Advertisment

India vs England ಮ್ಯಾಚ್​ಗೆ ಮಳೆಯ ಆತಂಕ.. ಮಳೆರಾಯ ಬಂದರೆ ಪಂದ್ಯದ ರೂಲ್ಸ್ ಏನು ಹೇಳುತ್ತೆ..?

author-image
Ganesh
Updated On
India vs England ಮ್ಯಾಚ್​ಗೆ ಮಳೆಯ ಆತಂಕ.. ಮಳೆರಾಯ ಬಂದರೆ ಪಂದ್ಯದ ರೂಲ್ಸ್ ಏನು ಹೇಳುತ್ತೆ..?
Advertisment
  • ರಾತ್ರಿ 8 ಗಂಟೆಯಿಂದ 2ನೇ ಸೆಮಿ ಫೈನಲ್ ಪಂದ್ಯ
  • ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಸೂಪರ್ ಮ್ಯಾಚ್
  • ಗೆದ್ದವರು ಜೂನ್ 29ರಂದು ದಕ್ಷಿಣ ಆಫ್ರಿಕಾ ಜೊತೆ ಫೈಟ್

ಟಿ20 ವಿಶ್ವಕಪ್​​​ನ 2ನೇ ಸೆಮಿ ಫೈನಲ್​​ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಇಂದು ರಾತ್ರಿ ಸೆಣಸಾಟ ನಡೆಸುತ್ತಿವೆ. ಗಯಾನದಲ್ಲಿ ನಡೆಯುವ ಹೈವೋಲ್ಟೇಜ್​​ ಪಂದ್ಯಕ್ಕೆ ಮಳೆರಾಯನ ಆತಂಕ ಎದುರಾಗಿದೆ. ಮಳೆ ಬಂದು ಪಂದ್ಯವೇ ರದ್ದಾದರೂ ಅಚ್ಚರಿ ಇಲ್ಲ ಎನ್ನುತ್ತಿವೆ ವರದಿಗಳು.

Advertisment

ಮಳೆಯ ಆತಂಕ..
ಇಂದು ರಾತ್ರಿ ಭಾರತವು ಗಯಾನಾದಲ್ಲಿರುವ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆದರೆ ಮಳೆಯ ಆತಂಕ ಹಿನ್ನೆಲೆಯಲ್ಲಿ ಪಂದ್ಯಗಳ ಗತಿ ಏನಾಗಲಿದೆ ಎಂಬ ಆತಂಕ ಕ್ರಿಕೆಟ್ ಅಭಿಮಾನಿಗಳನ್ನು ಕಾಡಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ಯಾವುದೇ ಮೀಸಲು ದಿನ ಇಟ್ಟಿಲ್ಲ. ಯಾಕೆಂದರೆ ಫೈನಲ್ ಪಂದ್ಯವು ಮರುದಿನ ಅಂದರೆ ಜೂನ್ 29ರ ಸಂಜೆ ನಡೆಯಲಿದೆ.

ಇದನ್ನೂ ಓದಿ:ಇಂಗ್ಲೆಂಡ್, ಅಫ್ಘಾನಿಸ್ತಾನ್ ಯಾವುದೂ ಅಲ್ಲ.. ಈ ತಂಡ ವಿಶ್ವಕಪ್ ಗೆಲ್ಲುತ್ತೆ ಎಂದ ಮಾಜಿ ಕ್ರಿಕೆಟಿಗ

ಏನಾಗುತ್ತದೆ..?

  • ಮೀಸಲು ದಿನ ಇಲ್ಲದ ಕಾರಣ 250 ನಿಮಿಷಗಳನ್ನು ಹೆಚ್ಚುವರಿಯಾಗಿ ಇಡಲಾಗಿದೆ
  • ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯುಂಟಾದರೆ ಕನಿಷ್ಠ 5 ಓವರ್‌ಗಳ ಪಂದ್ಯ
  • ಅದೂ ಸಾಧ್ಯವಾಗದಿದ್ದಾಗ ಪಂದ್ಯ ರದ್ದು ಮಾಡಲಾಗುತ್ತದೆ, ಫಲಿತಾಂಶ ಘೋಷಣೆ
  • ಗುಂಪಿನಲ್ಲಿರುವ ಅಗ್ರ ತಂಡವು ಫೈನಲ್ ಪ್ರವೇಶ ಮಾಡುತ್ತದೆ
  • ಪಾಯಿಂಟ್ಸ್​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಫೈನಲ್ ಪ್ರವೇಶ ಮಾಡಲಿದೆ
  • ಒಂದು ವೇಳೆ ಫೈನಲ್​ನಲ್ಲೂ ಪಂದ್ಯ ನಡೆಯದಿದ್ದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.
Advertisment

ಇದನ್ನೂ ಓದಿ:IND vs ENG ಸೆಮಿಫೈನಲ್ ಪಂದ್ಯ ಕ್ಯಾನ್ಸಲ್..? ವೆದರ್​​ ರಿಪೋರ್ಟ್​​ನಲ್ಲಿ ಶಾಕಿಂಗ್ ಮಾಹಿತಿ..!

ಇದನ್ನೂ ಓದಿ:ಈ ವಿಶ್ವಕಪ್​​ನಲ್ಲಿ ಇಂಗ್ಲೆಂಡ್​ ಜೊತೆಯಿದೆ ​​ಅದೃಷ್ಟದ ದೇವತೆ.. ‘ನಮ್ಗೆ ತಿರುಮಂತ್ರ ಗೊತ್ತು’ ಎಂದ ರೋಹಿತ್ ಪಡೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment