/newsfirstlive-kannada/media/post_attachments/wp-content/uploads/2025/03/Master-Anand-Wife.jpg)
ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್, ನಿರೂಪಕ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಕಾಲಿಗೆ ಪೆಟ್ಟಾಗಿದೆ. ಎರಡು ಕಾಲಿನಲ್ಲಿ ಏಕಾಏಕಿ ದೊಡ್ಡ, ದೊಡ್ಡ ಗುಳ್ಳೆಗಳು ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಶಸ್ವಿನಿ ಆನಂದ್ ಅವರು ತಮ್ಮ ಕಾಲಿಗೆ ಆಗಿರುವ ಗಾಯದ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ನನ್ನ ಮೇಲೆ ಯಾರು ಕಣ್ಣು ಬಿತ್ತೋ ಹೇಗೋ ಎಂದಿರುವ ಯಶಸ್ವಿನಿ ಅವರು ಏನ್ ಆಗತ್ತೋ ಅದು ಒಳ್ಳೆದಕ್ಕೆ ಅನ್ನೋ ಕ್ಯಾಪ್ಶನ್ ಕೊಟ್ಟಿದ್ದಾರೆ.
ಕಾಲಿನ ನೋವಿನ ಮಧ್ಯೆ ಯಶಸ್ವಿನಿ ಅವರು ಅಸಲಿಗೆ ಆಗಿದ್ದೇನು ಅನ್ನೋದನ್ನ ವಿಡಿಯೋದಲ್ಲಿ ವಿವರವಾಗಿ ಹೇಳಿಕೊಂಡಿದ್ದಾರೆ. ಆ ಸ್ಟೋರಿ ನೋಡೋ ಮೊದಲು ಹಾಟ್ ವಾಟರ್ ಸ್ಟೀಮ್ ತೆಗೆದುಕೊಳ್ಳುವವರು ಹುಷಾರಾಗಿರಬೇಕು.
/newsfirstlive-kannada/media/post_attachments/wp-content/uploads/2025/03/master-Anand-Family-1.jpg)
ಯಶಸ್ವಿನಿ ನೋವಿನ ಕಥೆ ಏನು?
ಮೊನ್ನೆ ಶನಿವಾರ ನನಗೆ ಬ್ಯಾಡ್ ಡೇ ಆಗಿತ್ತು. ಬಿಸಿ, ಬಿಸಿ ನೀರಿನಲ್ಲಿ ಹಾಟ್ ವಾಟರ್ ಸ್ಟೀಮ್ ತೆಗೆದುಕೊಳ್ಳುತ್ತಾ ಇದ್ದೆ. ಅದು ರಪ್ ಅಂತ ಕಾಲಿನ ಮೇಲೆ ಬಿದ್ದು ಬಿಡ್ತು. ಫುಲ್, ಫುಲ್ ಉರಿ, ಉರಿ ಆಯ್ತು. ತಕ್ಷಣ ಆಸ್ಪತ್ರೆಗೆ ಹೋದೆ ಅವರು ಮೇಡಂ ಏನು ತೊಂದರೆ ಇಲ್ಲ ಅಂತ ಹೇಳಿ ಬ್ಯಾಂಡೇಜ್ ಮಾಡಿದ್ರು.
/newsfirstlive-kannada/media/post_attachments/wp-content/uploads/2025/03/Master-Anand-Family.jpg)
ಬ್ಯಾಂಡೇಜ್ ಮಾಡಿದ ಮೇಲೆ ಸರಿ ಹೋಗುತ್ತೆ ಅಂತ ನಾನು ಮನೆಗೆ ಬಂದೆ. ಆಸ್ಪತ್ರೆಯಿಂದ ಬಂದ ಮೇಲೆ ಸಂಜೆ, ರಾತ್ರಿ ಹೊತ್ತಿಗೆ ಕಾಲಿನ ಮೇಲೆ ಗುಳ್ಳೆಗಳು ಬರಲು ಶುರುವಾಯಿತು. ಮತ್ತೆ ಡಾಕ್ಟರ್ ಹತ್ರ ಹೋಗಿ ಬ್ಯಾಂಡೇಜ್ ಬಿಚ್ಚಿ ನೋಡಿದ್ರೆ ಕಾಲು ತುಂಬಾ ದೊಡ್ಡ, ದೊಡ್ಡ ಗುಳ್ಳೆಗಳು ಬಂದಿತ್ತು. ಎರಡೂ ಕಾಲಲ್ಲೂ ದೊಡ್ಡ, ದೊಡ್ಡ ಗುಳ್ಳೆಗಳು ಬಂದಿದ್ದು, ಕೊನೆಗೆ ಡಾಕ್ಟರ್ ಕಾಲಿಗೆ ಸ್ಕಿನ್ ಔಟ್ ಮಾಡಿದರು.
ಇದನ್ನೂ ಓದಿ: ಇನ್ಮೇಲೆ ಅನ್ನ ಭಾಗ್ಯ ಅಕ್ಕಿ ವಿಚಾರದಲ್ಲಿ ಕಳ್ಳಾಟ ನಡೆಯಲ್ಲ; ಸಿದ್ದರಾಮಯ್ಯ ಕಠಿಣ ನಿರ್ಧಾರ..!
ಹಾಟ್ ವಾಟರ್ ಕಾಲಿನ ಮೇಲೆ ಬಿದ್ದಾಗ ನನ್ನ ಗಂಡ ಹಂಪಿ ಉತ್ಸವಕ್ಕೆ ಹೋಗಿದ್ರು. ಅವರು ಮನೆಯಲ್ಲಿ ಇರಲಿಲ್ಲ. ನನ್ನ ಗಂಡ ಹಂಪಿಯಿಂದ ಬಂದ ಮೇಲೆ ಮತ್ತೆ ಡಾಕ್ಟರ್ ಹತ್ರ ಕರೆದುಕೊಂಡು ಹೋಗಿ ಟ್ರೀಟ್‌ಮೆಂಟ್ ಕೊಟ್ಟಿದ್ದಾರೆ. ನನಗೆ ಊಟ, ತಿಂಡಿಯಲ್ಲಿ ಜೊತೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಗಂಡ ನನ್ನ ಜೊತೆಯಲ್ಲೇ ಇರೋದು ಖುಷಿ ಅಂತ ಯಶಸ್ವಿನಿ ಆನಂದ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us