2006ರಲ್ಲಿ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ !ಜೀವ ಕಳೆದುಕೊಳ್ಳವಂತದ್ದು ಗುರುಗೆ ಆಗಿದ್ದೇನು?

author-image
Gopal Kulkarni
Updated On
52 ವರ್ಷ, 5 ಸಿನಿಮಾ.. ರಿಯಲಿಸ್ಟಿಕ್​​​ ಡೈರೆಕ್ಟರ್​ ಗುರುಪ್ರಸಾದ್​ಗೆ ಏನಾಯ್ತು? ಇಂಥಾ ನಿರ್ಣಯ ಯಾಕೆ?
Advertisment
  • ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಇಂತಹ ನಿರ್ಧಾರಕ್ಕೆ ಬಂದಿದ್ದೇಕೆ?
  • 2006ರಲ್ಲಿ ಮಠ ಸಿನಿಮಾ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು
  • ಒಟ್ಟು ಐದು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಗುರುಪ್ರಸಾದ್​

ಮಠ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮ*ಹತ್ಯೆ ಮಾಡಿಕೊಂಡಿರುವ ಸುದ್ದಿ ಈಗ ಕನ್ನಡ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ಮಠ ಸಿನಿಮಾ ಮೂಲಕ ದೊಡ್ಡ ಖ್ಯಾತಿ ಗಳಿಸಿದ್ದ, ವಿಶೇಷ ಸಂಭಾಷಣೆಯ ಬರೆಯುವಲ್ಲಿ ಗುರುತಿಸಿಕೊಂಡಿದ್ದ ಗುರು ಪ್ರಸಾದ್ 2006ರ ರಲ್ಲಿ ಮಠ ಸಿನಿಮಾ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ:Breaking: ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್​​ ಆತ್ಮಹ*ತ್ಯೆ.. ಕೊಳೆತ ಸ್ಥಿತಿಯಲ್ಲಿ ಮೃ*ತದೇಹ ಪತ್ತೆ

ಮಠ ಚಿತ್ರದಲ್ಲಿ ನಟನೆಯನ್ನು ಮಾಡಿದ್ದ ಗುರುಪ್ರಸಾದ್​ ಒಟ್ಟು ಐದು ಕನ್ನಡ ಸಿನಿಮಾಗಳನ್ನು ನಿರ್ದೇಶಸಿದ್ದಾರೆ. ಗುರು ಪ್ರಸಾದ್ ಅವರ 6ನೇ ಸಿನಿಮಾ ಆದೆಮ್ಮಾ ಶೂಟಿಂಗ್ ಕೂಡ ನರೆಯುತ್ತಿತ್ತು. ಇದರ ಮಧ್ಯೆಯೇ ಗುರುಪ್ರಸಾದ್​ ಇಹಲೋಕವನ್ನು ತ್ಯಜಿಸಿದ್ದಾರೆ. ಆತ್ಮ*ಹತ್ಯೆ ಮಾಡಿಕೊಳ್ಳುವಂತ ಘಟನೆ ಅವರ ಬದುಕಲ್ಲಿ ಏನು ನಡೆದಿತ್ತು ಎಂಬುದು ಇನ್ನೂ ಕೂಡ ತಿಳಿದು ಬಂದಿಲ್ಲ. ಮಠ, ಎದ್ದೇಳು ಮಂಜುನಾಥ್​, ಡೈರೆಕ್ಟರ್ ಸ್ಪೇಷಲ್, ಎರಡನೇ ಸಲ, ರಂಗನಾಯಕ ಸೇರಿದಂತೆ ಒಟ್ಟು ಐದು ಸಿನಿಮಾಗಳನ್ನು ಗುರುಪ್ರಸಾದ್ ತಾವೇ ಸ್ವತಃ ಕಥೆ ಬರೆದು ನಿರ್ದೇಶಿಸಿದ್ದರು.

ಕನ್ನಡ ಸಿನಿಮಾ ರಂಗ ಕಂಡ ಅತ್ಯಂತ ಸೃಜನಶೀಲ ನಿರ್ದೇಶಕರ ಸಾಲಿನಲ್ಲಿ ಗುರುಪ್ರಸಾದ್​ ಗುರುತಿಸಿಕೊಂಡಿದ್ದರು. ಈಗ ಏಕಾಏಕಿ ಇಂತಹ ನಿರ್ಧಾರಕ್ಕೆ ಬಂದು ಜೀವ ಕಳೆದುಕೊಂಡಿದ್ದು ಇಡೀ ಚಿತ್ರರಂಗವೇ ಶಾಕ್​ಗೆ ಒಳಗಾಗಿದೆ. ಅಭಿಮಾನಿಗಳು ಹೆಚ್ಚು ಕಡಿಮೆ ಬೆಚ್ಚಿ ಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment