪೈಸ್ ಜೆಟ್, ಏರ್ ಇಂಡಿಯಾ ವಿಮಾನಗಳಿಗೂ ಎಫೆಕ್ಟ್
  • ಲಂಡನ್ ಸ್ಟಾಕ್ ಎಕ್ಸ್‌ಚೇಂಚ್ ಸೇವೆ ಕಂಪ್ಲೀಟ್ ಬಂದ್‌!

ಜಗತ್ತಿನಾದ್ಯಂತ ಮೈಕ್ರೋಸಾಫ್ಟ್‌ವೇರ್​ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ವಿಶ್ವದ ಹಲವು ವಿಮಾನಗಳ ಸೇವೆಯಲ್ಲಿ ವಿಳಂಬ ಹಾಗೂ ಭಾರೀ ವ್ಯತ್ಯಯ ಉಂಟಾಗಿದೆ. ದೆಹಲಿ, ನ್ಯೂಯಾರ್ಕ್ ಸೇರಿ ಹಲವೆಡೆ ವಿಮಾನ ಸಂಚಾರ ಸ್ಥಗಿತ ಮಾಡಲಾಗಿದೆ.

ಮೈಕ್ರೋಸಾಫ್ಟ್ ಸರ್ವರ್‌ನಲ್ಲಿ ವ್ಯತ್ಯಯವಾದ ಪರಿಣಾಮ ಜಾಗತಿಕ ಮಟ್ಟದಲ್ಲಿ ಬಹಳಷ್ಟು ತೊಂದರೆಯಾಗಿದೆ. ವಿಶ್ವದಾದ್ಯಂತ ವಿಮಾನ ಸಂಚಾರ, ಸೇವೆಯಲ್ಲಿ ವ್ಯತ್ಯಯವಾಗಿದ್ರೆ ಲಂಡನ್ ಸ್ಟಾಕ್ ಎಕ್ಸ್‌ಚೇಂಚ್ ಸೇವೆ ಕೂಡ ಸ್ಥಗಿತವಾಗಿದೆ.

publive-image

ಮೈಕ್ರೋಸಾಫ್ಟ್‌ನ ಕ್ಲೌಡ್ ಸರ್ವೀಸ್‌ನಲ್ಲಿ ತಾಂತ್ರಿಕ ತೊಂದರೆ ಎದುರಾಗಿದೆ. ಇದರಿಂದಾಗಿ ಬರ್ಲಿನ್, ದೆಹಲಿ, ನ್ಯೂಯಾರ್ಕ್ ಸೇರಿದಂತೆ ವಿಶ್ವದೆಲ್ಲೆಡೆ ವಿಮಾನ ಸಂಚಾರ ಸ್ಥಗಿತವಾಗಿದೆ. ಭಾರತದಲ್ಲೂ ವಿಮಾನ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ರವಾನೆ ಮಾಡಲಾಗಿದೆ.

ಇದನ್ನೂ ಓದಿ: ಮಹಿಳೆಗೆ ಕಿಸ್ ಮಾಡಲು ಹೋದ ಜೋ ಬೈಡನ್.. US ಪ್ರೆಸಿಡೆಂಟ್ ಕನ್​​ಫ್ಯೂಸ್ ಆಗಿದ್ದೆಲ್ಲಿ? 

ಎಸ್‌ಎಂಎಸ್‌ ಮೂಲಕ ಪ್ರಯಾಣಿಕರಿಗೆ ಏರ್ ಲೈನ್ಸ್ ಕಂಪನಿಗಳು ಮಾಹಿತಿ ನೀಡುತ್ತಿವೆ. ಪ್ರಯಾಣಿಕರು ಬಹಳ ಬೇಗನೇ ವಿಮಾನ ನಿಲ್ದಾಣಕ್ಕೆ ಬಂದು ಮ್ಯಾನ್ಯುಯಲ್ ಆಗಿ ಚೆಕ್ ಇನ್ ಮಾಡಲು ಸೂಚನೆ ನೀಡಲಾಗುತ್ತಿದೆ.
ದೆಹಲಿ ಏರ್‌ಪೋರ್ಟ್‌ನಲ್ಲೂ ವಿಮಾನ ಸಂಚಾರ ಸ್ಥಗಿತವಾಗಿದ್ದು, ವಿಸ್ತಾರ, ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿ ಕೈಯಲ್ಲಿ ಬರೆದ ಬೋರ್ಡಿಂಗ್ ಪಾಸ್‌ಗಳನ್ನು ನೀಡುತ್ತಿದ್ದಾರೆ.

publive-image

ಮೈಕ್ರೋಸಾಫ್ಟ್ ಸರ್ವರ್‌ನ ಈ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಟೆಲಿಕಾಂ ಕಂಪನಿಗಳಿಗೂ ತಟ್ಟಿದೆ. ಆಸ್ಟ್ರೇಲಿಯಾ ಸರ್ಕಾರ ಈ ಬಗ್ಗೆ ತುರ್ತು ಸಭೆ ನಡೆಸಲು ಮುಂದಾಗಿದೆ. ಜಾಗತಿಕ ಮಟ್ಟದಲ್ಲಿ ಬ್ಯುಸಿನೆಸ್, ಏರ್ ಲೈನ್ಸ್, ಬ್ಯಾಂಕ್, ಸ್ಟಾಕ್ ಎಕ್ಸ್ ಚೇಂಜ್‌ ಸೇವೆಗಳು ಸ್ಥಗಿತವಾಗಿದೆ.

ಇದನ್ನೂ ಓದಿ:BREAKING: ಅಮೆರಿಕ ಚುನಾವಣೆಗೆ ಅತಿ ದೊಡ್ಡ ಟ್ವಿಸ್ಟ್‌.. ರೇಸ್​ನಿಂದ ಹಿಂದೆ ಸರಿದ ಅಧ್ಯಕ್ಷ ಜೋ ಬೈಡೆನ್; ಯಾಕೆ?

ಇನ್ನು ಮೈಕ್ರೋಸಾಫ್ಟ್ ಸರ್ವೀಸ್‌ನಲ್ಲಿ ವ್ಯತ್ಯಯವಾದ ಪರಿಣಾಮ ಅಮೆರಿಕಾದ ಎಲ್ಲಾ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ಭಾರತದ ಇಂಡಿಗೋ, ಸ್ಪೈಸ್ ಜೆಟ್, ಏರ್ ಇಂಡಿಯಾ ವಿಮಾನ ಸಂಚಾರಕ್ಕೂ ಅಡಚಣೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment