ಅಂತಿಂಥ ಭೂಕಂಪ ಅಲ್ಲವೇ ಅಲ್ಲ.. 4 ಖಂಡಗಳಲ್ಲಿ ಸುನಾಮಿ ಏಳುವ ಎಚ್ಚರಿಕೆ.. ಎಲ್ಲೆಲ್ಲಿ ತೀವ್ರತೆ ಹೇಗಿದೆ..?

author-image
Ganesh
Updated On
ಅಂತಿಂಥ ಭೂಕಂಪ ಅಲ್ಲವೇ ಅಲ್ಲ.. 4 ಖಂಡಗಳಲ್ಲಿ ಸುನಾಮಿ ಏಳುವ ಎಚ್ಚರಿಕೆ.. ಎಲ್ಲೆಲ್ಲಿ ತೀವ್ರತೆ ಹೇಗಿದೆ..?
Advertisment
  • ರಷ್ಯಾದಲ್ಲಿ ಪ್ರಬಲ ಭೂಕಂಪ, 8.8ರ ತೀವ್ರತೆ ದಾಖಲಾಗಿದೆ
  • ಭೂಕಂಪ, ಸುನಾಮಿಯಿಂದ 4 ಮೀ. ಎತ್ತರದವರೆಗೆ ಅಲೆಗಳು
  • 9 ಲಕ್ಷ ಜನರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಸವಾಲು

ಇಂದು ಬೆಳಗ್ಗೆ ರಷ್ಯಾದ ಕಮಚಟಕಾ ಪೆನ್ಸಿನ್ಸುಲಾದಲ್ಲಿ ರಿಕ್ಟರ್ ಮಾಪಕದಲ್ಲಿ 8.8ರ ತೀವ್ರತೆಯ ಭೂಕಂಪ ಸಂಭವಿಸಿದೆ. ಇದೊಂದು ಪ್ರಬಲ ಭೂಕಂಪ. 2011ರ ನಂತರ ಇದೇ ಮೊದಲ ಬಾರಿಗೆ 8ಕ್ಕೂ ಹೆಚ್ಚು ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದಾಗಿ ಪೂರ್ವ ರಷ್ಯಾದಲ್ಲಿ ಸಾಕಷ್ಟು ಕಟ್ಟಡಗಳು ನಡುಗಿ ಹೋಗಿವೆ. ಭೂಕಂಪದ ಜೊತೆ ಜೊತೆಗೆ ಸಮುದ್ರದಲ್ಲಿ ಸುನಾಮಿ ಅಲೆಗಳು ಎದ್ದೇಳುವ ಎಚ್ಚರಿಕೆಯನ್ನ ನೀಡಲಾಗಿದೆ. ನಾಲ್ಕು ಖಂಡಗಳ ವಿವಿಧ ದೇಶಗಳಿಗೆ ಸುನಾಮಿ ಅಲೆಗಳು ಬಂದು ಅಪ್ಪಳಿಸುವ ವಾರ್ನಿಂಗ್ ನೀಡಲಾಗಿದೆ. ನಾಲ್ಕು ಖಂಡಗಳ ವಿವಿಧ ದೇಶಗಳ ಜನರಲ್ಲಿ ಈಗ ಸುನಾಮಿಯ ಭಯ ಆವರಿಸಿದೆ. ಏಷ್ಯಾ ಖಂಡದಿಂದ ಹಿಡಿದು ದಕ್ಷಿಣ ಅಮೆರಿಕಾ ಖಂಡದವರೆಗೂ ಸುನಾಮಿ ಅಲೆಗಳ ವಾರ್ನಿಂಗ್ ನೀಡಲಾಗಿದೆ.

ಇದನ್ನೂ ಓದಿ: ಈ ಗ್ರಾಮಕ್ಕೆ ಸೇತುವೆಯೇ ಇಲ್ಲ.. ಗರ್ಭಿಣಿಗೆ ಹೆರಿಗೆ ನೋವು, ಎತ್ತಿನ ಗಾಡಿಯಲ್ಲಿ ಸಾಗಿಸಿದ ಜನ

ಭೂಕಂಪ ಹಾಗೂ ಸುನಾಮಿ ಅಲೆಗಳ ಕಾರಣದಿಂದ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. 9 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಸವಾಲು ಎದುರಾಗಿದೆ.

ಭೂಕಂಪ ಹಾಗೂ ಸಮುದ್ರದ ದೊಡ್ಡ ಎತ್ತರದ ಅಲೆಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಭಯಭೀತಿಯನ್ನು ಜಗತ್ತಿಗೆ ತೋರಿಸುತ್ತಿವೆ. ರಷ್ಯಾದ ಪ್ರಬಲ ಭೂಕಂಪದಿಂದ ಅನೇಕ ಕಟ್ಟಡಗಳು ಧರಶಾಹಿಯಾಗಿವೆ. ಸಮುದ್ರದಲ್ಲಿ ಭಾರಿ ಎತ್ತರದ ಅಲೆಗಳು ಏಳುತ್ತಿವೆ.

ಅಮೆರಿಕಾದ ಜ್ಯೂಲಾಜಿಕಲ್ ಸರ್ವೇ ವರದಿಯ ಪ್ರಕಾರ, ಇಂದು ಬೆಳಗ್ಗೆ 8.25ರಲ್ಲಿ ರಷ್ಯಾದ ಪೂರ್ವ ದಿಕ್ಕಿನಲ್ಲಿರುವ ಕಮಚಟಸ್ಕೈ- ಪೆಟ್ರೋಪವೋಲವೋಸ್ಕಾದಲ್ಲಿ ಭೂಮಿಯ 74 ಕಿಮೀ ಒಳಭಾಗದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ.

ಇದನ್ನೂ ಓದಿ: ನೋಡೋಕೆ ಸಾಧು ಅಂತೆ ಕಂಡರೂ ಈತ ಅಂತಿಂಥ ಮನುಷ್ಯ ಅಲ್ಲ.. 3 ವರ್ಷದ ಬಳಿಕ ಸಿಕ್ಕಿಬಿದ್ದ..!

ಮನೆಯೊಳಗಿನ ಭಯಾನಕ ವಿಡಿಯೋಗಳು ಮತ್ತು ದೊಡ್ಡ ದೊಡ್ಡ ಕಟ್ಟಡಗಳೇ ಕೆಲವೇ ಸೆಕೆಂಡ್ ಗಳವರೆಗೂ ಶೇಕ್ ಆಗಿರುವ ವಿಡಿಯೋಗಳನ್ನು ರಷ್ಯಾದ ಜನರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನೇಕ ಕಡೆ ಗೋಡೆಗಳು ಬಿರುಕು ಬಿಟ್ಟಿವೆ. ಭಯಭೀತಿಯಿಂದ ಜನರು ಮನೆಯಿಂದ ಆಚೆ ಬಂದು ಸುರಕ್ಷಿತ ಸ್ಥಳಗಳತ್ತ ಓಡಿ ಹೋಗಿದ್ದಾರೆ. ಭೂಕಂಪದಿಂದ ಮನೆ ತಮ್ಮ ಮೇಲೆ ಕುಸಿದು ಬೀಳುವ ಮುನ್ನವೇ ಮನೆಯಿಂದ ಹೊರಗೆ ಓಡಿ ಬಂದು ಜೀವ ಉಳಿಸಿಕೊಳ್ಳುವ ಯತ್ನವನ್ನು ರಷ್ಯಾದ ಜನರು ಇಂದು ಬೆಳಿಗ್ಗೆ ಮಾಡಿದ್ದಾರೆ.

ಜಪಾನ್‌ನ ಹವಾಮಾನ ಇಲಾಖೆಯು ಸುನಾಮಿ ಆಲರ್ಟ್ ನೀಡಿದೆ. ಸಮುದ್ರದಲ್ಲಿ 3 ಮೀಟರ್ ಎತ್ತರದವರೆಗೂ ಅಲೆಗಳು ಎದ್ದೇಳುವ ಆಲರ್ಟ್ ನೀಡಿದೆ. ಜಪಾನ್​ನ ಸ್ಥಳೀಯ ಕಾಲಮಾನ ಬೆಳಿಗ್ಗೆ 10 ಗಂಟೆಯಿಂದ 11.30 ರವರೆಗೆ ಸಮುದ್ರದಲ್ಲಿ ಅಲೆಗಳು ಎದ್ದೇಳುವ ಅಲರ್ಟ್ ನೀಡಲಾಗಿದೆ. ಜಪಾನ್‌ನ ಹೋಕಾಐಡೋ, ಟುಓಕು ನಗರಗಳನ್ನು ಆಲರ್ಟ್ ಸ್ಥಿತಿಯಲ್ಲಿ ಇರುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: NISAR ಉಡಾವಣೆಗೆ ಕೌಂಟ್​ಡೌನ್; ಇಸ್ರೋ-ನಾಸಾದ ಈ ಜಂಟಿ ಪ್ರಾಜೆಕ್ಟ್​​ ವಿಶೇಷತೆಗಳು ಏನೇನು..?

ಅಮೆರಿಕಾದ ಹವಾಯಿ ರಾಜ್ಯದಾದ್ಯಂತ ಸುನಾಮಿ ಆಲರ್ಟ್ ನೀಡಲಾಗಿದೆ. ನಗರಗಳಲ್ಲಿ ಸುನಾಮಿ ಆಲರ್ಟ್ ನೀಡುವ ಉದ್ದೇಶದ ಸೈರನ್​ಗಳು ಮೊಳಗಿವೆ. ಜನರ ಪುನರ್ ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ತಗ್ಗು ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ. ಅಮೆರಿಕಾದ ಜ್ಯೂಲಾಜಿಕಲ್ ಸರ್ವೇ ವರದಿಯ ಪ್ರಕಾರ ಸಂಜೆ 7.15ಕ್ಕೆ ಸುನಾಮಿಯ ಮೊದಲ ಅಲೆಗಳು ಏಳುವ ಎಚ್ಚರಿಕೆ ನೀಡಲಾಗಿದೆ.

ಅಮೆರಿಕಾದ ಪಶ್ಚಿಮ ಕರಾವಳಿಯ ಅಲಾಸ್ಕಾ, ಕ್ಯಾಲಿಪೋರ್ನಿಯಾ, ಓರೆಗಾನ್, ವಾಷಿಂಗಟನ್ ನಗರಗಳಿಗೆ ಸುನಾಮಿ ಅಲೆಯ ವಾರ್ನಿಂಗ್ ನೀಡಲಾಗಿದೆ. ಕರಾವಳಿ ತೀರ ಪ್ರದೇಶಕ್ಕೆ ತೆರಳದಂತೆ ಬೀಚ್ ಗಳಿಗೆ ಹೋಗುವವರಿಗೆ ವಾರ್ನಿಂಗ್ ನೀಡಲಾಗಿದೆ.

ಇದನ್ನೂ ಓದಿ: ಕೈಮುಗಿದು ನ್ಯಾಯಾಧೀಶರ ಮುಂದೆ ನಿಂತಿದ್ದ ಪ್ರಜ್ವಲ್ ರೇವಣ್ಣ.. ಆಗಸ್ಟ್ 1ಕ್ಕೆ ತೀರ್ಪು ಪ್ರಕಟ..!

ಭೂಕಂಪದ ಬೆನ್ನಲ್ಲೇ ಸಮುದ್ರದಲ್ಲಿ ಸುನಾಮಿ ಅಲೆಗಳು ಏಳುವ ಎಚ್ಚರಿಕೆಯನ್ನು ಜನರಿಗೆ ಅನೇಕ ದೇಶಗಳಲ್ಲಿ ನೀಡಲಾಗಿದೆ. ಫೆಸಿಫಿಕ್ ಸಮುದ್ರಕ್ಕೆ ಹೊಂದಿಕೊಂಡಿರುವ ಅನೇಕ ದೇಶಗಳಲ್ಲಿ ಸುನಾಮಿಯ ವಾರ್ನಿಂಗ್ ನೀಡಲಾಗಿದೆ.

ಏಷ್ಯಾ ಖಂಡ

  • ರಷ್ಯಾ- ಕಮಚಟಕಾ, ಕುರಿಲ ದ್ವೀಪ, ಸಖಹಾಲಿನ್
  • ಜಪಾನ್-- ಹಾಕಿಐಡೋ, ಅಂಮೋರಿ, ಐವಾಟೆ, ಮಿಯಾಗಿ, ಫುಕುಶಿಮಾ

ಉತ್ತರ ಅಮೆರಿಕಾ ಖಂಡ

  • ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ- ಹವಾಯಿ, ಅಲಸ್ಕಾ, ಕ್ಯಾಲಿಪೋರ್ನಿಯಾ, ಓರೆಗಾನ್, ವಾಷಿಂಗ್ಟನ್
  • ಕೆನಡಾ-- ಬ್ರಿಟಿಷ್ ಕೊಲಂಬಿಯಾ (ಕರಾವಳಿ ತೀರ ಪ್ರದೇಶಕ್ಕೆ ಆಲರ್ಟ್)

ಫೆಸಿಫಿಕ್ ದ್ವೀಪಗಳು

  • ಗುಹಮ್, ಪಲಾವ್, ಮಾರ್ಷಲ್ ಐಲ್ಯಾಂಡ್ಸ್, ಫ್ರೆಂಟ್ ಪೊಲಿನೇಷಿಯಾ, ಕಿರಿಬಾಟಿ.

ದಕ್ಷಿಣ ಅಮೆರಿಕಾ ಖಂಡ: 

  • ಪೆರು, ಚಿಲಿ( ಉತ್ತರ ಕರಾವಳಿ ವಲಯಕ್ಕೆ ಸುನಾಮಿ ಸಲಹೆ)

ಈ ಎಲ್ಲ ಖಂಡಗಳು ಹಾಗೂ ದೇಶಗಳು, ದ್ವೀಪಗಳಿಗೆ ಸುನಾಮಿ ಆಲರ್ಟ್ ನೀಡಲಾಗಿದೆ. ಈ ಮೂಲಕ ಇತ್ತೀಚಿನ ದಶಕಗಳಲ್ಲಿ ಅತಿ ಹೆಚ್ಚಿನ ದೇಶಗಳಿಗೆ ಒಂದೇ ದಿನ ಸುನಾಮಿ ಆಲರ್ಟ್ ನೀಡಿದಂತಾಗಿದೆ. ನಾಲ್ಕು ಖಂಡಗಳ ಡಜನ್​ಗೂ ಹೆಚ್ಚು ದೇಶಗಳಿಗೆ ಸುನಾಮಿ ಆಲರ್ಟ್ ನೀಡಲಾಗಿದೆ.

ಭೂಕಂಪ, ಸುನಾಮಿಯಿಂದ 4 ಮೀಟರ್ ಎತ್ತರದವರೆಗೂ ಎದ್ದ ಅಲೆಗಳು

ರಷ್ಯಾದಲ್ಲಿ ಪ್ರಬಲ ಭೂಕಂಪ ಹಾಗೂ ಸುನಾಮಿಯಿಂದ ಕಮಚಟಕಾ ಕರಾವಳಿ ತೀರದ ಸಮುದ್ರದಲ್ಲಿ 4 ಮೀಟರ್ ಎತ್ತರದವರೆಗೂ ಅಲೆಗಳು ಎದ್ದಿವೆ. ಪೋಟೋ, ವಿಡಿಯೋಗಳಲ್ಲಿ ಸಮುದ್ರದ ನೀರು ಕರಾವಳಿ ತೀರದವರೆಗೂ ಬಂದು ಅಪ್ಪಳಿಸುತ್ತಿರುವುದನ್ನು ಜನ ನೋಡಿದ್ದಾರೆ.

ರಷ್ಯಾದ ಕುರಿಲಸ್ಕಾ ಪ್ರದೇಶದಲ್ಲಿ ಸಮುದ್ರದ ಅಲೆಗಳು ಮೀನುಗಾರಿಕಾ ಬೋಟ್ ಗಳನ್ನು ಸಮುದ್ರದೊಳಗೆ ಮುಳುಗಿ ಹೋಗುವಂತೆ ಮಾಡಿವೆ. ಕಟ್ಟಡಗಳಿಗೆ ಡ್ಯಾಮೇಜ್, ಸ್ಥಳೀಯ ಪ್ರವಾಹಗಳು ರಷ್ಯಾದ ಅನೇಕ ಭಾಗಗಳಲ್ಲಿ ವರದಿಯಾಗಿವೆ. ಕೆಲ ದೂರದ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯವಾಗಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ಮೂಲಸೌಕರ್ಯಕ್ಕೆ ಹಾನಿಯಾಗಿಲ್ಲ. ಭೂಕಂಪದಿಂದ ರಷ್ಯಾದಲ್ಲಿ ಆಗಿರುವ ಜೀವ ಹಾನಿಯ ಬಗ್ಗೆ ವರದಿಯಾಗಿಲ್ಲ.

ಇದನ್ನೂ ಓದಿ: ಬಿಸಿಸಿಐ ವಿರುದ್ಧ ತಿರುಗಿಬಿದ್ದ ವಾಷಿಂಗ್ಟನ್ ಸುಂದರ್​ ತಂದೆ.. ಇವರ ಆಕ್ರೋಶಕ್ಕೆ ಕಾರಣ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment