ಇಂದು ಮೌನಿ ಅಮಾವಾಸ್ಯೆ; ಮಹಾ ಕುಂಭಮೇಳದಲ್ಲಿ ಅಮೃತಸ್ನಾನಕ್ಕಾಗಿ ಕೋಟ್ಯಂತರ ಭಕ್ತರು: ಭದ್ರತೆ ಹೇಗಿರುತ್ತೆ?

author-image
Veena Gangani
Updated On
ಇಂದು ಮೌನಿ ಅಮಾವಾಸ್ಯೆ; ಮಹಾ ಕುಂಭಮೇಳದಲ್ಲಿ ಅಮೃತಸ್ನಾನಕ್ಕಾಗಿ ಕೋಟ್ಯಂತರ ಭಕ್ತರು: ಭದ್ರತೆ ಹೇಗಿರುತ್ತೆ?
Advertisment
  • ಮಹಾಕುಂಭಮೇಳದಲ್ಲಿ ಅಮೃತಸ್ನಾನಕ್ಕೆ ಭಕ್ತರ ಕಾತರ
  • ಪ್ರಯಾಗರಾಜ್​ನಲ್ಲಿ ಬೀಡುಬಿಟ್ಟ ಕೋಟಿ ಕೋಟಿ ಭಕ್ತರು
  • ದೇಶದ ದಶ ದಿಕ್ಕುಗಳಿಂದ ವಿಶೇಷ ರೈಲುಗಳ ಸಂಚಾರ

ಇಂದು ಮಹಾಸುದಿನ.. ಮಹಾಕುಂಭಮೇಳದಲ್ಲಿ ಶಾಹಿಸ್ನಾನದಿಂದ ಮೋಕ್ಷಪ್ರಾಪ್ತಿ ಆಗುತ್ತದೆ ಅನ್ನೋದು ಮೂಲ ನಂಬಿಕೆ. ಇಂದು ಮೌನಿ ಅಮಾವಾಸ್ಯೆ ಇದ್ದು, ತ್ರಿವೇಣಿಸಂಗಮದಲ್ಲಿ ಅಮೃತಸ್ನಾನ ಮಾಡಲು ಅಸಂಖ್ಯ ಭಕ್ತಗಣ ಕಾತರದಿಂದ ಕಾಯ್ತಿದೆ. ತ್ರಿವೇಣಿ ಸಂಗಮದಲ್ಲಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇನ್ನು ಪ್ರಯಾಗ್​ರಾಜ್​ಗೆ ಹೋಗುವ ಭಕ್ತರಿಗೆ ಕರ್ನಾಟಕದಿಂದಲೂ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:VIDEO; ಪ್ರಯಾಗರಾಜ್​ಗೆ ಹೊರಟಿದ್ದ ವಿಶೇಷ ರೈಲಿಗೆ ಕಲ್ಲಿನಿಂದ ಹೊಡೆದ ಪ್ರಯಾಣಿಕ; ಕಾರಣವೇನು?

publive-image

ಮಾಘ ಮಾಸದಲ್ಲಿ ಮೌನಿ ಅಮವಾಸ್ಯೆಯನ್ನು ಪವಿತ್ರದಿನ ಎನ್ನಲಾಗಿದೆ. ಈ ದಿನ ಗಂಗಾನದಿಯ ನೀರು ಅಮೃತವಾಗಿ ಬದಲಾಗಲಿದ್ದು, ಪುಣ್ಯಸ್ನಾನ ಮಾಡಿದ್ರೆ ಮೋಕ್ಷಪ್ರಾಪ್ತಿ ಎಂಬ ನಂಬಿಕೆ ಇದೆ. ಹೀಗಾಗಿ ಇಂದು ಮಹಾಕುಂಭಮೇಳದಲ್ಲಿ ಎರಡನೇ ಅಮೃತಸ್ನಾನ ಮಾಡಲು ಅಸಂಖ್ಯ ಭಕ್ತಗಣ ಕಾತರಗೊಂಡಿದೆ. ಇಂದು ಮುಂಜಾನೆ 8ರಿಂದ 10 ಕೋಟಿ ಭಕ್ತರು ಸೇರುವ ನಿರೀಕ್ಷೆ ಇದ್ದು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

publive-image

ಇಂದು ಕೋಟಿ ಕೋಟಿ ಭಕ್ತರು ಬರುವ ಕಾರಣ ನಿಯಂತ್ರಣ ಕಷ್ಟಸಾಧ್ಯ, ಹೀಗಾಗಿ ತ್ರಿವೇಣಿ ಸಂಗಮದ ಸುತ್ತಲಿನ ರಸ್ತೆಗಳಲ್ಲಿ ಕಾರು, ಆಟೋ ಸಂಚಾರ ಬ್ಯಾನ್ ಮಾಡಲಾಗಿದೆ. ರೈಲು ನಿಲ್ದಾಣಗಳಿಂದ 5 ರಿಂದ 10 ಕಿ.ಮೀ​ ನಡೆದುಕೊಂಡೇ ಜನ ತ್ರಿವೇಣಿ ಸಂಗಮದತ್ತ ಹೋಗುತ್ತಿದ್ದಾರೆ. ಇಂದು ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ದೇಶದ ದಶ ದಿಕ್ಕುಗಳಿಂದ ಪ್ರತಿ ನಾಲ್ಕು ನಿಮಿಷಗಳಿಗೆ ಒಂದರಂತೆ ರೈಲುಗಳು ಪ್ರಯಾಗರಾಜ್​ಗೆ ತೆರಳಲಿವೆ. ರಾಜಧಾನಿ ಬೆಂಗಳೂರಿನಿಂದಲೂ ಪ್ರಯಾಗರಾಜ್​ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ವಿಮಾನ ಪ್ರಯಾಣ ಬಹಳ ದುಬಾರಿ ಕಾರಣ ರೈಲ್ವೇ ಇಲಾಖೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಇನ್ನು, ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರು ವಿಶ್ರಾಂತಿ ಪಡೆಯಲು ಜರ್ಮನ್ ಟೆಂಟ್ ಅಳವಡಿಸಲಾಗಿದೆ. ಮೌನಿ ಅಮಾವಾಸ್ಯೆ ಬಳಿಕವೂ ಪ್ರತಿದಿನ 150 ವಿಶೇಷ ರೈಲುಗಳ ಸಂಚಾರ ಇರಲಿದೆ.

publive-image

ಇಂದು ರೈಲ್ವೇ ಇಲಾಖೆಯಿಂದ 360 ರಿಂದ 400 ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಗ್​ರಾಜ್​​ನ 9 ರೈಲ್ವೇ ನಿಲ್ದಾಣಗಳಿಗೆ ರೈಲು ಸಂಚಾರ ಮಾಡಲಿದ್ದು, ಬೆಂಗಳೂರಿನಿಂದ ಪ್ರಯಾಗ್​ರಾಜ್​ಗೆ ಸ್ಲೀಪರ್ ಕ್ಲಾಸ್​ನಲ್ಲಿ 1 ಸಾವಿರ ರೂ. ಟಿಕೆಟ್ ದರ ಇದೆ. ಇನ್ನು 3 AC ಟಿಕೆಟ್​​​ಗೆ 2,200 ರೂ. ಇದ್ದು 2AC ಟಿಕೆಟ್​​ಗೆ 3,200 ರೂ. ಇದೆ. ಇಂದು ಪುಣ್ಯಸ್ನಾನ ಮಾಡಲು ದೇಶದ ವಿವಿಧೆಡೆಯಿಂದ ಈಗಾಗಲೇ ಪ್ರಯಾಗ್​ರಾಜ್​ಗೆ ಲಕ್ಷಾಂತರ ಮಂದಿ ಬಂದು ಬೀಡುಬಿಟ್ಟಿದ್ದಾರೆ. ಉಳಿದುಕೊಳ್ಳಲು ಟೆಂಟ್​ಗಳು ಸಿಗದೇ ಕೊರೆಯುವ ಚಳಿಯಲ್ಲಿ ಫುಟ್​ಪಾತ್​ಗಳಲ್ಲೇ ವಿಶ್ರಾಂತಿಗೆ ಮೊರೆ ಹೋಗ್ತಿದ್ದಾರೆ. ಮಹಾಕುಂಭಮೇಳದಲ್ಲಿ ಕರ್ನಾಟಕದ ಬಾಬಾಗಳು, ಸನ್ಯಾಸಿಗಳು, ಸಾಧು-ಸಂತರು, ನಾಗಾಸಾಧುಗಳು ಭಾಗಿಯಾಗಿದ್ದಾರೆ. ನೆಲಮಂಗಲದ ಶಿವಗಂಗೆ ಮೂಲದ ಧನಂಜಯಗಿರಿ ಮಹಾರಾಜ್ ಮಹಾಕುಂಭಮೇಳದಲ್ಲಿ ನಾಡಧ್ವಜ ಹಾರಿಸಿದ್ದಾರೆ. ಒಟ್ಟಾರೆ, ಮಹಾಕುಂಭಮೇಳದಲ್ಲಿ ಇದುವರೆಗೆ 14 ಕೋಟಿಗೂ ಅಧಿಕ ಯಾತ್ರಿಕರು ಪುಣ್ಯಸ್ನಾನ ಮಾಡಿದ್ದಾರೆ. ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಅಸಂಖ್ಯ ಭಕ್ತರು ಪುಣ್ನಸ್ನಾನ ಮಾಡಿ ಪುನೀತರಾಗಲು ಕಾತರರಾಗಿದ್ದಾರೆ.

ಪುಣ್ಯಸ್ನಾನಕ್ಕೆ ಸಮಯ ನಿಗದಿ 

ಈಗಾಗಲೇ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಲು ಸಮಯ ನಿಗದಿಯಾಗಿದೆ. ಮೊದಲಿಗೆ ಬೆಳಗ್ಗೆ 6.15 ರಿಂದ ಮಹಾನಿರ್ವಾಣಿ, ಅಟಲ್ ಅಖಾಡಗಳಿಗೆ 40 ನಿಮಿಷ ಸಮಯ ನೀಡಲಾಗಿದ್ದು, ಬಳಿಕ ನಿರಂಜನಿ, ಆನಂದ್ ಅಖಾಡಕ್ಕೆ ಬೆಳಗ್ಗೆ 7.05ರಿಂದ ಅಮೃತ ಸ್ನಾನಕ್ಕೆ ಅವಕಾಶ ನೀಡಲಾಗಿದೆ. ನಂತರ ಜುನಾ, ಪಂಚಾಗ್ನಿ, ಅವಾಹನ ಅಖಾಡಕ್ಕೆ ಬೆಳಗ್ಗೆ 8 ರಿಂದ ಅಮೃತ ಸ್ನಾನಕ್ಕೆ ಅವಕಾಶ ನೀಡಿದೆ. ಇದಾದ ಬೆನ್ನಲ್ಲೇ ನಿರ್ವಾಣಿ, ದಿಗಂಬರ, ನಿರ್ಮೋಹಿ, ನಯಾ ಪಂಚಾಯಿತಿ, ಬಡಾ ಪಂಚಾಯಿತಿ ಅಖಾಡಗಳಿಗೆ ಅಮೃತ ಸ್ನಾನಕ್ಕೆ ಅವಕಾಶ ನೀಡಿದೆ. ಕೊನೆಯದಾಗಿ ನಿರ್ಮಲ್ ಅಖಾಡಕ್ಕೆ ಮಧ್ಯಾಹ್ನ 3.40 ರಿಂದ 40 ನಿಮಿಷಗಳ ಕಾಲ ಅಮೃತ ಸ್ನಾನಕ್ಕೆ ಅವಕಾಶ ಕೊಟ್ಟಿದೆ. ಹೀಗೆ ಬೆಳಿಗ್ಗೆ 7.05 ರಿಂದ ಸಂಜೆ 4.20 ರವರೆಗೆ ಅಖಾಡಗಳಿಗೆ ಅಮೃತ ಸ್ನಾನಕ್ಕೆ ಸಮಯ ನೀಡಲಾಗದೆ. ಹೀಗಾಗಿ ಬೇರೆ ಬೇರೆ ಘಾಟ್​ಗಳಲ್ಲಿ ಜನ ಸಾಮಾನ್ಯರಿಗೆ ಅಮೃತ ಸ್ನಾನಕ್ಕೆ ಅವಕಾಶ ಕೊಟ್ಟಿದೆ. ಗಂಗಾ ನದಿಯ ತಟದ ಉದ್ದಕ್ಕೂ 25-30 ಹೊಸ ಘಾಟ್​ಗಳನ್ನು ನಿರ್ಮಾಣ ಮಾಡಲಾಗಿದೆ. ಎಲ್ಲ ಘಾಟ್​ಗಳಲ್ಲೂ ಭಕ್ತರಿಗೆ ಅಮೃತ ಸ್ನಾನಕ್ಕೆ ಅವಕಾಶವಿದೆ. ಇಂದು ಒಂದೇ ದಿ‌ನ ಬರೋಬ್ಬರಿ 8- 10 ಕೋಟಿ ಭಕ್ತರು ಅಮೃತ ಸ್ನಾನ ಮಾಡುವ ನಿರೀಕ್ಷೆ ಇದೆ. ನಿನ್ನೆ ಕೂಡ 4.64 ಕೋಟಿ ಜನರಿಂದ ತೀರ್ಥ ಸ್ನಾನ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment