/newsfirstlive-kannada/media/post_attachments/wp-content/uploads/2025/06/odisha-old-age-matrimonial-1.jpg)
ಪ್ರೀತಿಗೆ ವಯಸ್ಸಿಲ್ಲ. ವಯಸ್ಸಿನ ಅಂಕಿ-ಸಂಖ್ಯೆಗಳು ಕೇವಲ ಸಂಖ್ಯೆಗಳು ಅಷ್ಟೇ. ಭಾರತದಲ್ಲಿ 50ನೇ ವಯಸ್ಸಿನಲ್ಲೂ 2ನೇ ಮದುವೆಯಾಗೋ ಅವಕಾಶವನ್ನ ಮ್ಯಾಟ್ರಿಮೋನಿಯಲ್ ಒದಗಿಸಿದೆ. ಇಳಿ ವಯಸ್ಸಿನ ಈ ಜೋಡಿಗಳ ಮದುವೆ ಸಂಭ್ರಮ ಹದಿಹರೆಯದ ಯುವಜೋಡಿಗಳು ನಾಚಿ ನೀರಾಗುವಂತೆ ಮಾಡಿದೆ.
ಒಡಿಶಾದ ಮ್ಯಾಟ್ರಿಮೋನಿಯಲ್ ಅಪರೂಪದ ಈ ಮದುವೆಗೆ ವೇದಿಕೆ ಒದಗಿಸಿದೆ. 50 ವರ್ಷ ದಾಟಿದವರಿಗೆ ಬಾಳ ಸಂಗಾತಿ ಹುಡುಕಲು ನೆರವಾಗಿದ್ದು, ರಿಜಿಸ್ಟರ್ ಮದುವೆ ಆಗುವ ಅವಕಾಶ ನೀಡಿದೆ.
ಈ ರೀತಿಯ 50ರ 2ನೇ ಮದುವೆ ನಡೆದ ಮೇಲೆ ಆನ್‌ಲೈನ್‌ನಲ್ಲಿ ಇಂತಹದೇ ಪ್ಲಾಟ್‌ಫಾರ್ಮ್‌ಗಳಿಗೆ ಹೆಚ್ಚು ಬೇಡಿಕೆ ಬಂದಿದೆ. 50 ವರ್ಷ ದಾಟಿದ ಪುರುಷ, ಮಹಿಳೆಯರು ತಮ್ಮ ಸಂಗಾತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇವರಿಗೆ ಮ್ಯಾಟ್ರಿಮೋನಿಯಲ್ ಪ್ಲಾಟ್‌ಫಾರಂಗಳು ಸಹಾಯ ಮಾಡುತ್ತಿವೆ.
ಇದನ್ನೂ ಓದಿ: ಯಾರಿಲ್ಲ ಮನೆಗೆ ಬಾ.. ರೂಂಗೆ ಹೋಗ್ತಿದ್ದಂತೆ ಹಿಗ್ಗಾಮುಗ್ಗ ಥಳಿತ; ಮೈಸೂರಲ್ಲಿ ಖತರ್ನಾಕ್ ಹನಿಟ್ರ್ಯಾಪ್
ಇತ್ತೀಚೆಗೆ 52 ವರ್ಷದ ಉದ್ಯಮಿ ತನ್ನ ಪತ್ನಿ ಸಾವಿನ ಬಳಿಕ ಮ್ಯಾಟ್ರಿಮೋನಿ ಮೂಲಕ ಪ್ರೇಯಸಿಯನ್ನು ಕಂಡುಕೊಂಡಿದ್ದಾರೆ. ಕಳೆದ 2 ವರ್ಷಗಳಲ್ಲಿ ಮ್ಯಾಟ್ರಿಮೋನಿಯಾಗಳಿಗೆ ಶೇಕಡಾ 40ರಷ್ಟು ಹಿರಿಯ ನಾಗರಿಕರ ಪ್ರೊಫೈಲ್‌ಗಳು ಅಪ್ಡೇಟ್ ಆಗುತ್ತಿವೆ. 40 ವರ್ಷ ವಯಸ್ಸು ದಾಟಿದವರು ತಮ್ಮ ಲೈಫ್ ಪಾರ್ಟನರ್‌ಗಳನ್ನ ಹುಡುಕಾಡುತ್ತಿದ್ದಾರೆ.
ಕೆಲ ಮ್ಯಾಟ್ರಿಮೋನಿ ಕಂಪನಿಗಳ ಮಾಹಿತಿ ಪ್ರಕಾರ ಪಾಶ್ಚಿಮಾತ್ಯ ದೇಶಗಳಂತೆ ಭಾರತದಲ್ಲೂ ಈ ರೀತಿಯ ಸಂಪ್ರದಾಯ ಆರಂಭವಾಗಿದೆ. ಹಿರಿಯ ನಾಗರಿಕರು ಅರಳು-ಮರಳು ಅನ್ನದೇ ತಮ್ಮ ಇಳಿ ವಯಸ್ಸಿನಲ್ಲೂ ತಮ್ಮ ಬಾಳ ಸಂಗಾತಿಯನ್ನು ಒಪ್ಪಿಕೊಳ್ಳಲು ಬಯಸುತ್ತಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ