/newsfirstlive-kannada/media/post_attachments/wp-content/uploads/2024/10/INDVSNZ_ROHIT.jpg)
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಭಾರೀ ಮುಖಭಂಗ ಅನುಭವಿಸಿದೆ. ಕೇವಲ 46 ರನ್​ಗಳಿಗೆ ಆಲೌಟ್ ಆಗಿ ಕೆಟ್ಟ ದಾಖಲೆ ಬರೆದಿದೆ. ಇದರ ಜೊತೆಗೆ ಒಂದೇ ಇನ್ನಿಂಗ್ಸ್​ನಲ್ಲಿ ಐವರು ಸೊನ್ನೆ ಸುತ್ತಿರುವುದು ಕಳಪೆ ಫಾರ್ಮ್ ಅನ್ನು ತೋರಿಸುತ್ತದೆ. ಅಲ್ಲದೇ ನ್ಯೂಜಿಲೆಂಡ್​ನ ಬೌಲರ್ ಮ್ಯಾಟ್ ಹೆನ್ರಿ, ಭಾರತದ ಮೂವರು ಬ್ಯಾಟ್ಸ್​ಮನ್​ಗಳನ್ನ ‘0’ ಗೆ ಔಟ್ ಮಾಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದುಕೊಂಡ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ರೋಹಿತ್ ನಿರ್ಧಾರ ತಪ್ಪಾಗಿದೆ ಎಂದು ಪಂದ್ಯ ಆರಂಭವಾದ ಕೆಲವೇ ಕ್ಷಣಗಳಲ್ಲಿ ಗೊತ್ತಾಯಿತು. ಏಕೆಂದರೆ ನ್ಯೂಜಿಲೆಂಡ್​ ಮಾರಕ ಬೌಲಿಂಗ್​ ಮುಂದೆ ಬ್ಯಾಟ್ ಬೀಸಲು ಭಾರತದ ಆಟಗಾರರು ಚಡಪಡಿಸಿದರು. ಇದಕ್ಕೆ ಮುಖ್ಯ ಕಾರಣ ಎಂದರೆ ಬೆಂಗಳೂರಿನಲ್ಲಿ ನಿರಂತವಾಗಿ ಸುರಿದ ಮಳೆ ಎಂದು ಹೇಳಬಹುದು. ಆದರೆ ಟೆಸ್ಟ್​ನಲ್ಲಿ ಕೇವಲ 46 ರನ್​ಗಳಿಗೆ ಆಲೌಟ್ ಆಗಿರುವುದು ಎಲ್ಲರಿಗೂ ನುಂಗಲಾರದ ತುತ್ತಾಗಿದೆ.
/newsfirstlive-kannada/media/post_attachments/wp-content/uploads/2024/10/INDVSNZ.jpg)
ರೋಹಿತ್ ಶರ್ಮಾ ಪಡೆಗೆ ಮಾರಕವಾಗಿದ್ದೇ ಮ್ಯಾಟ್ ಹೆನ್ರಿ ಬೌಲಿಂಗ್. ಪಂದ್ಯದಲ್ಲಿ ಮಾರಕ ಬೌಲಿಂಗ್ ಮಾಡಿದ ಹೆನ್ರಿ ಒಟ್ಟು 5 ವಿಕೆಟ್​ಗಳನ್ನ ಪಡೆದು ಸಂಭ್ರಮಿಸಿದರು. ಅಲ್ಲದೇ ಮೂವರು ಭಾರತದ ಬ್ಯಾಟ್ಸ್​ಮನ್​ಗಳನ್ನ ‘0’ ಕ್ಕೆ ಔಟ್ ಮಾಡಿದರು. ಸರ್ಫರಾಜ್ ಖಾನ್, ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಅವರನ್ನು ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ಮ್ಯಾಟ್ ಹೆನ್ರಿ ಕಳುಹಿಸಿದರು.
ಇದನ್ನೂ ಓದಿ: ಗ್ರೂಪ್​ ಸಿ ಹುದ್ದೆಗಳಿಗೆ ಮತ್ತೆ ಅರ್ಜಿ ಆಹ್ವಾನಿಸಿದ KPSC.. ಯಾರು ಯಾರು ಅಪ್ಲೇ ಮಾಡಬಹುದು?
ಮ್ಯಾಟ್ ಹೆನ್ರಿ ಬಿಟ್ಟರೇ ರೋಹಿತ್ ಪಡೆಗೆ ಕಾಡಿದ್ದು ಎಂದರೆ ವಿಲಿಯಂ ಒರೂರ್ಕೆ (William ORourke). ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್​ರನ್ನ ವಿಲಿಯಂ ಡಕೌಟ್ ಮಾಡಿದರು. ಭಾರತದ ಇಬ್ಬರು ಸ್ಟಾರ್ ಬ್ಯಾಟ್ಸ್​ಮನ್​ಗಳು ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿದರು. ಇನ್ನು ಈ ಪಂದ್ಯದಲ್ಲಿ ಒಟ್ಟು ಐವರು ಭಾರತದ ಬ್ಯಾಟ್ಸ್​ಮನ್​ಗಳು ಡಕೌಟ್ ಆಗಿದ್ದಾರೆ. ಇದರಿಂದ ಭಾರತ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ನ್ಯೂಜಿಲೆಂಡ್​ನ ಈ ಇಬ್ಬರ ಮಾರಕ ಬೌಲಿಂಗ್​ಗೆ ಭಾರತ 31.2 ಓವರ್​​ಗಳಲ್ಲಿ ಕೇವಲ 46 ರನ್​ಗಳಿಗೆ ಆಲೌಟ್ ಆಯಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us