RCB ಸ್ಟಾರ್​​ ಕೃನಾಲ್​ ಪಾಂಡ್ಯ ಮುನ್ನಡೆಸುತ್ತಿರೋ ತಂಡದ ವಿರುದ್ಧ ಮ್ಯಾಚ್​​ ಫಿಕ್ಸಿಂಗ್​ ಆರೋಪ

author-image
Ganesh Nachikethu
Updated On
ಕೊಹ್ಲಿ, ರಜತ್​ ಅಲ್ಲ; RCB ಕ್ಯಾಪ್ಟನ್ಸಿ ರೇಸ್​ನಲ್ಲಿ ಯಾರು ಊಹಿಸದ ಆಟಗಾರನ ಹೆಸ್ರು!
Advertisment
  • 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಮೆಗಾ ಹರಾಜು!
  • ಸ್ಟಾರ್​ ಆಲ್​ರೌಂಡರ್​​ ಕೃನಾಲ್​ ಪಾಂಡ್ಯಗೆ ಆರ್​​ಸಿಬಿ ಮಣೆ
  • ಇವರ ನೇತೃತ್ವದ ತಂಡದ ವಿರುದ್ಧ ಮ್ಯಾಚ್​ ಫಿಕ್ಸಿಂಗ್​ ಆರೋಪ

ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಮೆಗಾ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಿದವರು ಸ್ಟಾರ್​ ಆಲ್​ರೌಂಡರ್​​ ಕೃನಾಲ್​ ಪಾಂಡ್ಯ. ಇವರು ಈಗ ದೇಶೀಯ ಕ್ರಿಕೆಟ್​​ನಲ್ಲಿ ಬರೋಡಾ ತಂಡವನ್ನು ಲೀಡ್​ ಮಾಡುತ್ತಿದ್ದಾರೆ. ಈ ತಂಡದ ವಿರುದ್ಧ ಮ್ಯಾಚ್​​ ಫಿಕ್ಸಿಂಗ್​ ಆರೋಪ ಕೇಳಿ ಬಂದಿದೆ.

ಸದ್ಯ ಬರೋಡಾ, ಜಮ್ಮು ಮತ್ತು ಕಾಶ್ಮೀರ ನಡುವೆ ರಣಜಿ ಪಂದ್ಯ ನಡೆಯುತ್ತಿದೆ. ಇದರ ಮಧ್ಯೆ ಬರೋಡಾ ವಿರುದ್ಧ ಜಮ್ಮು ಮತ್ತು ಕಾಶ್ಮೀರ ತಂಡ ಪಿಚ್ ಫಿಕ್ಸಿಂಗ್ ಆರೋಪ ಮಾಡಿದೆ. ಬರೋಡಾ ವಿರುದ್ಧದ ಮಹತ್ವದ ರಣಜಿ ಟ್ರೋಫಿ ಪಂದ್ಯದ 3ನೇ ದಿನ ಮೈದಾನದಿಂದ ಹೊರ ನಡೆದ ಜಮ್ಮು ಮತ್ತು ಕಾಶ್ಮೀರದ ಆಟಗಾರರು, ಫಿಚ್​ ಫಿಕ್ಸ್​ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಏನಿದು ಮ್ಯಾಚ್​ ಫಿಕ್ಸಿಂಗ್​ ಆರೋಪ?

ಗ್ರೂಪ್​ ಸ್ಟೇಜ್​​ ಪಂದ್ಯದ 3ನೇ ದಿನ ರಾತ್ರೋರಾತ್ರಿ ಪಿಚ್​​​ ಬದಲಾಗಿದೆ ಎಂಬ ಆರೋಪ ಮಾಡಲಾಗಿದೆ. ಬರೋಡಾ ಈ ಆರೋಪಗಳನ್ನು ನಿರಾಕರಿಸಿದೆ. ಜಮ್ಮು ಮತ್ತು ಕಾಶ್ಮೀರ ತಂಡ ಮಾಡಿರೋ ಫಿಕ್ಸಿಂಗ್ ಆರೋಪ ಆಧಾರರಹಿತ ಎಂದು ಹೇಳಿದೆ.

ಕೃನಾಲ್​ ಪಾಂಡ್ಯ ಏನಂದ್ರು?

ಈ ಬಗ್ಗೆ ಮಾತಾಡಿರೋ ಬರೋಡಾ ತಂಡದ ಕ್ಯಾಪ್ಟನ್​ ಕೃನಾಲ್​ ಪಾಂಡ್ಯ ಅವರು, ಜಮ್ಮು ಮತ್ತು ಕಾಶ್ಮೀರ ಕೋಚ್ ಮಾಡಿರುವ ಆರೋಪ ನಿರಾಧಾರ. ಚಳಿಗಾಲದ ಕಾರಣ ಪಿಚ್​​​ನಲ್ಲಿ ತೇವಾಂಶ ಇದೆ. ಔಟ್​ ಫೀಲ್ಡ್​​ ಒದ್ದೆಯಾಗಿದೆ. ಇದು ಒಣಗಲು ಸಮಯ ತೆಗೆದುಕೊಳ್ಳುತ್ತದೆ. ಕ್ರಿಕೆಟ್ ಆಡಿದ ಯಾರಿಗಾದ್ರೂ ಇದು ಅರ್ಥ ಆಗುತ್ತದೆ ಎಂದರು.

ಇದನ್ನೂ ಓದಿ:ಸರಣಿ ಗೆದ್ದರೂ ಟೀಮ್​ ಇಂಡಿಯಾಗೆ ಮಾತ್ರ ಟೆನ್ಶನ್.. ಟೆನ್ಶನ್.. ಸಾರಥಿ ಸೂರ್ಯನ ಸಾಮರ್ಥ್ಯದ ಬಗ್ಗೆ ಪ್ರಶ್ನೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment