Advertisment

BREAKING ಮಹಾರಾಷ್ಟ್ರದಲ್ಲಿ ಭಾರೀ ಸ್ಫೋಟ; ಪ್ರಾಣಬಿಟ್ಟ ಐವರು, ಹಲವರಿಗೆ ಗಾಯ

author-image
Gopal Kulkarni
Updated On
BREAKING ಮಹಾರಾಷ್ಟ್ರದಲ್ಲಿ ಭಾರೀ ಸ್ಫೋಟ; ಪ್ರಾಣಬಿಟ್ಟ ಐವರು, ಹಲವರಿಗೆ ಗಾಯ
Advertisment
  • ಮಹಾರಾಷ್ಟ್ರದ ನಾಗಪುರ ಬಳಿ ಫ್ಯಾಕ್ಟರಿಯಲ್ಲಿ ಭಾರೀ ಸ್ಪೋಟ
  • ಶಸ್ತ್ರಾಸ್ತ್ರ ನಿರ್ಮಾಣ ಕಾರ್ಖಾನೆಯಲ್ಲಾದ ಸ್ಫೋಟಕ್ಕೆ ಐವರು ಬಲಿ
  • ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಹಾಗೂ ಮೆಡಿಕಲ್ ಟೀಮ್​

ಮಹಾರಾಷ್ಟ್ರದ ಆರ್ಡಿನನ್ಸ್​ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಸುಮಾರು ಐವರು ಜನ ಭೀಕರವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ನಾಗಪುರದ ಬಳಿ ಈ ಒಂದು ಘಟನೆ ನಡೆದಿದ್ದು ಬೆಳಗ್ಗೆ ಸುಮಾರು 10.30ರ ಸಮಯದಲ್ಲಿ ಭೀಕರ ಬ್ಲಾಸ್ಟ್ ಸಂಭವಿಸಿದೆ. ನಾಗಪುರದ ಬಳಿಯ ಬಂಡಾರಾ ಜಿಲ್ಲೆಯಲ್ಲಿ ಈ ಒಂದು ಘಟನೆ ನಡೆದಿದ್ದು. ಸುಮಾರು ಐದು ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ್ ಕೋಲ್ಟೆ ಹೇಳಿದ್ದಾರೆ. ಸಂರಕ್ಷಣಾ ಪಡೆ ಹಾಗೂ ಮೆಡಿಕಲ್ ಸಿಬ್ಬಂದಿ ಗಾಯಾಳುಗಳ ಹಾಗೂ ಬ್ಲಾಸ್ಟ್​ನಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸಿದೆ.

Advertisment

ಇದನ್ನೂ ಓದಿ:ಮಹಾ ಕುಂಭಮೇಳಕ್ಕೆ ನೀಲಿ ಕಣ್ಣುಗಳ ಬ್ಯೂಟಿ ಮೊನಾಲಿಸಾ ಗುಡ್​ಬೈ.. ಕಾರಣವೇನು?

ಫ್ಯಾಕ್ಟರಿಯಲ್ಲಾದ ಸ್ಫೋಟದ ತೀವ್ರತೆ ಎಷ್ಟಿತ್ತು ಅಂದ್ರೆ ಸುಮಾರು 4 ಕಿಲೋ ಮೀಟರ್ ದೂರದವರೆಗೆ ಸ್ಫೋಟದ ಶಬ್ದ ಕೇಳಿಸಿದೆ. ಫ್ಯಾಕ್ಟರಿಯಿಂದ ದಟ್ಟವಾದ ಹೊಗೆ ಹಬ್ಬುತ್ತಿರುವುದು ಕೂಡ ಕಂಡು ಬಂದಿದೆ. ಈ ಒಂದು ದೃಶ್ಯವನ್ನು ಸ್ಥಳೀಯರು ಮೊಬೈಲ್ ಕ್ಯಾಮರಾದಲ್ಲಿ ಶೂಟ್ ಮಾಡಿಕೊಂಡಿದ್ದಾರೆ.

ಇಂದು ಬೆಳಗ್ಗೆ ನಡೆದ ಬ್ಲಾಸ್​ನಿಂದಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದು. ರಕ್ಷಣಾ ಪಡೆ ಹಾಗೂ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದಿದೆ. ರಕ್ಷಣಾ ಕಾರ್ಯ ಸದ್ಯ ಈಗಲೂ ಜಾರಿಯಲ್ಲಿದ್ದು ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment