ಕೇರಳದ ಶಾಲೆಗಳಲ್ಲಿ ಜುಂಬಾ ಫಿಟ್ನೆಸ್ ಡ್ಯಾನ್ಸ್​​ಗೆ ಭಾರೀ ವಿರೋಧ.. ಶಿಕ್ಷಣ ಇಲಾಖೆ ಹೇಳಿದ್ದೇನು?

author-image
Veena Gangani
Updated On
ಕೇರಳದ ಶಾಲೆಗಳಲ್ಲಿ ಜುಂಬಾ ಫಿಟ್ನೆಸ್ ಡ್ಯಾನ್ಸ್​​ಗೆ ಭಾರೀ ವಿರೋಧ.. ಶಿಕ್ಷಣ ಇಲಾಖೆ ಹೇಳಿದ್ದೇನು?
Advertisment
  • ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಜುಂಬಾ ಟ್ರೇನಿಂಗ್ ಆರಂಭ
  • ಜುಂಬಾ ಟ್ರೇನಿಂಗ್​ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತ ಆಗುತ್ತಿರೋದೇಕೆ?
  • ಇದು ಸರಿಯಲ್ಲ ಎಂದು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ

ಕೇರಳದ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಡ್ಯಾನ್ಸ್ ಆಧರಿತ ಜುಂಬಾ ಫಿಟ್ನೆಸ್ ಕಾರ್ಯಕ್ರಮ ಜಾರಿಗೊಳಿಸಲು ನಿರ್ಧರಿಸಿದೆ. ಶಾಲೆಗಳಲ್ಲಿ ಡ್ರಗ್ಸ್ ವಿರೋಧಿ ಆಂದೋಲನದ ಭಾಹವಾಗಿ ಜುಂಬಾ ಫಿಟ್ನೆಸ್ ಕಾರ್ಯಕ್ರಮ ಜಾರಿಗೊಳಿಸುತ್ತಿದೆ. ಆದರೆ, ಇದಕ್ಕೆ ಕೇರಳದ ಮುಸ್ಲಿಂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಈ ಡ್ಯಾನ್ಸ್ ಆಧರಿತ ಫಿಟ್ನೆಸ್ ಕಾರ್ಯಕ್ರಮದಲ್ಲಿ ಹುಡುಗ- ಹುಡುಗಿಯರು ಪರಸ್ಪರ ಬೆರೆಯಬೇಕು. ಕನಿಷ್ಠ ಬಟ್ಟೆ ಧರಿಸಿ ಡ್ಯಾನ್ಸ್ ಮಾಡಬೇಕು, ಹೀಗಾಗಿ ಇದು ಸರಿಯಲ್ಲ ಎಂದು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಗುಡ್​​ನ್ಯೂಸ್​​; KRS ಡ್ಯಾಂ ಐತಿಹಾಸಿಕ ದಾಖಲೆಗೆ ಕೇವಲ ಒಂದೇ 1 ಅಡಿ ಮಾತ್ರ ಬಾಕಿ

publive-image

ಈ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಜುಂಬಾ ಟ್ರೇನಿಂಗ್ ಅನ್ನು ಆರಂಭಿಸಲಾಗಿದೆ. ಈ ಜುಂಬಾ ಟ್ರೇನಿಂಗ್​ಗೆ ವಿರೋಧ ವ್ಯಕ್ತಪಡಿಸಿರುವ ವಿಸ್ಡಮ್ ಇಸ್ಲಾಮಿಕ್ ಆರ್ಗನೈಜೇಷನ್​ನ ಪ್ರಧಾನ ಕಾರ್ಯದರ್ಶಿ ಟಿ.ಕೆ.ಆಶ್ರಫ್, ನನ್ನ ಮಗ ಈ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂದಿದ್ದಾರೆ. ಇದನ್ನು ನಾನು ಒಪ್ಪಲ್ಲ, ನಮ್ಮ ಮಕ್ಕಳು ಈ ಡ್ಯಾನ್ಸ್ ಮಾಡಲ್ಲ ಎಂದು ಆಶ್ರಫ್ ಹೇಳಿದ್ದಾರೆ. ಸಂಸ್ಥಾ ಎಂಬ ಮುಸ್ಲಿಂ ಸಂಘಟನೆಯ ನಾಯಕಿ ನಾಸರ್ ಫಜೀಯಾ ಕೊಡತಾಯ್ ಕೂಡ ಈ ಜುಂಬಾ ಡ್ಯಾನ್ಸ್ ಫಿಟ್ನೆಸ್ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇದು ವೈಯಕ್ತಿಕ ಸ್ವಾತಂತ್ರ್ಯದ ಉಲಂಘನೆ. ದೈಹಿಕ ಫಿಟ್ನೆಸ್ ಹೆಸರಿನಲ್ಲಿ ಅಶ್ಲೀಲತೆಯನ್ನು ಹೇರಲಾಗುತ್ತಿದೆ ಎಂದಿದ್ದಾರೆ. ವಯಸ್ಕ ಮಕ್ಕಳಿಗೆ ಈ ಡ್ಯಾನ್ಸ್ ಮಾಡಲು ಹೇಳಿದರೂ, ಅದು ಕೂಡ ಆಕ್ಷೇಪಾರ್ಹ ಎಂದು ನಾಸರ್ ಫಜೀಯಾ ಕೊಡತಾಯ್‌ ಹೇಳಿದ್ದಾರೆ. ಹಾಲಿ ಇರುವ ದೈಹಿಕ ಶಿಕ್ಷಣ ತರಬೇತಿಯನ್ನು ಇಂಪ್ರೂವ್ ಮಾಡಿ. ಅಸಭ್ಯತೆಯನ್ನು ಹೇರಬೇಡಿ. ವಿದ್ಯಾರ್ಥಿಗಳಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲಾಗಲ್ಲ. ಜೊತೆಯಾಗಿ ಡ್ಯಾನ್ಸ್ ಕೂಡ ಮಾಡಲಾಗಲ್ಲ ಎಂದು ನಾಸರ್ ಫಜೀಯಾ ಕೊಡತಾಯ್ ಹೇಳಿದ್ದಾರೆ. ಆದರೆ ಕೇರಳದ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಜುಂಬಾ ಡ್ಯಾನ್ಸ್ ಆಧರಿತ ಫಿಟ್ನೆಸ್ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಜುಂಬಾ ಡ್ಯಾನ್ಸ್ ನಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಭಾಗಿಯಾಗಿರುವ ವಿಡಿಯೋವನ್ನು ಸಚಿವ ಶಿವನ್ ಕುಟ್ಟಿ ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳು ಡ್ಯಾನ್ಸ್ ಮಾಡಲಿ ಬಿಡಿ. ನಗಾಡಲಿ, ತಮಾಷೆ ಇರಲಿ, ಆರೋಗ್ಯಕರವಾಗಿ ಬೆಳೆಯಲಿ ಎಂದು ಹೇಳಿದ್ದಾರೆ.

ಕಾಸರಗೋಡು ಜಿಲ್ಲೆಯ ತನಬೀಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯ ವಿಡಿಯೋವನ್ನು ಶಿವನ್ ಕುಟ್ಟಿ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಜನರ ಆಕ್ಷೇಪಗಳು, ಸಮಾಜದಲ್ಲಿ ಡ್ರಗ್ಸ್​ಗಿಂತ ಹೆಚ್ಚು ವಿಷವನ್ನು ಇಂಜೆಕ್ಟ್ ಮಾಡಿದಂತೆ. ಯಾರೂ ಕೂಡ ಮಕ್ಕಳಿಗೆ ಕನಿಷ್ಠ ಬಟ್ಟೆ ಧರಿಸಬೇಕೆಂದು ಹೇಳಿಲ್ಲ. ಮಕ್ಕಳು ಶಾಲಾ ಯೂನಿಫಾರಂ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ಶಿಕ್ಷಣದ ಹಕ್ಕಿನ ಪ್ರಕಾರ, ಮಕ್ಕಳು, ಸರ್ಕಾರ ನಿಗದಿಪಡಿಸಿದ ಕಲಿಕೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. ಪೋಷಕರಿಗೆ ಈ ವಿಷಯದಲ್ಲಿ ಬೇರೆ ಆಯ್ಕೆಗಳಿಲ್ಲ ಎಂದಿದ್ದಾರೆ. ಇದನ್ನು ಡ್ರಗ್ಸ್ ವಿರೋಧಿ ಆಂದೋಲನದ ಭಾಗವಾಗಿ ನಡೆಸಲಾಗುತ್ತಿದೆ ಎಂಬುದನ್ನು ವಿರೋಧಿಸುವವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಕೋಮುವಾದ ಮತ್ತು ಭಿನ್ನಾಭಿಪ್ರಾಯವನ್ನು ಬಿತ್ತಿದಂತೆ.

ಇದಕ್ಕೂ ಮೊದಲು ಶಿಕ್ಷಣ ಇಲಾಖೆಯು ಕೂಡ ಜುಂಬಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ಭಾಗವಹಿಸಬಹುದು ಎಂದು ಹೇಳಿತ್ತು. ಇದನ್ನು ಮಕ್ಕಳ ಅಕಾಡೆಮಿಕ್ ಒತ್ತಡವನ್ನು ತಗ್ಗಿಸಲು ಪರಿಚಯಿಸಲಾಗಿದೆ, ಜೊತೆಗೆ ಡ್ರಗ್ಸ್ ಬಳಕೆಯನ್ನು ತಡೆಯುವ ಉದ್ದೇಶ ಹೊಂದಿದೆ ಎಂದು ಹೇಳಿದೆ. ಜೊತೆಗೆ ಮಕ್ಕಳ ಮಾನಸಿಕ, ದೈಹಿಕ ಹಿತ ಕಾಪಾಡಲು ಜುಂಬಾ ಡ್ಯಾನ್ಸ್ ಜಾರಿಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment