ಬ್ಯಾನ್ ಆಗಿದ್ದ ತಂಡದ ಮೇಲೆ ಮತ್ತೆ ಅನುಮಾನ.. ಫಿಕ್ಸಿಂಗ್​ ಆರೋಪ​ ಸಿಡಿಸಿದ RCA ಅಧಿಕಾರಿ..!

author-image
Ganesh
Updated On
ಬ್ಯಾನ್ ಆಗಿದ್ದ ತಂಡದ ಮೇಲೆ ಮತ್ತೆ ಅನುಮಾನ.. ಫಿಕ್ಸಿಂಗ್​ ಆರೋಪ​ ಸಿಡಿಸಿದ RCA ಅಧಿಕಾರಿ..!
Advertisment
  • ಐಪಿಎಲ್​ನಲ್ಲಿ ಮತ್ತೆ ಫಿಕ್ಸಿಂಗ್​ ಪೆಂಡಭೂತದ ಸದ್ದು
  • ರಾಜಸ್ಥಾನ್​​ ರಾಯಲ್ಸ್​ ಮೇಲೆ ಗಂಭೀರ ಆರೋಪ
  • ಲಕ್ನೋ ಎದುರಿನ ಸೋಲಿಗೆ ಫಿಕ್ಸಿಂಗ್​ ಕಾರಣ?

IPL ಟೂರ್ನಿ ರೋಚಕ ಘಟ್ಟ ತಲುಪಿದ ಬೆನ್ನಲ್ಲೇ ಶಾಕಿಂಗ್​ ಸುದ್ದಿಯೊಂದು ಹೊರಬಿದ್ದಿದೆ. ಮ್ಯಾಚ್​​ ಫಿಕ್ಸಿಂಗ್​ ಪೆಡಂಭೂತದ ಗಂಭೀರವಾದ ಆರೋಪ ಐಪಿಎಲ್​ ಲೋಕವನ್ನ ಶೇಕ್​ ಮಾಡಿದೆ. ಈ ಹಿಂದೆ 2 ವರ್ಷ ಬ್ಯಾನ್​ ಆಗಿತ್ತಲ್ಲ ಅದೇ ರಾಜಸ್ಥಾನ್​ ರಾಯಲ್ಸ್​ ತಂಡ ಮತ್ತೆ ಫಿಕ್ಸಿಂಗ್​ ಆರೋಪಕ್ಕೆ ಗುರಿಯಾಗಿದೆ.

ಮಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​ನಲ್ಲಿ ಮತ್ತೆ ಫಿಕ್ಸಿಂಗ್​ ಪೆಂಡಭೂತದ ಸುದ್ದಿ ಸದ್ದು ಮಾಡ್ತಿದೆ. ಈ ಹಿಂದೆ ಫಿಕ್ಸಿಂಗ್​ ಕಾರಣಕ್ಕೆ 2 ವರ್ಷಗಳ ಕಾಲ ಬ್ಯಾನ್​ ಆಗಿದ್ದ ರಾಜಸ್ಥಾನ್​ ರಾಯಲ್ಸ್​ ತಂಡದ ಮೇಲೆ ಗಂಭೀರವಾದ ಆರೋಪ ಕೇಳಿಬಂದಿದೆ. ಈ ಸೀಸನ್​ ಕಳಪೆ ಆಟವಾಡ್ತಿರೋ ರಾಜಸ್ಥಾನ ತಂಡ ಕಳೆದ 4 ಪಂದ್ಯಗಳಲ್ಲಿ ಸತತವಾಗಿ ಸೋತಿದೆ. ಅದ್ರಲ್ಲೂ ಕಳೆದ 2 ಪಂದ್ಯಗಳಲ್ಲಿ ಸುಲಭಕ್ಕೆ ಗೆಲ್ಲಬಹುದಾಗಿದ್ದ ಪಂದ್ಯಗಳನ್ನ ಕೈಚೆಲ್ಲಿದೆ. ಇದ್ರ ಬೆನ್ನಲ್ಲೇ ಫಿಕ್ಸಿಂಗ್​​ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಆಕ್ಸಿಜನ್ ಸಪೋರ್ಟ್​ನಲ್ಲಿ ಭರತ್ ತಾಯಿ, ಮಗನ ದುರಂತ ಅಂತ್ಯದ ಬಗ್ಗೆ ತಾಯಿಗೆ ಇನ್ನೂ ಗೊತ್ತಿಲ್ಲ

publive-image

ನಾಟಕೀಯ ಸೋಲಿಗೆ ಫಿಕ್ಸಿಂಗ್​ ಕಾರಣ?

ಏಪ್ರಿಲ್​ 19ರಂದು ರಾಜಸ್ಥಾನ್​ ರಾಯಲ್ಸ್​ ತಂಡ ಲಕ್ನೋ ಸೂಪರ್​ ಜೈಂಟ್​ ವಿರುದ್ಧ ಹೋಮ್​ಗ್ರೌಂಡ್​​ ಜೈಪುರದಲ್ಲಿ ಪಂದ್ಯವಾಡ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಲಕ್ನೋ 180 ರನ್​ಗಳಿಸಿತ್ತು. 181 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ರಾಜಸ್ಥಾನ್​ ತಂಡಕ್ಕೆ ಕೊನೆಯ ಓವರ್​​ನಲ್ಲಿ 9 ರನ್​ ಬೇಕಿದ್ವು. ದೃವ್​​ ಜುರೇಲ್​, ಶಿಮ್ರಾನ್​ ಹೆಟ್ಮೆಯರ್​ರಂತ ಕ್ರಿಸ್​ನಲ್ಲಿದ್ರು. ಹೆಟ್ಮೆಯರ್​ ಔಟಾದ ಮೇಲೆ ಶುಭಮ್​ ದುಬೆ ಬ್ಯಾಟಿಂಗ್​ಗೆ ಬಂದ್ರು. ಪ್ರಮುಖ ಆಟಗಾರರು ಬ್ಯಾಟಿಂಗ್​ಗೆ ಬಂದ್ರೂ 2 ರನ್​ಗಳಿಂದ ರಾಜಸ್ಥಾನ್​ ಸೋಲ್ತು. ಈ ನಾಟಕೀಯ ಸೋಲಿಗೆ ಫಿಕ್ಸಿಂಗ್​ ಕಾರಣ ಎಂಬ ಆರೋಪ ಕೇಳಿಬಂದಿದೆ.

ಫಿಕ್ಸಿಂಗ್​ ಬಾಂಬ್​ ಸಿಡಿಸಿದ RCA ಅಧಿಕಾರಿ

ರಾಜಸ್ಥಾನ್​ ಕ್ರಿಕೆಟ್​ ಅಸೋಸಿಯೇಶನ್​ನ ಅಧಿಕಾರಿಯೇ ಈ ಸೋಲಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ್​ ರಾಯಲ್ಸ್​ ಮ್ಯಾನೇಜ್​ಮೆಂಟ್​ ಮೇಲೆ ಆರ್​​ಸಿಎನ ಆ್ಯಡ್​ ಹಾಕ್​ ಕಮಿಟಿ ಸದಸ್ಯ ಜೈದೀಪ್​ ಬಿಹಾನಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರೋ ಜೈದೀಪ್ ಫಿಕ್ಸಿಂಗ್​ ಮಾಡಿಕೊಂಡು ರಾಜಸ್ಥಾನ್​ ಸೋತಿದೆ. ಇದ್ರ ಬಗ್ಗೆ ತನಿಖೆಯಾಗ್ಬೇಕು ಅಂತಾ ಆಗ್ರಹಿಸಿದ್ದಾರೆ. ಪಂದ್ಯ ನಡೆದ ರೀತಿ ನೋಡಿದ್ರೆ ಪಂದ್ಯ ಫಿಕ್ಸ್ ಆಗಿದೆ ಅನ್ನೋದು ಪುಟ್ಟ ಮಗುವಿಗೂ ಅರ್ಥವಾಗುತ್ತೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Pahalgam attack: ಜೀವ ಕಳೆದುಕೊಂಡ ಮೂವರು ಕನ್ನಡಿಗರು.. ಸಂಕಷ್ಟದಲ್ಲಿ ಕರ್ನಾಟಕದ 40 ಮಂದಿ

publive-image

ರಾಜಸ್ಥಾನ ಫ್ರಾಂಚೈಸಿ​ ಗರಂ
ಜೈದೀಪ್​​ ಆರೋಪವನ್ನ ರಾಜಸ್ಥಾನ್​ ರಾಯಲ್ಸ್​ ತಂಡ ಸಾರಾಸಗಟಾಗಿ ತಿರಸ್ಕರಿಸಿದೆ. ಆರ್​​ಸಿಎ ಅಧಿಕಾರಿ ಮೇಲೆ ಗರಂ ಆಗಿರೋ ಫ್ರಾಂಚೈಸಿ ಸಿಎಂ ಭಜನ್​ಲಾಲ್ ಶರ್ಮಾಗೆ ದೂರು ನೀಡಿದೆ. ಸರ್ಕಾರದಿಂದ ನೇಮಕವಾಗಿರೋ ಅಧಿಕಾರಿ, ಗಂಗಾನಗರ ಹಾಲಿ ಶಾಸಕ ಜೈದೀಪ್​ ಬಿಹಾನಿ ಮಾಡಿರೋ ಆರೋಪ ಸರಿಯಲ್ಲ. ಇದ್ರಿಂದ ನಮ್ಮ ಫ್ರಾಂಚೈಸಿಯ ಘನತೆಗೆ ಹಾನಿಯಾಗ್ತಿದೆ ಎಂದು ದೂರು ನೀಡಿದೆ. ಬಿಸಿಸಿಐಗೂ ಈ ಬಗ್ಗೆ ಮನವಿ ಮಾಡಿದ್ದು​​ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಮುಂದಿನ ಪಂದ್ಯವನ್ನಾಡಲು ರಾಜಸ್ಥಾನ್​ ರಾಯಲ್ಸ್​ ತಂಡ ಬೆಂಗಳೂರಿಗೆ ಬಂದ ಹೊತ್ತಲ್ಲೇ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ಜಂಟಲ್​ಮನ್​ ಗೇಮ್​ನ ರಿಯಲ್​ ಜಂಟಲ್​ಮನ್​ ಅನಿಸಿಕೊಂಡಿರೋ ರಾಹುಲ್​ ದ್ರಾವಿಡ್​​ ಹೆಡ್​ ಕೋಚ್​ ಆಗಿರೋ ತಂಡದ ವಿರುದ್ಧ ಕೇಳಿ ಬಂದಿರೋ ಆರೋಪ ಅಭಿಮಾನಿಗಳಲ್ಲೂ ಅಚ್ಚರಿ ಮೂಡಿಸಿದೆ. ತನಿಖೆ ನಡೆದರಷ್ಟೇ ಸತ್ಯಾಸತ್ಯತೆ ತಿಳಿಯಲಿದೆ.

ಇದನ್ನೂ ಓದಿ: ಅಪ್ಪನ ಮೃತದೇಹದ ಮೇಲೆ ಕೂತು ಕಂದಮ್ಮ ಕಣ್ಣೀರು.. ಚಾಕೊಲೇಟ್ ಇದೆ ಎಂದಾಗ ಪಪ್ಪ ಬೇಕು ಎಂದ ಪಾಪು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment