/newsfirstlive-kannada/media/post_attachments/wp-content/uploads/2025/03/KRUNAL-1.jpg)
ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ RCB ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದೆ. ದೊಡ್ಡ ಸ್ಕೋರ್ ಕಡೆಗೆ ಸಾಗುತ್ತಿದ್ದ ಕೋಲ್ಕತ್ತಾ ತಂಡವನ್ನು 180 ಕ್ಕಿಂತ ಕಡಿಮೆ ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ನಂತರ ಕೇವಲ ಮೂರು ವಿಕೆಟ್ ಕಳೆದುಕೊಂಡು ಕೆಕೆಆರ್ ನೀಡಿದ್ದ ಗುರಿಯನ್ನು ಮುಟ್ಟಿತು. ಈ ಬಾರಿ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಬಲಿಷ್ಠ ತಂಡಗಳಲ್ಲಿ ಆರ್​ಸಿಬಿ ಕೂಡ ಒಂದಾಗಿದೆ.
ಇದನ್ನು ಗಮನಿಸಿರುವ ಆಸ್ಟ್ರೇಲಿಯಾದ ಮಾಜಿ ಶ್ರೇಷ್ಠ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್, ಆರ್​ಸಿಬಿಯನ್ನು ಹೊಗಳಿದ್ದಾರೆ. ಈ ಬಾರಿ ಆರ್​​​ಸಿಬಿ ತಂಡದಲ್ಲಿ ಏನೋ ವಿಶೇಷತೆ ಇದೆ. ಫ್ರಾಂಚೈಸಿ ಕೃನಾಲ್ ಪಾಂಡ್ಯರನ್ನು ಆಯ್ಕೆ ಮಾಡಿ ದೊಡ್ಡ ಲಾಭ ಪಡೆದಿದೆ. ಹೊಸ ನಾಯಕನಾಗಿ ರಜತ್ ಪಟಿದಾರ್​ಗೆ ಬಲವಾದ ಮತ್ತು ಮಹತ್ವದ ಗೆಲುವು ಸಿಕ್ಕಿದೆ. ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿರೋದು ಖಂಡಿತ ಸಹಾಯ ಆಗಲಿದೆ. ಈ ಬಾರಿ ಆರ್​ಸಿಬಿ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಅಂತಾ ಹೇಡನ್ ಹೇಳಿದ್ದಾರೆ.
ಇದನ್ನೂ ಓದಿ: 4, 4, 4, 6, 6, 6, 6, 6; ಶ್ರೇಯಸ್ ಅಯ್ಯರ್ ಸಿಡಿಲಬ್ಬರದ ಅರ್ಧ ಶತಕ ಹೇಗಿತ್ತು?
/newsfirstlive-kannada/media/post_attachments/wp-content/uploads/2025/03/KRUNAL.jpg)
ಆರ್​ಸಿಬಿ ಬೌಲಿಂಗ್​ನಲ್ಲಿ ಸ್ಟ್ರಾಂಗ್ ಆಗಿದೆ. ಕಳೆದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಮಧ್ಯಮ ಓವರ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರೆ, ಜೋಶ್ ಹೇಜಲ್​​ವುಡ್ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದರು. ಇದನ್ನು ನೋಡಿದರೆ ತಂಡದಲ್ಲಿ ಏನೋ ವಿಶೇಷತೆ ಇದೆ ಅನಿಸುತ್ತದೆ. ಚೆಂಡಿನ ವೇಗವನ್ನು ಬದಲಾಯಿಸುವ ಮತ್ತು ಸ್ಟಂಪ್‌ಗಳ ಮೇಲೆ ದಾಳಿ ಮಾಡುವ ಕೃನಾಲ್ ಪಾಂಡ್ಯ ಸಾಮರ್ಥ್ಯ ಉಪಯುಕ್ತವಾಗಿದೆ ಎಂದಿದ್ದಾರೆ.
/newsfirstlive-kannada/media/post_attachments/wp-content/uploads/2025/03/RCB-3-1.jpg)
ಕೃನಾಲ್ ಪಾಂಡ್ಯ ಒಬ್ಬ ಮಹಾನ್ ಆಟಗಾರ. ಬುದ್ಧಿವಂತ ಬೌಲರ್. ವೇಗವನ್ನು ಬದಲಾಯಿಸುವ ಮತ್ತು ವಿಕೆಟ್ ಅನ್ನು ಗುರಿಯಾಗಿಸುವ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದು ಬಣ್ಣಿಸಿದ್ದಾರೆ. ಕ್ರುನಾಲ್ ಪಾಂಡ್ಯ ನಾಲ್ಕು ಓವರ್‌ಗಳಲ್ಲಿ 29 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆರ್​ಸಿಬಿಯ ಮುಂದಿನ ಪಂದ್ಯ ಸಿಎಸ್​ಕೆ ಎದುರು ನಡೆಯಲಿದೆ. ಮಾರ್ಚ್ 28 ರಂದು ಚೆಪಾಕ್‌ನಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ: ಗುಜರಾತ್ ಟೈಟನ್ಸ್​ಗೆ ವಿರೋಚಿತ ಸೋಲು; ಪಂಜಾಬ್ ಗೆಲುವಿಗೆ ಇಂಪ್ಯಾಕ್ಟ್ ಮಾಡಿದ ಕನ್ನಡಿಗ ವೈಶಾಕ್
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us