/newsfirstlive-kannada/media/post_attachments/wp-content/uploads/2024/12/LANKA-10.jpg)
ಲಂಕಾ ಟಿ10 ಸೂಪರ್ ಲೀಗ್ ಟೂರ್ನಿಯಲ್ಲಿ ಮೋಸದಾಟ ಬೆಳಕಿಗೆ ಬಂದಿದೆ. ‘ಮ್ಯಾಚ್ ಫಿಕ್ಸಿಂಗ್’ ಆರೋಪದ ಮೇಲೆ ಗಾಲೆ ಮಾರ್ವೆಲ್ಸ್ ತಂಡದ ಮಾಲೀಕ ಪ್ರೇಮ್ ಠಾಕೂರ್ನನ್ನು ಬಂಧಿಸಲಾಗಿದೆ.
ಪಂದ್ಯಾವಳಿ ಆರಂಭವಾದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಇದರಿಂದ ಟೂರ್ನಿಯ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಗಳು ಎದ್ದಿವೆ. ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಹೋಟೆಲ್‌ನಲ್ಲಿ ಅವರನ್ನು ಬಂಧಿಸಲಾಗಿದೆ. ಕೊಲಂಬೊ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 16 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಇದನ್ನೂ ಓದಿ:ಬಿಗ್ಬಾಸ್ ಇತಿಹಾಸದಲ್ಲೇ ಅತೀ ದೊಡ್ಡ ರೂಲ್ಸ್ ಬ್ರೇಕ್.. ನಿಯಮಗಳಿಗೆ ಕಿಮ್ಮತ್ತು ಕೊಡದ ಚೈತ್ರ, ತ್ರಿವಿಕ್ರಂ
ವರದಿಗಳ ಪ್ರಕಾರ.. ಶ್ರೀಲಂಕಾದ 2019ರ ಕ್ರೀಡಾ ಅಪರಾಧ ತಡೆ ಕಾಯ್ದೆಯಡಿ ಭಾರತೀಯ ಪ್ರಜೆ ಪ್ರೇಮ್ ಅವರನ್ನು ಬಂಧಿಸಲಾಗಿದೆ. ಕ್ರೀಡೆಗೆ ಸಂಬಂಧಿಸಿದ ಮ್ಯಾಚ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರವನ್ನು ತಡೆಯಲು ಕಾನೂನು ತರಲಾಗಿದೆ. ಪ್ರೇಮ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆಫರ್ ಮಾಡಿದ್ದಾರೆ ಎಂದು ವಿದೇಶಿ ಆಟಗಾರ ಆರೋಪದ ಮೇಲೆ ಬಂಧಿಸಲಾಗಿದೆ.
ಏನಿದು ಲಂಕಾ ಟಿ10?
ಲಂಕಾ T10 ಸೂಪರ್ ಲೀಗ್ ಶ್ರೀಲಂಕಾದ ಮೊದಲ T10 ಫ್ರಾಂಚೈಸಿ ಪಂದ್ಯಾವಳಿ. ಇನೋವೇಟಿವ್ ಪ್ರೊಡಕ್ಷನ್ ಗ್ರೂಪ್, T10 ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಮತ್ತು T10 ಗ್ಲೋಬಲ್ ಸ್ಪೋರ್ಟ್ಸ್ ಇದನ್ನು ಆಯೋಜಿಸಿವೆ.
ಇದನ್ನೂ ಓದಿ:ಜೈಲಿಂದ ಬರ್ತಿದ್ದಂತೆ ಅಲ್ಲು ಅರ್ಜುನ್ ಮನೆಗೆ ವಿಜಯ್ ದೇವರಕೊಂಡ ದೌಡು; ಯಾರೆಲ್ಲಾ ಬಂದಿದ್ರು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್