ಮಂಗಳೂರು ಬ್ಯಾಂಕ್ ದರೋಡೆ.. ತನಿಖೆಯ ಹಾದಿ ತಪ್ಪಿಸೋಕೆ ಮಾಸ್ಟರ್ ಪ್ಲಾನ್; ಏನದು?

author-image
admin
Updated On
ಮಂಗಳೂರು ಬ್ಯಾಂಕ್ ದರೋಡೆ.. ತನಿಖೆಯ ಹಾದಿ ತಪ್ಪಿಸೋಕೆ ಮಾಸ್ಟರ್ ಪ್ಲಾನ್; ಏನದು?
Advertisment
  • 12 ಕೋಟಿ ಹಗಲು ದರೋಡೆ ಮಾಡಲು ಮೊದಲೇ ಪ್ಲಾನ್‌!
  • ಪೊಲೀಸರ ತನಿಖೆಯ ಹಾದಿ ತಪ್ಪಿಸೋಕ್ಕೆ ಇವ್ರು ಮಾಡಿದ್ದೇನು?
  • ಖದೀಮರಿಗೆ ಬ್ಯಾಂಕ್ ಸಿಬ್ಬಂದಿಯೇ ಶಾಮೀಲಾಗಿರುವ ಶಂಕೆ?

ಮಂಗಳೂರು: ಉಲ್ಲಾಳದ ಕೋಟೆಕಾರು ಸಹಕಾರಿ ಬ್ಯಾಂಕ್‌ನ 12 ಕೋಟಿ ಹಗಲು ದರೋಡೆ ಪ್ರಕರಣ ಇಡೀ ರಾಜ್ಯಕ್ಕೆ ಭಯ ಹುಟ್ಟಿಸುವಂತೆ ಮಾಡಿದೆ. ದರೋಡೆಕಾರರು ಹೆಣದ ತಂತ್ರ ಎಂತಹದ್ದು? ಇವರಿಗೆ ಸಾಥ್ ಕೊಟ್ಟಿದ್ದು ಯಾರು? ಅನ್ನೋ ಭಯಾನಕ ಪ್ರಶ್ನೆಗಳ ಮಧ್ಯೆ ತನಿಖೆಯ ಹಾದಿ ತಪ್ಪಿಸೋಕೆ ದರೋಡೆಕೋರರು ಮಾಡಿದ ಮಾಸ್ಟರ್ ಪ್ಲಾನ್ ಏನು ಅನ್ನೋದು ಗೊತ್ತಾಗಿದೆ.

ಮಧ್ಯಾಹ್ನ 1.10ಕ್ಕೆ ಕೋಟೆಕಾರು ಸಹಕಾರಿ ಬ್ಯಾಂಕ್‌ಗೆ ನುಗಿದ್ದ ದರೋಡೆಕೋರರು ಕೇವಲ 5 ನಿಮಿಷದಲ್ಲಿ ಹಣದ ಮೂಟೆ ಕಟ್ಟಿಕೊಂಡು ಹೋಗಿದ್ದಾರೆ. ದರೋಡೆ ಆದ ಮೇಲೂ ತನಿಖೆಯ ಹಾದಿ ತಪ್ಪಿಸೋಕೆ ಇವರು ಖತರ್ನಾಕ್ ಪ್ಲಾನ್ ಮಾಡಿದ್ದಾರೆ.

publive-image

ಮಾಸ್ಟರ್ ಪ್ಲಾನ್ ಏನು?
ಕೋಟೆಕಾರು ಬ್ಯಾಂಕ್‌ ದರೋಡೆ ಮಾಡಲು ಈ ಗ್ಯಾಂಗ್ ಮೊದಲೇ ಸ್ಕೆಚ್ ಹಾಕಿಕೊಂಡು ಬಂದಿದ್ದಾರೆ. ಬ್ಯಾಂಕ್ ದರೋಡೆ ಮಾಡಿದವರು ಓರ್ವ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.

ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಸಿದು ಕೊಂಡು ಹೋದ ದರೋಡೆಕೋರರು ಮಂಗಳೂರು ಪೊಲೀಸರು ನಮ್ಮನ್ನ ಟ್ರ್ಯಾಕ್ ಮಾಡುತ್ತಾರೆ ಅನ್ನೋದು ಚೆನ್ನಾಗಿ ಗೊತ್ತಿದೆ. ಆ ಮೊಬೈಲ್​ ಅನ್ನು ಪೊಲೀಸರು ಟ್ರ್ಯಾಕ್ ಮಾಡಿದಾಗ ಸ್ಫೋಟಕ ಮಾಹಿತಿ ಬಯಲಾಗಿದೆ.

ಇದನ್ನೂ ಓದಿ: CCTV ಕ್ಯಾಮೆರಾ ರಿಪೇರಿಗೆ; CM ಪ್ರೋಗ್ರಾಂ ಬೇರೆ; ಪಕ್ಕಾ ಪ್ಲಾನ್ ಮಾಡಿ 12 ಕೋಟಿ ಬ್ಯಾಂಕ್​ ದರೋಡೆ 

ಬ್ಯಾಂಕ್ ಸಿಬ್ಬಂದಿ ಮೊಬೈಲ್‌ ಕಿತ್ತುಕೊಂಡ ದರೋಡೆಕೋರರು ಇಡೀ ನಗರ ಸುತ್ತಿ, ಕದ್ರಿ ರಸ್ತೆ ಬಳಿ ಮೊಬೈಲ್ ಎಸೆದು ಪರಾರಿ ಆಗಿದ್ದಾರೆ. ಪೊಲೀಸರ ತನಿಖೆಯ ಹಾದಿ ತಪ್ಪಿಸೋಕ್ಕೆ ಈ ಕಿಲಾಡಿ ಪ್ಲಾನ್ ಮಾಡಿದ್ದಾರೆ. ಬ್ಯಾಂಕ್​ ಬಗ್ಗೆ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಿದ್ದ ಖದೀಮರಿಗೆ ಬ್ಯಾಂಕ್ ಸಿಬ್ಬಂದಿಯೇ ಶಾಮೀಲಾಗಿರುವ ಶಂಕೆಯೂ ವ್ಯಕ್ತವಾಗಿದೆ.

ಖದೀಮರ ಒಂದು ತಂಡ ಮೊಬೈಲ್ ಎಸೆದು ಪರಾರಿಯಾದ ಮೇಲೆ ಬಂಟ್ವಾಳ ರಸ್ತೆಯ ಮೂಲಕ ಕೇರಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೇರಳದ ಟೋಲ್​ನಲ್ಲಿ ಕಾರು ಪಾಸ್ ಆಗಿರೋದು ಸದ್ಯ ಪತ್ತೆಯಾಗಿದೆ. ಮಂಗಳೂರು ಪೊಲೀಸರು ಇದೀಗ ಎರಡು ಕಾರುಗಳ ಬೆನ್ನು ಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment