/newsfirstlive-kannada/media/post_attachments/wp-content/uploads/2024/10/IND-vs-AUS.jpg)
ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಮುಗಿಯುತ್ತಿದ್ದಂತೆ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ಮಧ್ಯೆ ಬಾರ್ಡರ್ ಗವಾಸ್ಕರ್ ಸರಣಿ ಶುರುವಾಗಲಿದೆ. ನವೆಂಬರ್‌ನಲ್ಲಿ ನಡೆಯಲಿರೋ ಈ ಮಹತ್ವದ ಸರಣಿಗೆ ಈಗಾಗಲೇ ಟೀಮ್ ಇಂಡಿಯಾ ಪ್ರಕಟವಾಗಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದ ಈ ಸರಣಿ ಭಾರೀ ಮಹತ್ವ ಪಡೆದುಕೊಂಡಿದೆ. ಯಾರು ಈ ಸರಣಿಯಲ್ಲಿ ಗೆಲ್ಲುತ್ತಾರೋ ಅವರು ನೇರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶ ಮಾಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಹಾಗಾಗಿ ಹೇಗಾದ್ರೂ ಮಾಡಿ ಈ ಸೀರೀಸ್ ಗೆಲ್ಲಲೇಬೇಕು ಎಂದು ಟೀಮ್ ಇಂಡಿಯಾ ಜಿದ್ದಿಗೆ ಬಿದ್ದಿದೆ. ಇದರ ಮಧ್ಯೆ ಆಸ್ಟ್ರೇಲಿಯಾಗೆ ಆಘಾತದ ಸುದ್ದಿ ಒಂದಿದೆ.
ಆಸ್ಟ್ರೇಲಿಯಾ ತಂಡದ ಸ್ಟಾರ್ ಪ್ಲೇಯರ್ ಹಠಾತ್ ನಿವೃತ್ತಿ ಘೋಷಿಸಿದ್ದಾರೆ. ಯಾವುದೇ ಸರಣಿ ಇರಲಿ ಆಸೀಸ್ ತಂಡದ ಗೆಲ್ಲುವಲ್ಲಿ ಮ್ಯಾಥ್ಯೂ ವೇಡ್ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಈಗ ವೇಡ್ ನಿವೃತ್ತಿ ನಿರ್ಧಾರ ನಿಜಕ್ಕೂ ಅಭಿಮಾನಿಗಳಿಗೆ ಶಾಕ್ ನೀಡಿದೆ. ಅದರಲ್ಲೂ ಬಾರ್ಡರ್ ಗವಾಸ್ಕರ್ ಟ್ರೋಫಿ ಹೊತ್ತಲ್ಲೇ ನಿವೃತ್ತಿ ಘೋಷಿಸಿರುವುದು ಆಸ್ಟ್ರೇಲಿಯಾಗೆ ಬಿಗ್ ಶಾಕ್ ಆಗಿದೆ.
ವೇಡ್ ಕ್ರಿಕೆಟ್ ಕರಿಯರ್ ಹೇಗಿತ್ತು?
ಆಸ್ಟ್ರೇಲಿಯಾ ಪರ ಮ್ಯಾಥ್ಯೂ ವೇಡ್ 2011ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ತಾನು ಆಸೀಸ್ ಪರ ಆಡಿರೋ 92 ಟಿ20 ಪಂದ್ಯಗಳಲ್ಲಿ ವೇಡ್ 134.15 ಸ್ಟ್ರೈಕ್ ರೇಟ್‌ನಲ್ಲಿ 1202 ರನ್ ಗಳಿಸಿದ್ದಾರೆ. ಈ ಫಾರ್ಮೆಟ್‌ನಲ್ಲಿ 3 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇವರು 36 ಟೆಸ್ಟ್ ಪಂದ್ಯ ಆಡಿದ್ದು 29.87ರ ಸರಾಸರಿಯಲ್ಲಿ 1613 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 4 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ. 97 ಏಕದಿನ ಪಂದ್ಯ ಆಡಿರೋ ಮ್ಯಾಥ್ಯೂ ವೇಡ್ 1867 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಜತೆಗೆ 11 ಅರ್ಧಶತಕಗಳು ಸೇರಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ