VIDEO: ಬರ್ತ್‌ ಡೇ ಪಾರ್ಟಿಯಲ್ಲಿ ಬರೋಬ್ಬರಿ 27 ಜನರ ಮೇಲೆ ಗುಂಡಿನ ದಾಳಿ; ಮುಂದೇನಾಯ್ತು?

author-image
admin
Updated On
VIDEO: ಬರ್ತ್‌ ಡೇ ಪಾರ್ಟಿಯಲ್ಲಿ ಬರೋಬ್ಬರಿ 27 ಜನರ ಮೇಲೆ ಗುಂಡಿನ ದಾಳಿ; ಮುಂದೇನಾಯ್ತು?
Advertisment
  • ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ನಡೆಯುತ್ತಿದ್ದ ಬರ್ತ್‌ ಡೇ ಪಾರ್ಟಿ
  • ಬರ್ತ್‌ ಡೇಯ ಬ್ಲ್ಯಾಕ್‌ ಪಾರ್ಟಿಯಲ್ಲಿ ಸಾಮೂಹಿಕ ಗುಂಡಿನ ದಾಳಿ
  • 27 ಮಂದಿ ಗಾಯಗೊಂಡವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ

ಬರ್ತ್ ಡೇ ಪಾರ್ಟಿ ಅಂದ್ರೆ ಎಲ್ಲರೂ ಸಂಭ್ರಮದಲ್ಲಿ ಇರುತ್ತಾರೆ. ಖುಷಿ, ಖುಷಿಯಾಗಿ ಶುಭಾಶಯ ಕೋರುತ್ತಾ ಸಂತೋಷದಲ್ಲಿ ತೇಲಾಡುತ್ತಿರುತ್ತಾರೆ. ಆದರೆ ಅಮೆರಿಕಾದ ಓಹಿಯೋ ಪ್ರಾಂತ್ಯದ ಅಕ್ರಾನ್‌ನಲ್ಲಿ ಭಯಾನಕ ಘಟನೆ ನಡೆದಿದೆ. ಬರ್ತ್ ಡೇ ಪಾರ್ಟಿಯ ಸಂಭ್ರಮದಲ್ಲಿ ಮುಳುಗಿದ್ದವರ ಮೇಲೆ ಬರೋಬ್ಬರಿ 27 ಬಾರಿ ಗುಂಡಿನ ದಾಳಿ ನಡೆದಿದೆ.

ಅಕ್ರಾನ್‌ನಲ್ಲಿ ನಡೆಯುತ್ತಿದ್ದ ಬರ್ತ್‌ ಡೇಯ ಬ್ಲ್ಯಾಕ್‌ ಪಾರ್ಟಿಯಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಲಾಗಿದೆ. ಪಾರ್ಟಿಯಲ್ಲಿ ಭಾಗಿಯಾದವರ ಮೇಲೆ ಮನಬಂದಂತೆ ಶೂಟ್ ಮಾಡಿದ್ದು, ಬಹಳ ಉದ್ವಿಗ್ನ ವಾತಾವರಣ ಕಂಡು ಬಂದಿದೆ.

ಇದನ್ನೂ ಓದಿ:ಮತ್ತೊಂದು ಹೈಪ್ರೊಫೈಲ್ ಮಾಂಸ ದಂಧೆ ಕೇಸ್ ಬಯಲಿಗೆ.. ದಾಳಿ ವೇಳೆ ವಿದೇಶಿಗರ ಕಂಡು ಹೌಹಾರಿದ ಪೊಲೀಸರು 

ಈ ಗುಂಡಿನ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಅಕ್ರಾನ್‌ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬರ್ತ್‌ ಡೇಯಲ್ಲಿ ಭಾಗಿಯಾದ 27 ಜನರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಗಾಯಾಳುಗಳನ್ನ ಹಲವು ಆಸ್ಪತ್ರೆಗಳಿಗೆ ಕೂಡಲೇ ಸಾಗಿಸಲಾಗಿದೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಭಯಾನಕ ಶೂಟೌಟ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.


">June 2, 2024

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬರ್ತ್‌ ಡೇ ಪಾರ್ಟಿ ನಡೆಯುತ್ತಿದ್ದಾಗ ಈ ಸಾಮೂಹಿಕ ಗುಂಡಿನ ದಾಳಿ ನಡೆಸಲಾಗಿದೆ. ಯಾರು ಅನ್ನೋ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಅಕ್ರಾನ್‌ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment