/newsfirstlive-kannada/media/post_attachments/wp-content/uploads/2025/01/KL_RAHUL_PANT-1.jpg)
2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ಐಪಿಎಲ್​​ ತಂಡಗಳು ಕ್ಯಾಪ್ಟನ್​ ಯಾರು? ಎಂದು ಘೋಷಣೆ ಮಾಡಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಹೊಸ ಕ್ಯಾಪ್ಟನ್​ ಘೋಷಣೆ ಮಾಡಿದ್ದು, ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದೆ.
ಇನ್ನು, ದೆಹಲಿ ತಂಡದ ಕ್ಯಾಪ್ಟನ್​ ಯಾರಾಗಲಿದ್ದಾರೆ? ಅನ್ನೋ ಚರ್ಚೆ ಜೋರಾಗಿತ್ತು. ಕೆ.ಎಲ್​ ರಾಹುಲ್​ ಕೂಡ ದೆಹಲಿ ತಂಡದ ಕ್ಯಾಪ್ಟನ್​ ಆಗಬಹುದು ಎನ್ನಲಾಗಿತ್ತು. ಆದರೀಗ ಈ ನಿರೀಕ್ಷೆ ಹುಸಿಗೊಳಿಸಿರೋ ಡೆಲ್ಲಿ ಟೀಮ್​​ ಹೊಸಬರಿಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಿದೆ.
ಅಕ್ಷರ್​ ಪಟೇಲ್​ಗೆ ಕ್ಯಾಪ್ಟನ್ಸಿ
ಕ್ಯಾಪ್ಟನ್ಸಿ ರೇಸ್​ನಲ್ಲಿ ಆರ್​​ಸಿಬಿ ತಂಡದ ಮಾಜಿ ನಾಯಕ ಫಾಫ್​ ಡುಪ್ಲೆಸಿಸ್​, ಕನ್ನಡಿಗ ಕೆಎಲ್ ರಾಹುಲ್ ಹಾಗೂ ಅಕ್ಷರ್ ಪಟೇಲ್ ಹೆಸರುಗಳು ಕೇಳಿ ಬಂದಿದ್ದವು. ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿರೋ ಡೆಲ್ಲಿ ಕ್ಯಾಪಿಟಲ್ಸ್​​ ತಂಡದ ಮ್ಯಾನೇಜ್ಮೆಂಟ್​​ ಹೊಸ ಕ್ಯಾಪ್ಟನ್​ ಘೋಷಿಸಿದೆ. ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಡೆಲ್ಲಿ ತಂಡವನ್ನು ಲೀಡ್​ ಮಾಡಲಿದ್ದಾರೆ.
ಡೆಲ್ಲಿ ತಂಡದ ಮೊದಲ ಆಯ್ಕೆ ಕೆ.ಎಲ್. ರಾಹುಲ್. ಇವರು ತಮ್ಮ ಬ್ಯಾಟಿಂಗ್​ನಿಂದಲೇ ಹೆಸರು ವಾಸಿಯಾದರು. ತಮ್ಮ ಶಾಂತ ಸ್ವಭಾವದಿಂದಲೂ ಗಮನ ಸೆಳೆದವರು. ಇವರು ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ತಂಡವನ್ನು ಲೀಡ್​ ಮಾಡಿದ್ದಾರೆ. ಇವರು ತಂಡದ ಎಲ್ಲಾ ಆಟಗಾರರೊಂದಿಗೆ ಚೆನ್ನಾಗಿ ಇದ್ದು, ಮುಂದಿನ ಕ್ಯಾಪ್ಟನ್​ ಆಗಬಲ್ಲರು ಎನ್ನಲಾಗಿತ್ತು.
ಇನ್ನು, ರಾಹುಲ್​​ ಕೇವಲ ಆರಂಭಿಕ ಬ್ಯಾಟರ್​ ಆಗಿ ಅಲ್ಲ ಮಿಡಲ್​ ಆರ್ಡರ್​ ಬ್ಯಾಟರ್​ ಆಗಿ ಯಶಸ್ಸು ಕಂಡಿದ್ದಾರೆ. ವಿಕೆಟ್​ ಕೀಪಿಂಗ್​ನಲ್ಲೂ ಹೆಚ್ಚು ಹೆಸರು ಮಾಡಿದ್ದಾರೆ. ಹೀಗಾಗಿ ಇವರು ನಾಯಕತ್ವಕ್ಕೆ ಮೊದಲ ಆಯ್ಕೆ ಆಗಿದ್ದರು. ಆದ್ರೂ ಇವರಿಗೆ ಕ್ಯಾಪ್ಟನ್ಸಿ ಏಕೆ ಸಿಗಲಿಲ್ಲ? ಅನ್ನೋದು ಪ್ರಶ್ನೆ. ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಇದು ರಾಹುಲ್​ಗೆ ಬಿಗ್​ ಶಾಕ್​ ಆಗಿದೆ.
ಇದನ್ನೂ ಓದಿ:KL ರಾಹುಲ್ ಫ್ಯಾನ್ಸ್​ಗೆ ನಿರಾಸೆ.. ನಾಯಕನ ಹೆಸರು ಅಧಿಕೃತವಾಗಿ ಘೋಷಿಸಿದ ಡೆಲ್ಲಿ ಕ್ಯಾಪಿಟಲ್ಸ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ